ಬೆಂಗಳೂರು:ಲೋಕಸಭೆ ಚುನಾವಣೆ ತಯಾರಿ ಚಟುವಟಿಕೆಗಳಿಗೆ ಚಾಲನೆ ನೀಡುವ ಪೂರ್ವ ರಾಜ್ಯ ಬಿಜೆಪಿಗೆ ಹೊಸ ಸಾರಥಿ ನೇಮಕವಾಗಲಿದ್ದು, ಎಲ್ಲ ಊಹಾಪೋಹಗಳಿಗೆ ವರಿಷ್ಠರು ತೆರೆ ಎಳೆಯಲಿದ್ದಾರೆ.
ಪಕ್ಷದ ಸಾಂಸ್ಥಿಕ ನಿಯಮಾವಳಿ ಪ್ರಕಾರ ಹಂಗಾಮಿ ಅಥವಾ ಪೂರ್ಣಾವಧಿ ಸೇರಿ ಎರಡು ಅವಧಿಗೆ ಮಾತ್ರ ಒಬ್ಬರು ಅಧ್ಯಕ್ಷರಾಗುವ ಅವಕಾಶವಿದೆ. ರಾಷ್ಟ್ರ ಸೇರಿ ಎಲ್ಲ ಹಂತದ ಘಟಕಗಳಿಗೂ ನಿಯಮ ಅನ್ವಯಿಸುತ್ತದೆ. ಪಕ್ಷದ ಹಾಲಿ ರಾಜ್ಯಾಧ್ಯಕ್ಷರು ಎರಡೂ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಮೂರನೇ ಅವಧಿಗೆ ಮುಂದುವರಿಯಲು ಅವಕಾಶವಿಲ್ಲ. ಇದರಿಂದಾಗಿ ಹೊಸ ಸಾರಥಿ ನೇಮಿಸಲು ವರಿಷ್ಠರು ತೀರ್ವನಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ದಕ್ಷಿಣಕನ್ನಡ ಲೋಕಸಭೆ ಕ್ಷೇತ್ರಕ್ಕೆ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳಲು ಹಾಲಿ ಅಧ್ಯಕ್ಷರಿಗೆ ದೆಹಲಿ ನಾಯಕರು ಗ್ರೀನ್ ಸಿಗ್ನಲ್ ನೀಡಿದ್ದು, ಕ್ಷೇತ್ರಕ್ಕೆ ಹೆಚ್ಚಿನ ಸಮಯ ಮೀಸಲು ಅನಿವಾರ್ಯವಾಗಲಿದೆ. ರಾಜ್ಯ ಸಮಿತಿಗೆ ಯಾರು ಸಾರಥಿಯಾದರೆ ಸೂಕ್ತ ? ಎಂದು ವರಿಷ್ಠರು ಮಾಹಿತಿ ಸಂಗ್ರಹಿಸಿ, ತಮ್ಮದೇ ಆದ ಮೂಲದಿಂದ ಅಭಿಪ್ರಾಯ ಕಲೆಹಾಕಿದ್ದಾರೆ. ಸದ್ಯಕ್ಕೆ ರಾಜ್ಯಸಮಿತಿಗೆ ಹೊಸ ಅಧ್ಯಕ್ಷರು, ಕೆಲವು ಪದಾಧಿಕಾರಿಗಳನ್ನು ನೇಮಿಸಲಿದ್ದಾರೆ. ಲೋಕಸಭೆ ಚುನಾವಣೆ ನಂತರ ಬೂತ್, ಮಂಡಲ, ಜಿಲ್ಲಾ ಘಟಕಗಳ ಪುನರ್ ಸಂಘಟನೆಯಾಗಲಿದೆ.
