ಬೆಂಗಳೂರು:ಕೃಷಿ ವಲಯದ ಆಮೂಲಾಗ್ರ ಸುಧಾರಣೆ ಹಾಗೂ ಅನ್ನದಾತರಿಗೆ ಆಸೆಯಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ 3 ಹೊಸ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಸಮರ್ಥಿಸಿಕೊಂಡರು.
ವಿಕಾಸಸೌಧದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿ ನಡೆಸಿದ ಅವರು, ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ಸುಗಮೀಕರಣ), ರೈತರ ಬೆಲೆ ಭರವಸೆ (ಸಬಲೀಕರಣ ಮತ್ತು ಸಂರಕ್ಷಣೆ) ಹಾಗೂ ಕೃಷಿ ಸೇವೆಗಳ (ಒಪ್ಪಂದ ಮತ್ತು ಅಗತ್ಯ ಸರಕು) ತಿದ್ದುಪಡಿ ಮಸೂದೆಗಳನ್ನು ಸಂಸತ್ ಅಂಗೀಕರಿಸಿ, ಕಾನೂನಿನ ಮುದ್ರೆಯೊತ್ತಿವೆ. ಆಹಾರ ಕೊರತೆ ನೀಗಿಸುವುದಕ್ಕೆಂದು ಜಾರಿಯಲ್ಲಿದ್ದ ಕಾನೂನು-ಕಟ್ಟಳೆಗಳು ರೈತರನ್ನು ಕಟ್ಟಿ ಹಾಕಿದ್ದವು. ಈ ಸಂಕೋಲೆಗಳಿಂದ ರೈತರನ್ನು ಮುಕ್ತರಾಗಿಸಿ, ಸ್ವತಂತ್ರ, ಸ್ವಾಭಿಮಾನ ಮತ್ತು ಸದೃಢ ಬದುಕು ಕಟ್ಟಿಕೊಳ್ಳಲು ಹೊಸ ಕಾಯ್ದೆಗಳು ಅನುವು ಮಾಡಿಕೊಡಲಿವೆ ಎಂದರು.
ಕನಿಷ್ಠ ಬೆಂಬಲ ಬೆಲೆ ಯೋಜನೆ ಯಥಾರೀತಿ ಮುಂದುವರಿಯಲಿದೆ. ಸ್ವಾಮಿನಾಥನ್ ಆಯೋಗದ ವರದಿ, ಶಿಫಾರಸು ಪ್ರಕಾರ ಉತ್ಪಾದನಾ ವೆಚ್ಚಕ್ಕೆ 1.5ರಿಂದ 2 ಪಟ್ಟು ಹೆಚ್ಚು ಬೆಲೆ ನಿಗದಿಪಡಿಸಿ, ರೈತರ ಬಗೆಗಿನ ಬದ್ಧತೆಯನ್ನು ಸಾಬೀತುಪಡಿಸಿದೆ. ಗುತ್ತಿಗೆ ಕೃಷಿ ಒಪ್ಪಂದದಿಂದ ರೈತರ ಯಾವಾಗ ಬೇಕಾದರೂ ಹೊರಗೆ ಬರಲು ಅವಕಾಶವಿದೆ. ಒಂದು ದೇಶ- ಒಂದು ಕೃಷಿ ಮಾರುಕಟ್ಟೆಯಿಂದಾಗಿ ರೈತರು ತಾವು ಬೆಳೆದ ಬೆಳೆಗೆ ಬೆಲೆ ನಿಗದಿಪಡಿಸಿ, ಇಚ್ಛೆಯನುಸಾರ ಮಾರಾಟ ಮಾಡುವುದಕ್ಕೆ ಸ್ವತಂತ್ರರಾಗಿದ್ದಾರೆ ಎಂದು ವಿವರಿಸಿದರು.
ದಲ್ಲಾಳಿ ಪರ ಕೈ ಹೋರಾಟ:ದಲ್ಲಾಳಿಗಳ ಪರವಾಗಿ ಕಾಂಗ್ರೆಸ್ ಇನ್ನಿತರ ಸಂಘಟನೆಗಳು ಹೋರಾಟಕ್ಕೆ ಇಳಿದಿವೆ. ಕಮಿಷನ್​ಗಾಗಿ ರೈತರ ಹಿತ ಕಡೆಗಣಿಸಿವೆ. ರೈತರಿಗೆ ಬಲ ತುಂಬುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹೆಜ್ಜೆಯಿಟ್ಟಿರುವುದು ಕಾಂಗ್ರೆಸ್​ಗೆ ಹೊಟ್ಟೆಯುರಿ ತಂದಿದೆ. ಅಧಿಕಾರ ಮತ್ತೆಂದೂ ಸಿಗುವುದಿಲ್ಲವೆಂಬ ದಿಗಿಲಿನಿಂದ ಅಪಪ್ರಚಾರ ಮಾಡಿ ರೈತರ ದಾರಿ ತಪ್ಪಿಸಲು ಹವಣಿಸಿದೆ ಎಂದು ಸದಾನಂದಗೌಡ ಆರೋಪಿಸಿದರು.
