ಬೆಂಗಳೂರು:ಸ್ಮಾರ್ಟ್​ ನೀರಾವರಿ ಪರಿಹಾರ ಒದಗಿಸುವಲ್ಲಿ ಮುಂಚೂಣಿಯಲ್ಲಿರುವ“ನೇಟಾಫಿಮ್​ ಇಂಡಿಯಾ ಕಂಪನಿ‘ಹೊಸ ನೀರಾವರಿ ತಂತ್ರಜ್ಞಾನ“ತೂಫಾನ್​‘ಉತ್ಪನ್ನ ಬಿಡುಗಡೆ ಮಾಡಿದೆ.ಇದು ಎಲ್ಲ ರೈತರಿಗೂ ನೆರವಾಗಲಿದೆ.ಉತ್ಪನ್ನದ ಮೂಲಕ ಕಂಪನಿ2025ರ ವೇಳೆಗೆ25ಸಾವಿರ ಹೆಕ್ಟೇರ್​ ಪ್ರದೇಶದ35ಸಾವಿರ ರೈತರನ್ನು ತಲುಪುವ ಗುರಿ ಹೊಂದಿದೆ.ಈ ವಿಭಾಗದಲ್ಲಿ ತೂಫಾನ್​ ಅತ್ಯುತ್ತಮ ವ್ಯವಸ್ಥೆಯಾಗಿದ್ದು,ಅಡಚಣೆರಹಿತ ತಂತ್ರಜ್ಞಾನದಿಂದಾಗಿ ನೀರು ಮತ್ತು ಪೋಷಕಾಂಶ ಗರಿಷ್ಠ ಮಟ್ಟದಲ್ಲಿ ಬೆಳೆಗಳಿಗೆ ದೊರೆಯುವಂತೆ ಮಾಡಲಿದೆ.
ಡ್ರಿಪ್​ ಲೈನ್​ ಶೇ.40ರಷ್ಟು ಹೆಚ್ಚು ಬಲಿಷ್ಠವಾಗಲಿದೆ.ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಎನ್​ಪಿಸಿ ಡ್ರಿಪ್​ಲೈನ್​ಗಳಿಗೆ ಹೋಲಿಸಿದರೆ ತೂಫಾನ್​ ಶೇ.20ರಷ್ಟು ಅಗ್ಗವಾಗಿದೆ.ಎಲ್ಲರಿಗೂ ಲಭ್ಯವಾಗುವ ಉತ್ತಮ ನೀರಾವರಿ ವ್ಯವಸ್ಥೆ ಮಾತ್ರವಲ್ಲದೆ ಇದರ ಖರೀದಿ ಪ್ರಕ್ರಿಯೆಯೂ ಸರಳವಾಗಿದೆ.ಅಗ್ಗದ ಹನಿ ನೀರಾವರಿ ತಂತ್ರಜ್ಞಾನ ಸಣ್ಣ ಮತ್ತು ದೊಡ್ಡ ಪ್ರಮಾಣದ ರೈತರಿಗೆ,ಸಬ್ಸಿಡಿ ಅರ್ಹತೆಯೂ ದೊರೆಯಲಿದೆ.ಡ್ರಿಪ್​ಲೈನ್​ ತ್ವರಿತವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುವಂತೆ ತಂತ್ರಜ್ಞಾನ ರೂಪಿಸಲಾಗಿದೆ.ಒಂದೇ ದಿನ ಹತ್ತು ಎಕರೆ ಪ್ರದೇಶದಲ್ಲಿ ಇದನ್ನು ಅಳವಡಿಸಬಹುದು.
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ 115 ಕೋಟಿ ಲಾಭ
ಕಂಪನಿ ಎಂಡಿ ರಣಧೀರ್​ ಚೌಹಾನ್​ ಮಾತನಾಡಿ,ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ಸಣ್ಣ ನೀರಾವರಿ ವ್ಯವಸ್ಥೆ ಒದಗಿಸುವುದು ನಮ್ಮ ಉದ್ದೇಶ.ರೈತರಿಗೆ ನಿರಂತರವಾಗಿ ಇಳುವರಿ ದೊರೆಯುವುದು ಮಾತ್ರವಲ್ಲದೆ ನಿರ್ವಹಣೆ ವೆಚ್ಚವೂ ಕಡಿಮೆಯಾಗುವಂತೆ ಖಾತ್ರಿ ಮಾಡಲಿದೆ.ಭಾರತೀಯ ಕೃಷಿ ವ್ಯವಸ್ಥೆ ಸ್ವರೂಪವನ್ನು ಅರ್ಥ ಮಾಡಿಕೊಂಡಿದ್ದು,ಬೆಳೆಗಾರರ ಬದಲಾಗುವ ಅಗತ್ಯತೆಗಳಿಗೆ ಸ್ಪಂದಿಸಲು ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ.ಭಾರತದ ಕೃಷಿ ಪ್ರಗತಿಯ ಭಾಗವಾಗಲು ಹೆಮ್ಮೆಯಾಗಿದೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
