ಬೆಂಗಳೂರು:ರಫ್ತು ವಹಿವಾಟಿಗೆ ಹೆಚ್ಚಿನ ಆದ್ಯತೆ ನೀಡಿದ ನೂತನ ಕೈಗಾರಿಕಾ ನೀತಿ ಶೀಘ್ರವೇ ಅಂತಿಮಗೊಳಿಸಿ, ಬಿಡುಗಡೆ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಮಾಹಿತಿ ನೀಡಿದರು.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಗಳಲ್ಲಿ ಮೊದಲ ನೂರು ದಿನಗಳ ಅವಧಿಯಲ್ಲಿ ಹಲವು ಹೆಜ್ಜೆ ಇರಿಸಲಾಗಿದೆ ಎಂದ ಅವರು, ಕೈಗೊಂಡ ಕ್ರಮಗಳು ಹಾಗೂ ನಿರ್ಧಾರಗಳನ್ನು ಒಳಗೊಂಡ ಕಿರು ಹೊತ್ತಗೆ ಬಿಡುಗಡೆ ಮಾಡಿದರು.
ಮುಂದಿನ ಐದು ವರ್ಷಗಳ ದಿಕ್ಸೂಚಿ, ರಾಜ್ಯದ ಭವಿಷ್ಯ ಉಜ್ವಲಗೊಳಿಸುವ ನೀಲನಕ್ಷೆ ಸದ್ಯಕ್ಕೆ ತಯಾರಾಗಿದೆ. ಸಿಎಂ ಸೂಚನೆಯಂತೆ ರಫ್ತು ಕ್ಷೇತ್ರಕ್ಕೆ ಒತ್ತು ನೀಡಿ, ಹೊಸ ಕೈಗಾರಿಕಾ ನೀತಿ ಕರಡು ಪ್ರಸ್ತಾವನೆ ಸಿದ್ಧಪಡಿಸಲು ತಜ್ಞರ ಸಮಿತಿಗೆ ಜವಾಬ್ದಾರಿ ಒಪ್ಪಿಸಲಾಗಿದೆ.
ವಿದ್ಯುತ್ ವಾಹನ, ಸರಕು ಸಾಗಣೆ ವಲಯಗಳು, ಉಗ್ರಾಣಗಳಿಗೆ ಸಂಂಧಿಸಿದ ಕರಡು ಈಗಾಗಲೇ ರೂಪುಗೊಂಡಿವೆ. ಇತರ ರಾಜ್ಯಗಳ ಕೈಗಾರಿಕಾ ನೀತಿ ಅಧ್ಯಯನ ನಡೆಯುತ್ತಿದೆ. ಜತೆಗೆ ಆಕರ್ಷಕ ಪ್ರೋತ್ಸಾಹಕ ಪ್ಯಾಕೇಜ್‌ಗಳನ್ನು ನೂತನ ನೀತಿಯು ಒಳಗೊಂಡಿರಲಿದೆ ಎಂದರು.
ಸದೃಢ ಪರಿಸರ ಸ್ನೇಹಿ, ಬಂಡವಾಳ ಆಕರ್ಷಣೆಗೆ ಇನ್ವೆಸ್ಟ್ ಕರ್ನಾಟಕ ವೇದಿಕೆ ಪುನರ್ ರಚನೆಗೆ ನಿರ್ಧರಿಸಲಾಗಿದೆ. ಉದ್ಯಮ ರಂಗದ ದಿಗ್ಗಜರು ಈ ವೇದಿಕೆಯ ಭಾಗವಾಗಿದ್ದಾರೆ. ವೆಂಚರ್ ಕ್ಯಾಪಿಟಲ್, ಖಾಸಗಿ ಈಕ್ವಿಟಿ, ಮೂಲಸವಲತ್ತು ಅಭಿವೃದ್ಧಿ ಇತ್ಯಾದಿ ಕ್ಷೇತ್ರಗಳ ನುರಿತವರನ್ನು ಒಳಗೊಂಡ ಕಾರ್ಯತಂತ್ರ ಹೂಡಿಕೆ ಸಮಿತಿ ರಚಿಸಲಾಗಿದೆ.
ಸುಗಮ ವ್ಯವಹಾರಕ್ಕೆ ಅತ್ಯಾಧುನಿಕ ಏಕಗವಾಕ್ಷಿ ವ್ಯವಸ್ಥೆ ರೂಪಿಸಲಾಗುತ್ತದೆ. ಪಂಜಾಬ್, ತೆಲಂಗಾಣ ಇತ್ಯಾದಿ ರಾಜ್ಯಗಳ ಮಾದರಿ ಅಭ್ಯಸಿಸಲಾಗುತ್ತದೆ. ಗರಿಷ್ಠ 50 ದಿನಗಳಿಗೆ ಎಲ್ಲ ಅನುಮೋದನೆ ಪ್ರಕ್ರಿಯೆ ಪೂರ್ಣಗೊಳಿಸುವ ಆಲೋಚನೆಯಿದೆ ಎಂದು ತಿಳಿಸಿದರು.ಒಂದು ಲಕ್ಷ ಕೋಟಿ ರೂ. ಹೂಡಿಕೆ ಸಾಧ್ಯತೆ
ಫಾಕ್ಸ್ ಕಾನ್, ಜೆಎಸ್‌ಡಬ್ಲ್ಯು ಎನರ್ಜಿ, ಟಾಟಾ ಎಲೆಕ್ಟ್ರಾನಿಕ್ಸ್, ಐಬಿಸಿ ಸೇರಿ ಹಲವು ಕಂಪನಿಗಳ ಜತೆಗೆ 60 ಸಾವಿರ ಕೋಟಿ ರೂ. ಹೂಡಿಕೆ ಒಪ್ಪಂದವೇರ್ಪಟ್ಟಿದ್ದು, 30 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. ಇನ್ನೂ 20ಕ್ಕೂ ಹೆಚ್ಚು ಸಂಭಾವ್ಯ ಹೂಡಿಕೆದಾರರ ಜತೆಗೆ ಮಾತುಕತೆ ನಡೆದಿದ್ದು, ಲಪ್ರದವಾದರೆ ಒಟ್ಟು ಒಂದು ಲಕ್ಷ ಕೋಟಿ ರೂ. ಹೂಡಿಕೆ ಸಾಧ್ಯತೆಗಳಿವೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆ ಉತ್ತೇಜಿಸಲು 10 ಆದ್ಯತಾ ವಲಯಗಳಲ್ಲಿ ವಿಷನ್ ಗ್ರೂಪ್ ರಚಿಸಲಿದ್ದಾರೆ. ಉದಯೋನ್ಮುಖ ತಂತ್ರಜ್ಞಾನ, ಏರೋಸ್ಪೇಸ್, ರಕ್ಷಣೆ, ಮಷಿನ್ ಟೂಲ್ಸ್, ಇಎಸ್‌ಡಿಎಂ, ಪ್ರಮುಖ ತಯಾರಿಕಾ ವಲಯ, ಆಟೋಮೋಟಿವ್/ ಎಲೆಕ್ಟ್ರಿಕ್ ವೆಹಿಕಲ್ಸ್, ಇಂಡಸ್ಟ್ರಿ 5.0, ಟೈಕ್ಸ್‌ಟೈಲ್ಸ್ ಮತ್ತು ಗ್ರೀನ್ ಗ್ರೂಪ್‌ಗಳು ಅಸ್ತಿತ್ವಕ್ಕೆ ಬರಲಿವೆ ಎಂದು ಹೇಳಿದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 − 5 =
Remember me
