ಬೆಂಗಳೂರು :ರಾಜ್ಯ ಪೊಲೀಸ್​ ಇಲಾಖೆ ವೆಬ್​ಸೈಟ್​ ಹೊಸ ರೂಪ ಪಡೆದುಕೊಂಡಿದೆ. ಅಪೂರ್ಣ ಮಾಹಿತಿ ಒಳಗೊಂಡ ಹಳೆಯ ಕೆಎಸ್​ಪಿ ವೆಬ್​ಸೈಟ್​ಗೆ ಅಂತ್ಯ ಹಾಡಿರುವ ಪೊಲೀಸ್​ ಇಲಾಖೆ, ಇ-ಆಡಳಿತ ಸಹಾಯದಿಂದ ಹೊಸ ಸ್ವರೂಪ ಇರುವ ವೆಬ್​ಸೈಟ​ನ್ನು ಪರಿಚಯಗೊಳಿಸಿದೆ.
ಕನ್ನಡ ಮತ್ತು ಇಂಗ್ಲೀಷ್​ ಭಾಷೆಯಲ್ಲಿ ಹೊರಬಂದಿರುವ ವೆಬ್​ಸೈಟ್​ ಜನಸಾಮಾನ್ಯರಿಗೂ ಸರಳವಾಗಿ ಮಾಹಿತಿ ಲಭಿಸುವಂತಿದೆ. ಪೊಲೀಸ್​ ಇಲಾಖೆ ಇತಿಹಾಸ, ಆಡಳಿತ ವರ್ಗ, ಅಪರಾಧ ಅಂಕಿಅಂಶ, ಸಂಚಾರ ವಿಭಾಗ, ಪೊಲೀಸ್​ ತರಬೇತಿ, ಮಹಿಳೆಯರು ಮತ್ತು ಮಕ್ಕಳ ರಕ್ಷಣೆ – ಈ ಎಲ್ಲ ಅಂಶಗಳನ್ನು ವಿವರವಾಗಿ ನೀಡಲಾಗಿದೆ.
ಇದನ್ನೂ ಓದಿ:ಒಬ್ಬನಿಗೆ ಅಪ್ಪ-ಅಮ್ಮನ ಬಗ್ಗೆ ಪ್ರೀತಿ, ಇನ್ನೊಬ್ಬನಿಗೆ ದ್ವೇಷ; ಇಬ್ಬರೂ ಸೇರಿ ಮಾಡಿದ್ರು ಬ್ಯಾಂಕ್ ಲೂಟಿ!
ಅಪರಾಧಗಳನ್ನು ಸಂಬಂಧಿಸಿದ ಕಾಯ್ದೆ, ಶಿಕ್ಷೆ, ಅಪರಾಧ ತಡೆಯಲ್ಲಿ ಸಾರ್ವಜನಿಕರ ಪಾತ್ರದ ಬಗ್ಗೆ ವಿವರಿಸಲಾಗಿದೆ. ಐಪಿಎಸ್​ ಅಧಿಕಾರಿಗಳಿಂದ ಪೊಲೀಸ್​ ಠಾಣೆಗಳವರೆಗೂ ದೂರವಾಣಿ, ಮೊಬೈಲ್​ ಸಂಖ್ಯೆ ಮತ್ತು ವಿದೇಶಿ ಪ್ರಜೆಗಳ ನೋಂದಣಿ ಮಾಹಿತಿಯೂ ಒಳಗೊಂಡಿದೆ. ಸುಳ್ಳು ಸುದ್ದಿ ಅಸಲಿಯತ್ತು ಕೂಡ ತಿಳಿಯಬಹುದು.

ನಾಗರೀಕ ಸೇವಾ ತಾಣದಲ್ಲಿ ನೇಮಕಾತಿ, ಎಸ್​​ಐಆರ್​, ಕೆಎಸ್​ಪಿ, ಇ-ಲಾಸ್ಟ್​ ರಿಪೋರ್ಟ್​, ಮಾಹಿತಿ ಹಕ್ಕು, ನಾಗರೀಕ ಕೇಂದ್ರಿತ ತಾಣ, ಟೆಂಡರ್​ ಇ-ಸಂಗ್ರಹಣೆ(ಜಿಇಎಂ) ವೆಬ್​ಸೈಟ್​ ಲಿಂಕ್​ಗಳು ಇದರಲ್ಲಿ ಲಭಿಸಲಿದೆ. ಜೊತೆಗೆ ರಾಜ್ಯ ಸರ್ಕಾರದ ಇತರ ಇಲಾಖೆಗಳ ಮಾಹಿತಿ ಮತ್ತು ಸೇವೆಯನ್ನು ಒದಗಿಸುವ ವೆಬ್​ಸೈಟ್​ಗಳ ಲಿಂಕ್​ಗಳು, ಆಯೋಗಗಳು-ನ್ಯಾಯಾಲಯಗಳ ಮಾಹಿತಿಯೂ ಹೊಸ ಕೆಎಸ್​ಪಿ ವೆಬ್​ಸೈಟ್​ನಲ್ಲಿ ಸಿಗಲಿದೆ. ಇದು ವೆಬ್​ಸೈಟ್​ ವಿಳಾಸ – https://ksp.karnataka.gov.in/
ಸ್ವಗ್ರಾಮ ಪರೌಂಖ್​ಗೆ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್​ ಭೇಟಿ

(ಆ)ರಕ್ಷಕರೇ ಭಕ್ಷಕರಾದಾಗ: ಮಾವ ರೇಪ್ ಮಾಡಿದ, ಗಂಡ ತಲಾಖ್​ ನೀಡಿದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − two =
Remember me
