ಬೆಂಗಳೂರು:ಕೆಂಪೇಗೌಡ ವಿಮಾನ ನಿಲ್ದಾಣ ಸಂಸ್ಥೆ ಭದ್ರತಾ ತಪಾಸಣೆಗಾಗಿ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಪರಯಾಣಿಕರ ಸಮಸ್ಯೆಯನ್ನು ಬಗೆ ಹರಿಸಲು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಿಂದ ಪ್ರಯಾಣಿಸುವ ಪ್ರಯಾಣಿಕರು ಭದ್ರತಾ ತಪಾಸಣೆನೂತನವಾದ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ.
ಭದ್ರತಾ ತಪಾಸಣೆಗಾಗಿ ಕಂಪ್ಯೂಟರ್​ ಟೊಮೊಗ್ರಫಿ ಎಕ್ಸ್-ರೇ (CTX) ಸುಧಾರಿತ ಯಂತ್ರಗಳನ್ನು ಅಳವಡಿಸಲು ವಿಮಾನ ನಿಲ್ದಾಣ ಸಿಬ್ಬಂದಿ ತಯಾರಿ ನಡೆಸಿದ್ದಾರೆ. ವಿಮಾನ ನಿಲ್ದಾಣವು 2023ರ ಡಿಸೆಂಬರ್​ನಿಂದ ಹೊಸ ತಂತ್ರಜ್ಞಾನವನ್ನು ಜಾರಿಗೆ ತರಲು ಯೋಜಿಸುತ್ತಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಿಟಿಎಸ್​ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವ ದೇಶದ ಮೊದಲ ವಿಮಾನ ನಿಲ್ದಾಣವಾಗಿದೆ.
ಕಂಪ್ಯೂಟರ್​ ಟೊಮೊಗ್ರಫಿ ಎಕ್ಸ್-ರೇ (CTX) ಸುಧಾರಿತ ಯಂತ್ರ ವಿಶೇಷತೆ:
ಈ ಹಿಂದೆ ಪ್ರಯಾಣಿಕರು ಬ್ಯಾಗ್​​ನಿಂದ ಎಲೆಕ್ಟ್ರಾನಿಕ್ ಸಾಧನಗಳಾದ ಫೋನ್ ಮತ್ತು ಲ್ಯಾಪ್‌ಟಾಪ್‌ಗಳಂತಹ ವಸ್ತುಗಳನ್ನು ಹೊರೆ ತೆಗೆದು ಪರಿಶೀಲನೆಗಾಗಿ ನೀಡಬೇಕು. ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ಅನಾನುಕೂಲವಾಗುತ್ತಿತ್ತು. ಕಂಪ್ಯೂಟರ್​ ಟೊಮೊಗ್ರಫಿ ಎಕ್ಸ್-ರೇ (CTX)ತಂತ್ರಜ್ಞಾನ ಇದರಿಂದ ಪ್ರಯಾಣಿಕರು ಭದ್ರತಾ ತಪಾಸಣೆಗಾಗಿ ಹೆಚ್ಚು ಸಮಯ ವ್ಯಯಿಸುವ ಸಮಸ್ಯೆ ತಪ್ಪುತ್ತದೆ. ಅಲ್ಲದೆ ಭದ್ರತಾ ಕಣ್ಗಾವಲು ಇನ್ನೂ ತೀಕ್ಷಣಗೊಳ್ಳುತ್ತದೆ.
ಸಿಟಿಎಕ್ಸ್​ ಯಂತ್ರವು ಅಟೋಮೆಟಿಕ್​ ಟ್ರೆ ರಿಟ್ರೈವಲ್​ ಸಿಸ್ಟಮ್ (ATRS) ವ್ಯವಸ್ಥೆಯನ್ನು ಹೊಂದಿದೆ. ಇದು ಪೂರ್ಣ ದೇಹವನ್ನು ಸ್ಕ್ಯಾನ್​ ಮಾಡುತ್ತದೆ. ಭದ್ರತಾ ಸಿಬ್ಬಂದಿ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಬ್ಯಾಗ್‌ ಒಳಗಿನ ವಸ್ತುಗಳನ್ನು ಆರಾಮವಾಗಿ ವೀಕ್ಷಿಸಬಹುದು. ಇದು ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಗೆ ಬೇಕಾದ ಟ್ರೇಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಸಿಟಿಆರ್​ ತಂತ್ರಜ್ಞಾನವು ಸ್ಫೋಟಕಗಳನ್ನು ಪತ್ತೆಹಚ್ಚುವ ಅಲಾರಾಮ್​ ವ್ಯವಸ್ಥೆ ಹೊಂದಿದೆ. ಹಾಗೇ ವಸ್ತುವಿನ 3D ಚಿತ್ರವನ್ನು ಭದ್ರತಾ ಸಿಬ್ಬಂದಿಗೆ ನೀಡುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 19 =
Remember me
