ಬೆಂಗಳೂರು:ದೇಶದ ಜನರನ್ನು ಹೆಚ್ಚಿನ ಪ್ರಮಾಣದಲ್ಲಿ ಬಾಧಿಸುತ್ತಿ ರುವ ಬಾಯಿ ಕ್ಯಾನ್ಸರ್​ಗೆ ಕಾರಣವಾಗುವ 114 ವಂಶವಾಹಿಗಳನ್ನು ರಾಜ್ಯದ ಸಂಶೋಧಕರು ಮತ್ತು ಚಿಕಿತ್ಸಕರ ತಂಡ ಕಂಡುಹಿಡಿದಿದೆ. ವಿಶ್ವದಲ್ಲೇ ಮೊದಲ ಬಾರಿಗೆ ಈ ಮಹತ್ವದ ಸಾಧನೆ ಮಾಡಿದೆ. ಇದರಲ್ಲಿ ಒಂದು ವಂಶವಾಹಿ ರೋಗಿಗಳನ್ನು ಸಾವಿನ ದವಡೆಯಿಂದ ಪಾರುಮಾಡುವ ನಿರೀಕ್ಷೆ ಹುಟ್ಟಿಸಿದೆ. ಈ ಮೂಲಕ, ವಿಶ್ವ ಕ್ಯಾನ್ಸರ್ ದಿನದಂದೇ ಚಿಕಿತ್ಸೆಗೆ ಸಂಬಂಧಿಸಿದಂತೆ ಹೊಸ ಆಶಾಕಿರಣ ಮೂಡಿದೆ. ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಅಧ್ಯಯನ ಮತ್ತು ಸಂಶೋಧಕರ ತಂಡದ ಸಮಕ್ಷಮವೇ ಉನ್ನತ ಶಿಕ್ಷಣ, ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಈ ವಿಷಯ ಪ್ರಕಟಿಸಿದರು.
ದೇಶದ ಒಟ್ಟಾರೆ ಕ್ಯಾನ್ಸರ್ ಪ್ರಕರಣಗಳಲ್ಲಿ ಸೇ.40ರಷ್ಟು ಬಾಯಿ ಕ್ಯಾನ್ಸರ್​ಗೆ ಸೇರಿವೆ. ಭಾರತದ ವಿವಿಧ ವಯೋಮಾನದ ರೋಗಿ ಗಳನ್ನು ಆಯ್ಕೆ ಮಾಡಿಕೊಂಡು ನಡೆಸಲಾಗಿರುವ ಮೊದಲ ಅಧ್ಯಯನ ಇದಾಗಿದೆ ಎಂದರು.
ಶೇ.90 ಜೀವರಕ್ಷಕ:ಬಾಯಿ ಕ್ಯಾನ್ಸರ್​ಗೆ ಕಾರಣವಾಗುವ 114 ವಂಶವಾಹಿ ರೂಪಾಂತರಗಳನ್ನು ಕಂಡುಹಿಡಿಯಲಾಗಿದೆ. ಈ ಪೈಕಿ 114 ವಂಶವಾಹಿ ರೂಪಾಂತರಗಳ ಪೈಕಿ 35 ರೂಪಾಂತರಗಳು ಆಂಕೋಜೀನ್​ಗಳಾದರೆ, 11 ಟ್ಯೂಮರ್ ಸಪ್ರೆಸರ್​ಗಳಾಗಿದ್ದು, ಎರಡು ಡಿಎನ್​ಎ ಹಾನಿಗೀಡಾದ ವಂಶವಾಹಿಗಳೆಂದು ಗುರುತಿಸಲಾಗಿದೆ. ಜೀವಕೋಶ ಕೇಂದ್ರಿತ ನಿರ್ದಿಷ್ಟ ಹಾಗೂ ನಿಖರವಾದ ಚಿಕಿತ್ಸೆ ಮೂಲಕ ರೋಗಿಗಳು ಬದುಕಿ ಉಳಿಯುವ ಸಾಧ್ಯತೆ ಶೇ.90 ಇದೆ ಎಂದು ಅಧ್ಯಯನ ಊಹಿಸಿದೆ. ಅಲ್ಲದೆ, ಬಾಯಿ ಕ್ಯಾನ್ಸರ್ ವಂಶವಾಹಿ ರೋಗವಲ್ಲ ಎಂಬ ಮತ್ತೊಂದು ಗಮನಾರ್ಹ ವಿಷಯವನ್ನು ಸಂಶೋಧನೆ ಹೊರಗೆಡವಿದೆ. ಬಾಯಿ ಕ್ಯಾನ್ಸರ್ ಬಾಧಿತರು ಬದುಕುಳಿಯುವ ಸಾಧ್ಯತೆಯಲ್ಲಿ ನಿರ್ಣಾಯಕ ಪಾತ್ರವಹಿಸುವ ಪ್ರಮುಖ ವಂಶವಾಹಿಗಳನ್ನು ಕೂಡ ಗುರುತಿಸಲಾಗಿದೆ.