ಇದೇ ಸಂದರ್ಭದಲ್ಲಿ ರಾಜ್ಯ ಸಮಿತಿ ಇನ್ನುಳಿದ ಪದಾಧಿಕಾರಿಗಳು ಬದಲಾಗಲಿದ್ದು, ಕೋರ್ ಕಮಿಟಿ ಮತ್ತು ಕಾರ್ಯಕಾರಿಣಿ ಸಮಿತಿ ಪುನರ್ ರಚನೆಯಾಗಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಕೋರ್ ಕಮಿಟಿ, ಕಾರ್ಯಕಾರಿಣಿ ಸಭೆ:ಬೆಂಗಳೂರಿನ ಅರಮನೆ ಮೈದಾನದಲ್ಲಿ ಪಕ್ಷದ ರಾಜ್ಯ ಕೋರ್ ಕಮಿಟಿ ಹಾಗೂ ಕಾರ್ಯಕಾರಿಣಿ ಸಭೆ ಆ.26ಕ್ಕೆ ನಡೆಯುವುದು ಬಹುತೇಕ ಖಚಿತವಾಗಿದೆ. ವಿಧಾನಸಭೆ ಪ್ರತಿಪಕ್ಷ ನಾಯಕ, ಪಕ್ಷದ ಹಾಲಿ ಅಧ್ಯಕ್ಷ, ಕೆಲ ಪದಾಧಿಕಾರಿಗಳಿಗೆ ವಿದಾಯ ಹೇಳಿ ಹೊಸಬರ ಹೆಸರು ಘೋಷಣೆಗೆ ವೇದಿಕೆ ಆಗಬಹುದು ಎಂದು ರ್ತಸಲಾಗುತ್ತಿದೆ. ಮುಂದಿನ ಲೋಕಸಭೆ ಚುನಾವಣೆ ಪೂರ್ವ ಚಟುವಟಿಕೆಗಳಿಗೆ ಸಿದ್ಧತೆ ಕುರಿತು ಚರ್ಚೆಯೇ ಈ ಸಭೆ ಮತ್ತೊಂದು ಕಾರ್ಯಸೂಚಿಯಾಗಿದ್ದು, ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಪರಾಮಶಿಸಿ ಮುಂದಿನ ನಡೆಯ ಬಗ್ಗೆ ನಿರ್ಣಯಗಳಾಗಲಿವೆ ಎಂದು ಹೇಳಲಾಗಿದೆ.
ಊಹಾಪೋಹಗಳಿಗೆ ತೆರೆ:ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಭರ್ತಿಗೆ ಮುನ್ನವೇ ವಿಧಾನ ಮಂಡಲದ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡಿ, ಈ ಕುರಿತು ಎಲ್ಲ ಊಹಾಪೋಹಗಳಿಗೆ ವರಿಷ್ಠರು ತೆರೆ ಎಳೆಯಲಿದ್ದಾರೆ. ಪ್ರತಿಪಕ್ಷ ನಾಯಕ ಸ್ಥಾನ ಲಿಂಗಾಯತ ಮತ್ತು ಪಕ್ಷ ರಾಜ್ಯಾಧ್ಯಕ್ಷ ಸ್ಥಾನ ಒಕ್ಕಲಿಗ ಸಮುದಾಯದವರು ನೇಮಕವಾಗುವ ಸಂಭವವಿದ್ದು, ಪಕ್ಷದ ರಾಜ್ಯ ನಾಯಕರಿಂದ ಅಭಿಪ್ರಾಯ ಪಡೆದಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ಸೇರಿ ಕೆಲವು ಹಿರಿಯ ನಾಯಕರು ಮೂರ್ನಾಲ್ಕು ಹೆಸರುಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು:ವಿಧಾನಸಭೆ ಚುನಾವಣೆ ಸೋಲಿಗೆ ಕಾರಣಗಳ ವಿಶ್ಲೇಷಣೆ, ಪರಿಹಾರೋಪಾಯಗಳ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ಈ ನಡುವೆ ಕೆಲ ಎಡವಟ್ಟುಗಳಿಂದ ಕಾರ್ಯಕರ್ತರಿಗೆ ಆಗಿರುವ ನೋವಿನ ಉಪಶಮನಕ್ಕೆ ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ.
ಮುಖಂಡರು ಹಾಗೂ ಕಾರ್ಯಕರ್ತರು ಬೆಸೆಯುವ ಉದ್ದೇಶ ದಿಂದ ‘ಉಪಾಹಾರ ಬೈಠಕ್’ ಎಂಬ ವಿನೂತನ ಕಾರ್ಯಕ್ರಮ ಕೈಗೆತ್ತಿ ಕೊಂಡಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆಯಂತೆ ಹಿರಿಯ ನಾಯಕರು ಮುನ್ನುಡಿ ಬರೆದಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಡಿ.ವಿ.ಸದಾನಂದಗೌಡ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಸೇರಿ ಕೆಲವು ಮುಖಂಡರು ಈಗಾಗಲೆ ಬೈಠಕ್​ನಲ್ಲಿ ಭಾಗಿಯಾಗಿದ್ದಾರೆ. ನಗರ ಪ್ರದೇಶಗಳಲ್ಲಿ ವಾರ್ಡ್, ಉಳಿದೆಡೆ ಮಂಡಲ ಅಥವಾ ಶಕ್ತಿ ಕೇಂದ್ರಕ್ಕೊಂದರಂತೆ ಉಪಾಹಾರ ಬೈಠಕ್ ಸದ್ಯಕ್ಕೆ ಗೊತ್ತುಪಡಿಸಿದ್ದು, ಆಸಕ್ತಿಗೆ ಅನುಗುಣವಾಗಿ ಈ ಸಂಖ್ಯೆ ದ್ವಿಗುಣವಾಗಿಸಲು ಅವಕಾಶ ಕಲ್ಪಿಸಲಾಗಿದೆ.
