ಬೆಂಗಳೂರು:ಕಳೆದೊಂದು ವಾರದಿಂದ ಏರುತ್ತಲೇ ಇದ್ದ ಕರೊನಾ ಪೀಡಿತರ ಸಂಖ್ಯೆಯಲ್ಲಿ ನಿನ್ನೆ ಭಾರಿ ಇಳಿಕೆಯಾಗಿ ನೆಮ್ಮದಿ ಮೂಡಿಸಿತ್ತು. ಆದರೆ ಇಂದು ಹೊಸ ದಾಖಲೆ ಬರೆದಿದೆ. ಒಂದೇ ದಿನದಲ್ಲಿ ಈವರೆಗಿನ ಅತ್ಯಧಿಕ 9 ಸಾವಿರಕ್ಕೂ ಅಧಿಕ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಒಟ್ಟು ಸೋಂಕಿತರ ಸಂಖ್ಯೆ ಕೂಡ 3.50 ಲಕ್ಷ ದಾಟಿದೆ.
ನಿನ್ನೆಯ ಕೋವಿಡ್​ ಸಂಖ್ಯೆ 6,495 ಆಗಿದ್ದರೆ, ಇಂದು ಕೋವಿಡ್​ಗೆ ಒಳಗಾದವರು 9,058. ಜತೆಗೆ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ ಕೂಡ ಕಡಿಮೆಯಾಗಿದೆ. ನಿನ್ನೆ 7,238 ಜನರು ಗುಣವಾಗಿದ್ದರೆ, ಇಂದು ಈ ಸಂಖ್ಯೆ 5,159ಕ್ಕೆ ಇಳಿದಿದೆ.
ಇದನ್ನೂ ಓದಿ;20 ಲಕ್ಷ ಕರೊನಾ ಕೇಸ್​ಗಳು ಒಂದೇ ತಿಂಗಳಲ್ಲಿ…! 28 ಸಾವಿರ ಸಾವು; ಭಾರತದ್ದು ಜಗತ್ತಿನಲ್ಲೇ ದಾಖಲೆ….!
ರಾಜ್ಯದಲ್ಲಿ ಒಟ್ಟು ಕೋವಿಡ್​ ಪೀಡಿತರ ಸಂಖ್ಯೆ 3,51,481 ಆಗಿದ್ದು, ಸಕ್ರಿಯ ಕೇಸ್​ಗಳ ಸಂಖ್ಯೆ ಕೂಡ 90,999ಕ್ಕೆ ಏರಿಕೆಯಾಗಿದೆ.ಮೃತರ ಸಂಖ್ಯೆಯೂ ಹೆಚ್ಚಾಗಿದ್ದು, ಇಂದು 135 ಜನರು ಸಾವಿಗೀಡಾಗಿದ್ದಾರೆ. ನಿನ್ನೆ ಈ ಸಂಖ್ಯೆ 113 ಆಗಿತ್ತು. ಒಟ್ಟು ಸಾವಿನ ಸಂಖ್ಯೆ 5,837ಕ್ಕೆ ತಲುಪಿದೆ. ಸದ್ಯ 762 ಜನರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜಧಾನಿಯಲ್ಲಿಯೂ ಹೊಸ ರೋಗಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಾಗಿದೆ. ನಿನ್ನೆ 1,862 ಜನರು ಸೋಂಕಿಗೆ ಒಳಗಾಗಿದ್ದರೆ, ಇಂದು ಈ ಸಂಖ್ಯೆ 2,967 ಆಗಿದೆ. ಒಟ್ಟು ಕೋವಿಡ್​ ರೋಗಿಗಳ ಸಂಖ್ಯೆ 1,32,092ಕ್ಕೆ ತಲುಪಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದವರ ಸಂಖ್ಯೆ ನಿನ್ನೆ 2,422 ಆಗಿದ್ದರೆ, ಇಂದು ಇದರಲ್ಲಿ ಭಾರಿ ಇಳಿಕೆಯಾಗಿ 1,137 ಜನರಷ್ಟೇ ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 91,180 ಜನರು ಗುಣವಾಗಿದ್ದಾರೆ. ಇನ್ನು ಇಂದು 40 ಜನರು ಸಾವಿಗೀಡಾಗುವ ಮೂಲಕ 2,005 ಜನರು ಕರೊನಾದಿಂದ ಮೃತಪಟ್ಟಂತಾಗಿದೆ.
ಜಿಲ್ಲಾವಾರು ಕೋವಿಡ್​ ಅಂಕಿ-ಅಂಶ

VIDEO: ಬಗ್ಗಿ ಹೋದರೂ ಬೆತ್ತಲು ಬಚ್ಚಿಡಲಾಗಲಿಲ್ಲ! ಲೈವ್​ನಲ್ಲಿ ಆ್ಯಂಕರ್​ ಪತ್ನಿ ಎಡವಟ್ಟು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
