ಬೆಂಗಳೂರು:ದೇಶದ ಮುಂಚೂಣಿಯಲ್ಲಿರುವ ಮ್ಯಾನ್​ಕೈಂಡ್​ ಫಾರ್ಮಾ ಲಿ.ನ ಗರ್ಭಧಾರಣೆ ಪತ್ತೆ ಕಾರ್ಡ್​ “ಪ್ರೆಗಾ ನ್ಯೂಸ್​’ ಉತ್ಪನ್ನದ ನೂತನ ಬ್ರ್ಯಾಂಡ್​ ಅಂಬಾಸಿಡರ್​ ಆದ ಬಹುಭಾಷಾ ನಟಿ ಕಾಜಲ್​ ಅಗರ್ವಾಲ್​, “ಎಕ್ಸ್​ಪರ್ಟ್​ ಪ್ರಗ್ನೆಸಿ ಕೇರ್​ ಸಲೂಶನ್​’ ಶ್ರೇಣಿಯ 6 ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.
ಭಾನುವಾರ ಖಾಸಗಿ ಹೋಟೆಲ್​ನಲ್ಲಿ ಆಯೋಜಿಸಿದ್ದ ಸುಸಜ್ಜಿತ ಕಾರ್ಯಕ್ರಮದಲ್ಲಿ ಗರ್ಭ ಧರಿಸುವ ಫಲವತ್ತಾದ ದಿನ ಗುರುತಿಸುವ “ಓವಾ ನ್ಯೂಸ್​ ಓವಲೇಷನ್​ ಡಿಟೆಕ್ಷನ್​ ಕಿಟ್​’, ಗರ್ಭಧಾರಣೆಗೆ ಮುನ್ನ ದೇಹಕ್ಕೆ ಅಗತ್ಯವಿರುವ ಕಬ್ಬಿಣ ಮತ್ತು ಫಾಲಿಕ್​ ಆಮ್ಲ ಅಂಶ ಹೊಂದಿರುವ “ಪ್ರೆಗಾ ಹೋಪ್​ ಪ್ರೀಕನ್ಸೆಪ್ಸನ್​ ಟ್ಯಾಬ್ಲೆಟ್​’ ಹಾಗೂ ಗರ್ಭಧಾರಣೆಗೆ ಲವತ್ತತೆ ಹೆಚ್ಚಿಸಲು ದಂಪತಿಗಳಿಗೆ ನೆರವಾಗುವ “ಪ್ರೆಗಾ ಹೋಪ್​ ರ್ಟಿಲಿಟಿ ಲೂಬ್ರಿಕೆಂಟ್​’ ಉತ್ಪನ್ನವನ್ನು ಏಕಕಾಲದಲ್ಲಿ ಅನಾವರಣ ಮಾಡಿದರು.
ಅಲ್ಲದೆ, ಪ್ರೆಗಾ ನ್ಯೂಸ್​ ಮತ್ತು ಪ್ರೆಗಾ ನ್ಯೂಸ್​ ಅಡ್ವಾನ್ಸ್​’ ಗರ್ಭಧಾರಣೆ ಪರೀಕ್ಷೆ ಕಿಟ್​ ಆಗಿದೆ. “ಪ್ರೆಗಾ ನ್ಯೂಸ್​ ವ್ಯಾಲ್ಯೂ ಪ್ಯಾಕ್​’ ಎರಡು ಮಾದರಿಯ ಗರ್ಭಧಾರಣೆ ಪರೀಕ್ಷಾ ಕಿಟ್​ ಒಳಗೊಂಡಿದೆ. “ಪ್ರೆಗಾ ಹ್ಯಾಪಿ ಆ್ಯಂಟಿ ಸ್ಟ್ರೆಚ್​ ಮಾರ್ಕ್​ ಕ್ರೀಂ’ಉತ್ಪನ್ನ ಪ್ರಸವಪೂರ್ವ ಮತ್ತು ಗರ್ಭಧಾರಣೆ ನಂತರದ ಹಂತದಲ್ಲಿ ಗುರುತು, ತುರಿಕೆ ಕಡಿಮೆಗೆ ಸಹಾಯ ಮಾಡುತ್ತದೆ.ಚೆನ್ನೈ, ಹೈದರಾಬಾದ್​, ಬೆಂಗಳೂರು ಸೇರಿ ದಕ್ಷಿಣ ಭಾರತದ ವಿವಿಧ ಭಾಗಗಳಿಂದ ಆಗಮಿಸಿದ್ದ 70ಕ್ಕೂ ಅಧಿಕ ತಾಯಂದಿರು ಕಾರ್ಯಕ್ರಮಕ್ಕೆ ಸಾಯಾಗಿದ್ದರು.ನಟಿಯರಾದ ಮೇನಾರಾಜ್​, ಸಂಜನಾ ಗಲ್ರಾನಿ, ಲಾಸ್ಯ ಮಂಜುನಾಥ್​, ನಿಶಾ ಅಗರ್ವಾಲ್​ ಸೇರಿ ಮತ್ತಿತರರಿದ್ದರು.