ಹಿರಿಯ ಮುಖಂಡರು ತಾವೇ ಖುದ್ದಾಗಿ ಯಾರಾದರೊಬ್ಬ ಕಾರ್ಯಕರ್ತರಿಗೆ ಮುಂಚಿತವಾಗಿ ತಿಳಿಸಿ, ಅವರ ಮನೆ ಬಳಿಯೇ ‘ಉಪಹಾರ ಬೈಠಕ್’ ಗೊತ್ತುಪಡಿಸಲಿದ್ದಾರೆ. ಹಿರಿಯ ಮುಖಂಡ ಹಾಗೂ ಅವರೊಂದಿಗೆ ತೆರಳುವವರು ಅವರವರ ಮನೆಯಲ್ಲೇ ಸಿದ್ಧಪಡಿಸಿದ ಉಪಾಹಾರ, ಊಟದೊಂದಿಗೆ ಈ ಬೈಠಕ್​ನಲ್ಲಿ ಪಾಲ್ಗೊಳ್ಳುವರು. ಕಾರ್ಯಕ್ರಮಕ್ಕೆ ಗೊತ್ತುಪಡಿಸಿದ ಕಾರ್ಯಕರ್ತ, ಆತ ಆಹ್ವಾನಿಸಿದ ಕಾರ್ಯಕರ್ತ ಕೂಡ ತಂತಮ್ಮ ಮನೆಯಲ್ಲೇ ಉಪಾಹಾರ, ಊಟ ಸಿದ್ಧಪಡಿಸಿಕೊಂಡು ಬರಬೇಕು. ಒಟ್ಟಿಗೆ ಕುಳಿತು ದೈನಂದಿನ ಜೀವನ, ವಿವಿಧ ವಿಷಯಗಳ ಬಗ್ಗೆ ಚರ್ಚೆ, ಅನುಭವಗಳ ವಿನಿಮಯ ಹಾಗೂ ಸಹಪಂಕ್ತಿ ಉಪಾಹಾರ ಅಥವಾ ಊಟ ಸೇವನೆಯೂ ನಡೆಯುತ್ತದೆ.
ವ್ಯತ್ಯಾಸ ನಿವಾರಣೆ:ಪರಸ್ಪರ ಆತ್ಮೀಯ ಮಾತುಕತೆಯು ಮುಖಂಡ ಹಾಗೂ ಕಾರ್ಯಕರ್ತನೆಂಬ ವ್ಯತ್ಯಾಸ ನಿವಾರಣೆ, ಕಡೆಗಣಿಸಲಾಗಿದೆ ಎಂಬ ದೋಷಾರೋಪಣೆ ಮುಕ್ತಗೊಳಿಸಲಿದೆ. ಮುಖಂಡರು ಹಾಗೂ ಕಾರ್ಯಕರ್ತರ ಬಂಧ ಉತ್ತಮವಾಗಲಿದೆ. ಸಂಘಟನೆಗೆ ಬಲ, ಮುಂದಿನ ಲೋಕಸಭೆ ಚುನಾವಣೆಗೆ ಅನುಕೂಲವೆಂದು ಈ ತಂತ್ರಗಾರಿಕೆ ಹೆಣೆಯಲಾಗಿದೆ. ಕೇಂದ್ರದ ಸಚಿವರು, ಮಾಜಿ ಸಚಿವರು, ಸಂಸದರು, ರಾಜ್ಯದ ಮಾಜಿ ಸಿಎಂಗಳು, ಮಾಜಿ ಸಚಿವರು, ಶಾಸಕರು ಸೇರಿ ಹಿರಿಯ ಮುಖಂಡರು ತಲಾ ಒಂದು ಕಡೆ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆಯಂತೆ ‘ಉಪಾಹಾರ ಬೈಠಕ್’ ವಿವಿಧ ಹಂತಗಳಲ್ಲಿ ಚಾಲನೆ ನೀಡಲಾಗಿದೆ. ಮುಖಂಡರು ಹಾಗೂ ಕಾರ್ಯಕರ್ತರ ಸಂಬಂಧ ಬೆಸೆದು, ಸಂಘಟನೆ ಗಟ್ಟಿಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ.
| ಸಿದ್ದರಾಜು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ.

ತಿರುಪತಿ ಭಕ್ತಾದಿಗಳ ಗಮನಕ್ಕೆ.. ಪಾದಚಾರಿ ಮಾರ್ಗದಲ್ಲಿ ಇನ್ಮುಂದೆ ಕೈಯಲ್ಲಿ ಕೋಲು, ಗುಂಪಲ್ಲಿ ಗೋವಿಂದ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