ಇದನ್ನೂ ಓದಿ:ಸುರೇಶ್​ ಅಂಗಡಿಯವರ ಮನೆಗೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​
ಎಪಿಎಂಸಿ, ಕೃಷಿ ರಾಜ್ಯಗಳಿಗೆ ಸಂಬಂಧಿಸಿದ ವಿಷಯವೇ ಆಗಿದ್ದರೂ ಕೇಂದ್ರ ಸರ್ಕಾರ ಆಗತ್ಯ ನೆರವು ಹಾಗೂ ಬಲಪಡಿಸುವುದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಬಾರದು ಎಂದೇನಿಲ್ಲ ಎಂದು ಸ್ಪಷ್ಟಪಡಿಸಿದರು.
ದ್ವಿಮುಖ ನೀತಿ:ಎಪಿಎಂಸಿ ಹಾಗೂ ಭೂಸುಧಾರಣೆ ಕಾಯ್ದೆಗಳಿಗೆ ತಿದ್ದುಪಡಿ ವಿಚಾರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗೊಂದು, ಇಲ್ಲದಿದ್ದಾಗೊಂದು ಎಂಬ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ್ ಟೀಕಿಸಿದರು. ಕೃಷಿ ಉತ್ಪನ್ನಗಳ ಮಾರಾಟದಲ್ಲಿ ರೈತರ ಶೋಷಣೆ ತಪ್ಪಿಸುವುದು, 15.35 ಲಕ್ಷ ಹೆಕ್ಟೇರ್ ಬೀಳು ಭೂಮಿ ಅಭಿವೃದ್ಧಿ ಹಾಗೂ ಅನಗತ್ಯ ಕಿರಿಕಿರಿ ಹೋಗಲಾಡಿಸುವುದು ತಿದ್ದುಪಡಿ ಕಾಯ್ದೆಗಳ ಮುಖ್ಯ ಉದ್ದೇಶವಾಗಿದೆ ಎಂದರು. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 10,51,024 ಮೆಟ್ರಿಕ್ ಟನ್ ಯೂರಿಯಾ ಸೇರಿ 25,02,034 ಮೆಟ್ರಿಕ್ ಟನ್ ರಸಗೊಬ್ಬರ ಪೂರೈಸಿದ್ದು, ಕಳೆದ ಹಂಗಾಮಿಗೆ ಹೋಲಿಸಿದರೆ 4,95,341 ಮೆಟ್ರಿಕ್ ಟನ್ ಹೆಚ್ಚುವರಿ ಸರಬರಾಜಾಗಿದೆ. ಕಾಳಸಂತೆ ಹಾಗೂ ಅಕ್ರಮ ಪತ್ತೆ ಹಚ್ಚಿ 148 ಅಂಗಡಿಗಳ ಲೈಸನ್ಸ್​ಗಳನ್ನು ಅಮಾನತು ಮಾಡಲಾಗಿದೆ ಎಂದು ಪಾಟೀಲ್ ಮಾಹಿತಿ ನೀಡಿದರು.
ಕೃಷಿ ವಲಯಕ್ಕೆ ಸಂಬಂಧಿಸಿದ 3 ಮಸೂದೆಗಳನ್ನು ಮುಚ್ಚುಮರೆಯಿಂದ ತಂದಿದ್ದಲ್ಲ. ಈ ಮಸೂದೆಗಳ ಕುರಿತು ನೀತಿ ಆಯೋಗದ ಸಭೆಯಲ್ಲಿ 12 ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸಾರ್ವಜನಿಕರ ಚರ್ಚೆಗೆ ಅವಕಾಶ ಕಲ್ಪಿಸಿದ ನಂತರವೇ ಸಂಸತ್​ನಲ್ಲಿ ಮಂಡಿಸಿ, ಅಂಗೀಕರಿಸಲಾಗಿದೆ.
| ಡಿ.ವಿ.ಸದಾನಂದಗೌಡಕೇಂದ್ರ ಸಚಿವ.
ಸೊಳ್ಳೆಗಳಿಗೆ ದಿನವೂ ರಕ್ತ ಕುಡಿಸುತ್ತಾರೆ ಈ ವಿಜ್ಞಾನಿ- ಕಾರಣ ಏನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 12 =
Remember me
