ಬೆಂಗಳೂರು:ಇನ್ಮುಂದೆ ವಿಶ್ವವಿದ್ಯಾಲಯಗಳು ಕುಲಾಧಿಪತಿ ಪೂರ್ವಾನುಮತಿ ಇಲ್ಲದೆ ಸಾಮಾನ್ಯ ಘಟಿಕೋತ್ಸವಗಳಿಗೆ ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ಉಪರಾಷ್ಟ್ರಪತಿಯನ್ನು ಆಹ್ವಾನಿಸುವಂತಿಲ್ಲ.. ಇದು ರಾಜ್ಯದ ಎಲ್ಲ ವಿವಿಗಳ ಕುಲಾಧಿಪತಿ ರಾಜ್ಯಪಾಲ ವಿ.ಆರ್. ವಾಲಾ ಅವರ ಸೂಚನೆ.
ವಿವಿಗಳು ಘಟಿಕೋತ್ಸವ ಸಮಾರಂಭದಲ್ಲಿ ಶಿಷ್ಟಾಚಾರ ಪಾಲನೆ ಉಲ್ಲಂಘನೆ ಮಾಡು ತ್ತಿರುವ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಘಟಿಕೋತ್ಸವ ಆಯೋಜನೆಗೆ ಸೂಕ್ತ ಮಾರ್ಗಸೂಚಿಯನ್ನು ರಾಜ್ಯಪಾಲರ ಕಚೇರಿ ಹೊರಡಿಸಿದೆ.
ಇದರಲ್ಲಿ ಪ್ರಮುಖವಾಗಿ ವಿಶ್ವವಿದ್ಯಾಲಯಗಳು ಪ್ರಚಾರಕ್ಕಾಗಿ ವಿವಿಐಪಿಗಳಾದ ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ಉಪ ರಾಷ್ಟ್ರಪತಿ ಸೇರಿ ಇತರ ಗಣ್ಯರನ್ನು ಆಹ್ವಾನಿಸುತ್ತಾರೆ. ಇಂತಹ ಬೆಳವಣಿಗೆ ಇತ್ತೀಚೆಗೆ ಸರ್ಕಾರಿ ವಿವಿಗಳಿಗಿಂತ ಖಾಸಗಿ ವಿವಿಗಳಲ್ಲೇ ಹೆಚ್ಚಾಗಿ ನಡೆಯುತ್ತಿದೆ. ಹಲವು ಬಾರಿ ಅತಿಥಿಗಳನ್ನು ಆಹ್ವಾನಿಸುವ ಕುರಿತು ರಾಜ್ಯಪಾಲರೊಂದಿಗೆ ರ್ಚಚಿಸಿರುವುದಿಲ್ಲ. ತಮ್ಮ ಪ್ರಭಾವ ಬಳಸಿ ನೇರವಾಗಿ ವಿವಿಐಪಿಗಳನ್ನು ಭೇಟಿ ಮಾಡಿ ನೆಪಮಾತ್ರಕ್ಕೆ ರಾಜ್ಯಪಾಲರ ಹೆಸರನ್ನು ಸೇರಿಸುತ್ತಾರೆ. ಈ ಬಗ್ಗೆ ಸಿಟ್ಟಾಗಿರುವ ರಾಜ್ಯಪಾಲರ ಕಚೇರಿ, ಘಟಿಕೋತ್ಸವ ವೇಳೆ ಕಡ್ಡಾಯವಾಗಿ ಕೆಲವು ಮಾನದಂಡಗಳನ್ನು ಅನುಸರಿಸಬೇಕು ಎಂದು ಖಡಕ್ ಸೂಚನೆ ನೀಡಿದೆ.
ವಿವಿಐಪಿಗಳ ಸ್ಥಾನಮಾನಕ್ಕೆ ಹೆಚ್ಚಿನ ಗೌರವ ವಿರುತ್ತದೆ. ಆದರೆ, ಕೆಲವು ವಿವಿಗಳು ಸಾಮಾನ್ಯ ಘಟಿಕೋತ್ಸವಕ್ಕೂ ಅವರನ್ನು ಆಹ್ವಾನಿಸುವುದು ಸರಿಯಲ್ಲ. ರಜತ ಮಹೋತ್ಸವ, ಸುವರ್ಣ ಮಹೋತ್ಸವ ಸೇರಿ ವಿಶೇಷ ಕಾರ್ಯಕ್ರಮಗಳಿಗೆ ಮಾತ್ರ ಅವರನ್ನು ಕರೆಯಬೇಕೆಂದು ತಿಳಿಸಿದೆ.