ರಾಜ್ಯಕ್ಕೆ ಮುಂಗಾರು ಪ್ರವೇಶ:ನಾಳೆ 15 ಜಿಲ್ಲೆಗಳಿಗೆ ಯೆಲ್ಲೋ ಎಚ್ಚರಿಕೆ
10 ಸಾವಿರ ಕೋಟಿ ವಹಿವಾಟುಔಷಧ ಉತ್ಪಾದನೆ ಕ್ಷೇತ್ರದಲ್ಲಿ ದೇಶದಲ್ಲೇ ನಂ.1 ಕಂಪನಿಯಾಗಿರುವ ಮ್ಯಾನ್​ಕೈಂಡ್​ ಫಾರ್ಮಾ, 10 ಸಾವಿರ ಕೋಟಿ ರೂ.ವಹಿವಾಟು ನಡೆಸುತ್ತಿದೆ. ಕಂಪನಿಯಲ್ಲಿ 21 ಸಾವಿರ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಮ್ಯಾನ್​ಕೈಂಡ್​ ಫಾರ್ಮಾದ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಸಹ ಉಪಾಧ್ಯಕ್ಷ ಜಾಯ್​ ಚಟರ್ಜಿ ಹೇಳಿದರು. ನಟಿಯರಾದ ಸೋನಂ ಕಪೂರ್​, ಪ್ರಿಯಾಮಣಿ, ಸ್ಮ$ತಿ ಖನ್ನಾ, ಅನಿತಾ ಹಸ್ಸಾನಂದಾನಿ, ಮಾಹಿ ವಿಜ್​, ಪೂಜಾ ಬ್ಯಾನರ್ಜಿ, ಕಿಶ್ವರ್​ ಮರ್ಚೆಂಟ್​ ಪ್ರೆಗಾ ನ್ಯೂಸ್​ ಉತ್ಪನ್ನದ ಅಂಬಾಸಿಡರ್​ಯಾಗಿದ್ದರು. ಹೊಸ ರಾಯಭಾರಿ ಕಾಜಲ್​ ಅಗರ್ವಾಲ್​, ನೂತನ 6 ಉತ್ಪನ್ನಗಳನ್ನು ಮಾರುಕಟ್ಟೆ ಬಿಡುಗಡೆ ಮಾಡಿದ್ದಾರೆ. ಇದರಿಂದಾಗಿ ದಣ ಭಾರತದಲ್ಲಿ ಮಾರುಕಟ್ಟೆ ವೃದ್ಧಿಗೆ ಅನುಕೂಲವಾಗುತ್ತದೆ ಎಂದರು.
ಮದುವೆ ಮುನ್ನ ತಾಯ್ತನಕ್ಕೆ ನಾನು ಸಿದ್ಧಳಾಗಿರಲಿಲ್ಲ. ಮೂರು ತಿಂಗಳು ಗರ್ಭಿಣಿ ಇದ್ದ ವೇಳೆ ದೊಡ್ಡ ಸಾಹಸಮಯ ಚಿತ್ರವೊಂದಕ್ಕೆ ಸಹಿ ಹಾಕಿದ್ದೆ. ಆದರೆ, ಮಗುವಿಗೆ ತೊಂದರೆಯಾಗುವುದು ಸೇರಿ ಇತರೆ ಕಾರಣಗಳಿಂದ ಈ ಸಿನಿಮಾದಿಂದ ಹಿಂದೆ ಸರಿದೆ. ಮಕ್ಕಳ ಪಾಲನೆ ವಿಚಾರದಲ್ಲಿ ತಾಯಿ ಪಾತ್ರ ಪ್ರಮುಖವಾದದ್ದು. ತಾಯ್ತನ ಎಂಬುದು ಜೀವನದ ಒಂದು ಸುಂದರ ಪ್ರಯಾಣ. ಈ ವೇಳೆ ಮಹಿಳೆಯರಿಗೆ ಗರ್ಭಧಾರಣೆ ಪರೀಕ್ಷೆ ಮುಖ್ಯವಾಗಿದೆ. ದೇಶದ ವಿಶ್ವಾಸಾರ್ಹ ಗರ್ಭಧಾರಣೆ ಪತ್ತೆ ಮಾಡುವ ಪ್ರೆಗಾ ನ್ಯೂಸ್​ ಉತ್ಪನ್ನಕ್ಕೆ ರಾಯಭಾರಿಯಾಗಿದ್ದಕ್ಕೆ ಖುಷಿಯಾಗಿದೆ.ಕಾಜಲ್​ ಅಗರ್ವಾಲ್​, ನಟಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + seven =
Remember me
