ಬೆಂಗಳೂರು:ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಹಳೆಯ ವಿದ್ಯಾರ್ಥಿಗಳ ಸಂಘ(ಕವಿಪವಿ ಕೂಟ)ದ ನೂತನ ಅಧ್ಯಕ್ಷರಾಗಿ ಚಂದ್ರಕಾಂತ ಸೊನ್ನದ ಹಾಗೂ ಉಪಾಧ್ಯಕ್ಷರಾಗಿ ಲಿಂಗರಾಜ್ ಬಡಿಗೇರ್ ಮತ್ತು ಸುಶೀಲಾ ಡೋಣೂರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಪ್ರೆಸ್​​ಕ್ಲಬ್​​ನಲ್ಲಿ ಶನಿವಾರ ಸಂಜೆ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಸಾಕ್ಷ್ಯಚಿತ್ರ ನಿರ್ದೇಶಕ ಚಂದ್ರಕಾಂತ ಸೊನ್ನದ ಅವರನ್ನು ಅಧ್ಯಕ್ಷರಾಗಿ, ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್ ಗ್ರೂಪ್​ನ ಕನ್ನಡಪ್ರಭ.ಕಾಮ್ ಚೀಫ್ ಕಂಟೆಂಟ್ ಎಡಿಟರ್ ಲಿಂಗರಾಜ್ ಬಡಿಗೇರ್ ಹಾಗೂ ಪ್ರಜಾವಾಣಿಯ ಹಿರಿಯ ಪತ್ರಕರ್ತೆ ಸುಶೀಲಾ ಡೋಣೂರ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಖಾಸಗಿ ಕಂಪನಿಯಲ್ಲಿ ಪಿಆರ್​ಒ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರವೀಣ್ ಶಿರಿಯಣ್ಣವರ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ:ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಅಧ್ಯಯನ ಮಾಡಿ ಬೆಂಗಳೂರಿನಲ್ಲಿ ಮಾಧ್ಯಮ ಕ್ಷೇತ್ರದಲ್ಲಿರುವ ಹಿರಿಯರು ಸೇರಿಕೊಂಡು 1991ರಲ್ಲಿ ಈ ಸಂಘಟನೆ ಸ್ಥಾಪಿಸಲಾಯಿತು. ಹಲವು ಸಮಾಜಮುಖಿ ಕಾರ್ಯಗಳು ಸೇರಿದಂತೆ ತಮ್ಮ ವಿಭಾಗದ ಕಿರಿಯರಿಗೆ ಮಾರ್ಗದರ್ಶನ ನೀಡುತ್ತಿರುವ ಕವಿಪವಿ ಈಗ ಸುಮಾರು 300 ಜನ ಪತ್ರಕರ್ತರ ಸಂಘಟನೆಯಾಗಿ ಬೆಳೆದು ನಿಂತಿದೆ.
ಅಧ್ಯಕ್ಷ- ಚಂದ್ರಕಾಂತ ಸೊನ್ನದ; ಉಪಾಧ್ಯಕ್ಷ- ಲಿಂಗರಾಜ್ ಬಡಿಗೇರ, ಸುಶೀಲಾ ಡೋಣೂರ; ಖಜಾಂಚಿ- ಅನಿಲ ಬಾಸೂರ; ಪ್ರಧಾನ ಕಾರ್ಯದರ್ಶಿ- ಪ್ರವೀಣ್ ಶಿರಿಯಣ್ಣವರ; ಕಾರ್ಯದರ್ಶಿ- ರವಿ ಎಸ್., ಮಂಜುನಾಥ ಭದ್ರಶೆಟ್ಟಿ; ಸದಸ್ಯರು- ಮುತ್ತುರಾಜ್ ಸುಳ್ಳದ, ವಿನಾಯಕ ವಿಮೆಯ.
ಇದು ನಾಯಿಯಲ್ಲ, ನಾಯಿಯಂತೆ ಕಾಣುವ ಮನುಷ್ಯ: 40 ದಿನಗಳೊಳಗೆ ಆಯ್ತು ರೂಪಾಂತರ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − eight =
Remember me