ಐಆರ್​ಎಕೆ1 ಎಂಬ ವಂಶವಾಹಿನಿಯ ಹೊಸ ರೂಪಾಂತರವನ್ನು ಕಂಡು ಹಿಡಿಯಲಾಗಿದೆ. ಇದು, ನಿರ್ದಿಷ್ಟ ಜೀವಕೋಶ ಕೇಂದ್ರಿತ ಪರಿಣಾಮಕಾರಿ ಚಿಕಿತ್ಸೆಗೆ ಅನುವು ಮಾಡಿಕೊಡಲಿದೆ. ಬಾಯಿ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಸಂಶೋಧನೆ ಮಹತ್ವದ ತಿರುವು ನೀಡಿದೆ ಎಂದು ಅಶ್ವತ್ಥ ನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಧನೆ ಮೆರೆದ ತಂಡ:ಮಾಹಿತಿ ತಂತ್ರಜ್ಞಾನ/ ಜೈವಿಕ ತಂತ್ರಜ್ಞಾನ ಇಲಾಖೆಯಿಂದ ಸ್ಥಾಪಿತ ಜೈವಿಕ ಚಹರೆಗಳು ಮತ್ತು ಅನ್ವಯಿಕ ಜೈವಿ ತಂತ್ರಜ್ಞಾನ ಸಂಸ್ಥೆ (ಐಬ್ಯಾಬ್) ಅತ್ಯಾಧುನಿಕ ಜೀನೋಮಿಕ್ಸ್ ವ್ಯವಸ್ಥೆ ಬಳಸಿ ಸಂಶೋಧನೆ ನಡೆಸಿದೆ. ಜತೆಗೆ ಸುಧಾರಿತ ಮಷೀನ್ ಲರ್ನಿಂಗ್, ಬಯೋಇನ್ಪಾರ್ಮಟಿಕ್ಸ್ ಉಪಯೋಗ ಮತ್ತು ಎಚ್​ಸಿಜಿ ಕ್ಯಾನ್ಸರ್ ಕೇಂದ್ರ ನುರಿತ ವೈದ್ಯರ ತಂಡದ ಪರಿಶ್ರಮವೂ ಇದೆ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ಸಹಭಾಗಿತ್ವ ಚಿಂತನೆ:ವಂಶವಾಹಿಗಳ ಪತ್ತೆ ಜತೆಗೆ ಜೀವಕೋಶ ಕೇಂದ್ರಿತ ಪರಿಣಾಮಕಾರಿ ಚಿಕಿತ್ಸೆಗೆ ನೆರವಾಗಲಿರುವ ಹಿನ್ನೆಲೆಯಲ್ಲಿ ಔಷಧ ಕಂಪನಿಗಳೊಂದಿಗೆ ಸಹಭಾಗಿತ್ವ ಸಾಧಿಸುವ ಚಿಂತನೆ ನಡೆದಿದೆ. ಇಡೀ ಜಗತ್ತಿಗೆ ಕರ್ನಾಟಕದ ಮಹತ್ವದ ಕೊಡುಗೆಗೆ ಅಧ್ಯಯನ ಕಾರಣವಾಗುವ ಸಾಧ್ಯತೆಗಳಿವೆ ಎಂದು ಅಶ್ವತ್ಥನಾರಾಯಣ ಆಶಾಭಾವ ವಕ್ತಪಡಿಸಿದರು.
ಐಬ್ಯಾಬ್ ಮುಖ್ಯಸ್ಥೆ ಪ್ರೊ.ವಿಭಾ ಚೌಧರಿ, ಎಚ್​ಸಿಜಿ ಕ್ಯಾನ್ಸರ್ ಕೇಂದ್ರದ ಡೀನ್ ಡಾ.ವಿಶಾಲ್ ರಾವ್, ಡಾ.ಆನಂದ್ ಸುಭಾಷ್, ವಂಶವಾಹಿನಿ ಅಧ್ಯಯನ ತಜ್ಞ ಡಾ.ಸತೀಶ್ ಕುಣಿಗಲ್ ಇನ್ನಿತರರು ಇದ್ದರು.
ಜಾಗತಿಕಮಟ್ಟದಲ್ಲಿ ಪ್ರಶಂಸೆ:ಇಂಗ್ಲೆಂಡ್​ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಈ ಸಂಶೋಧನೆ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿವೆ. ಅಲ್ಲದೆ, ಪ್ರತಿಷ್ಠಿತ ವೈದ್ಯಕೀಯ ನಿಯಕಾಲಿಕೆಯಲ್ಲೂ ಅಧ್ಯಯನ ವರದಿ ಪ್ರಕಟವಾಗಿದೆ.