ಮೊದಲು ಮಾಹಿತಿ ಕೊಡಿ..
ಘಟಿಕೋತ್ಸವ ಆಯೋಜಿಸುವ ವೇಳೆ ಕಾರ್ಯಕ್ರಮದ ಸಂಪೂರ್ಣ ವಿವರ ನೀಡಬೇಕು. ಮುಖ್ಯಅತಿಥಿ ಹೆಸರು, ದಿನಾಂಕ ಎಲ್ಲವೂ ಸೇರಿರಬೇಕು. ವಿವಿಯ ಹಂತದಲ್ಲಿ ರಚನೆಯಾಗುವ ತಜ್ಞರ ಪರಿಶೀಲನಾ ಸಮಿತಿ ಎಲ್ಲ ವಿಷಯ ಗಳನ್ನು ಮೊದಲು ಪರಿಶೀಲಿಸಿ ಆನಂತರ ರಾಜ್ಯಭವನಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಇದರಿಂದ ಬಹುಮುಖ್ಯವಾಗಿ ಘಟಿಕೋತ್ಸವ ದಿನಾಂಕ ನಿಗದಿ ಮಾಡಲು ಈ ಹಿಂದೆ ಪತ್ರ ವ್ಯವಹಾರಗಳಲ್ಲಿ ವ್ಯರ್ಥವಾಗುತ್ತಿದ್ದ ಸಮಯ ಉಳಿತಾಯವಾಗಲಿದೆ ಎಂದು ರಾಜ್ಯಪಾಲ ಕಚೇರಿ ತಿಳಿಸಿದೆ. ದೇಶದಲ್ಲಿ ರಾಜ್ಯ ಸರ್ಕಾರಿ ವಿವಿ, ಡೀಮ್್ಡ ವಿವಿ, ಕೇಂದ್ರ ವಿವಿ, ಖಾಸಗಿ ವಿವಿ ಸೇರಿ 993 ವಿಶ್ವವಿದ್ಯಾಲಯಗಳಿವೆ. 39,931 ಪದವಿ ಕಾಲೇಜುಗಳು ಮತ್ತು 10,725 ಸ್ಟ್ಯಾಂಡ್ ಅಲೋನ್ ಕಾಲೇಜುಗಳಿವೆ. ಪ್ರತಿ ವರ್ಷ ಘಟಿಕೋತ್ಸವ ನಡೆಯುತ್ತಲೇ ಇರುವುದರಿಂದ ಅತಿಥಿಗಳನ್ನು ಆಹ್ವಾನಿಸಲು ವಿವಿ ಮತ್ತು ಕಾಲೇಜುಗಳ ಆಡಳಿತ ಮಂಡಳಿಗಳು ಆಲೋಚಿಸುತ್ತಿರುತ್ತವೆ.
ಶಿಕ್ಷಣ ತಜ್ಞರನ್ನು ಆಹ್ವಾನಿಸಿ
ಸಾಮಾನ್ಯ ಘಟಿಕೋತ್ಸವಕ್ಕೆ ವಿವಿಐಪಿಗಳನ್ನು ಆಹ್ವಾನಿಸುವ ಬದಲು ಹಿರಿಯ ವಿಜ್ಞಾನಿಗಳು, ತತ್ವಜ್ಞಾನಿಗಳು, ಶಿಕ್ಷಣ ತಜ್ಞರನ್ನು ಮುಖ್ಯ ಅತಿಥಿಯಾಗಿ ಆಯ್ಕೆ ಮಾಡಿ. ಅವರು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಭಾಷಣ ಮಾಡುತ್ತಾರೆ. ವಿಶ್ವವಿದ್ಯಾಲಯಗಳಿಗೆ ಮಾರ್ಗದರ್ಶನ ನೀಡುತ್ತಾರೆ ಎಂದು ರಾಜ್ಯಪಾಲರ ಕಚೇರಿ ಸಲಹೆ ನೀಡಿದೆ.
| ದೇವರಾಜ್ ಎಲ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 6 =
Remember me