ನಾಲ್ಕೂವರೆ ವರ್ಷಗಳ ಪ್ರತಿಫಲ:ಐಬ್ಯಾಬ್ ಮತ್ತು ಎಚ್​ಸಿಜಿ ಕ್ಯಾನ್ಸರ್ ಕೇಂದ್ರ ತಂಡ ನಿರಂತರ ನಾಲ್ಕೂವರೆ ವರ್ಷಗಳ ಸಂಶೋಧನೆ ಮತ್ತು ಅಧ್ಯಯನ, ವಿವಿಧ ವಯೋಮಾನದ ಬಾಯಿ ಕ್ಯಾನ್ಸರ್​ಗಳ ಅನುವಂಶಿಕಗಳ ವಿಶ್ಲೇಷಣೆ, ಭಾರತ ಮತ್ತು ಪಾಶ್ಚಿಮಾತ್ಯ ದತ್ತಾಂಶಗಳ ತುಲನೆ ಮತ್ತು ವಂಶವಾಹಿ ಅಧ್ಯಯನ ಪರಾಮರ್ಶೆಯಿಂದ ವಂಶವಾಹಿಗಳನ್ನು ಪತ್ತೆ ಮಾಡಲು ನೆರವಾಗಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ 25 ಕೋಟಿ ರೂ ಅನುದಾನದ ನೆರವು ನೀಡಿದೆ.
ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಈ ಮಹತ್ವದ ಸಂಶೋಧನೆ ಇಂಬು ನೀಡಿದೆ. ಐಬ್ಯಾಬ್ ಮೂಲಕ ಚಿಕಿತ್ಸಕರು ಹಾಗೂ ಸಂಶೋಧಕರು ಒಂದೆಡೆ ಸೇರಿ ಅಧ್ಯಯನದಲ್ಲಿ ತೊಡಗಲು ಸರ್ಕಾರ ಅನುಕೂಲ ಮಾಡಿಕೊಟ್ಟಿದೆ.
|ಡಾ.ವಿಶಾಲ್ ರಾವ್ಎಚ್​ಸಿಜಿ ಕ್ಯಾನ್ಸರ್ ಕೇಂದ್ರದ ಡೀನ್.
ಬಾಯಿ ಕ್ಯಾನ್ಸರ್​ಗೆ ಎಷ್ಟೇ ಉತ್ತಮ ಚಿಕಿತ್ಸೆ ಕೊಟ್ಟರೂ ಶೇ.50 ಪ್ರಕರಣಗಳಲ್ಲಿ ರೋಗ ಮರುಕಳಿಸುತ್ತಿತ್ತು. ಈ ಸಂಶೋಧನೆಯು ರೋಗ ಮರುಕಳಿಸದಂತೆ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ.
|ಪ್ರೊ.ವಿಭಾ ಚೌಧರಿಐಬ್ಯಾಬ್ ಮುಖ್ಯಸ್ಥೆ
ಬೆಂಗಳೂರು:ರಾಜ್ಯದ ಎಲ್ಲ ಪ್ರಾದೇಶಿಕ ವಲಯಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವನ್ನು ಪ್ರಾರಂಭಿಸಲಿದ್ದು, ಕೈಗೆಟುಕುವ ದರದಲ್ಲಿ ಕ್ಯಾನ್ಸರ್ ಔಷಧ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇದೇ ವೇಳೆ ‘ಆರೈಕೆಯ ಅಂತರವನ್ನು ಕಡಿತಗೊಳಿಸಿ’ ಎಂಬ ಘೊಷವಾಕ್ಯ ಬಿಡುಗಡೆ ಮಾಡಿದರು. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಕ್ಯಾನ್ಸರ್ ಪತ್ತೆಗಾಗಿ ಎರಡು ಪೆಟ್ ಸಿಟಿ ಸ್ಕಾ್ಯನ್ ಯಂತ್ರ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಯಂತ್ರದ ಪರೀಕ್ಷೆಗೆ ಖಾಸಗಿ ಆಸ್ಪತ್ರೆಯಲ್ಲಿ 25,000 ರೂ.ಗಳವರೆಗೆ ವೆಚ್ಚವಾಗುತ್ತದೆ. ಕಿದ್ವಾಯಿಯಲ್ಲಿ ಈ ಸೌಲಭ್ಯ ಕಲ್ಪಿಸುವ ಮೂಲಕ ಬಡರೋಗಿಗಳಿಗೆ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಸೇವೆ ಒದಗಿಸಲಾಗುವುದು ಎಂದರು.
ಕೋವಿಡ್ ವೇಳೆ ಕರ್ತವ್ಯ ನಿಭಾಯಿಸಿದ ಬಗ್ಗೆ ತೃಪ್ತಿ ಇದೆ ಎಂದ ಬಿಎಸ್‌ವೈ; ಶಿವಾನಂದ ತಗಡೂರು ಅವರ ‘ಕೋವಿಡ್ ಕತೆಗಳು’ ಪುಸ್ತಕ ಲೋಕಾರ್ಪಣೆ

ನೆಟ್ವರ್ಕ್​ ಅರಸಿ ಗುಡ್ಡಕ್ಕೆ ಹೋಗುತ್ತಿದ್ದ ಯುವತಿ; ಅಡ್ಡ ಹಾಕಿ ಮೊಬೈಲ್​ಫೋನ್​ ಕಿತ್ಕೊಂಡು ಕಿರುಕುಳ ಕೊಟ್ಟ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + twelve =
Remember me
