ಬಳ್ಳಾರಿ:ಡಿಎಆರ್​ ಪೊಲೀಸ್​ ಪೇದೆ ಅನುಮಾನಾಸ್ಪದ ಸಾವು ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪತ್ನಿಯಿಂದಲೇ ಪೇದೆ ಜಾಫರ್ ಸಾಹೀಬ್ ಬರ್ಬರ ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಸಂಬಂಧಿಗಳ‌ ಆರೋಪ ಹಾಗೂ ಪೊಲೀಸರ ಅನುಮಾನ ಎರಡೂ ಕೂಡ ಒಂದೇ ಆಗಿದೆ. ಜಾಫರ್​ ಕೊಲೆ ಮಾಡಿರುವುದು ಆತನ ಪತ್ನಿ ಹನುಮಕ್ಕಳೇ ಅಂದು ಸಂಶಯ ಶುರುವಾಗಿದೆ. ಜಾಫರ್ ಸಂಬಂಧಿಗಳಿಂದಲೂ ಹನುಮಕ್ಕಳ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೇ ಪ್ರಾಥಮಿಕ ಶಂಕಿತ ವ್ಯಕ್ತಿ ಜಾಫರ್ ಪತ್ನಿ ಎಂದು ಬಳ್ಳಾರಿ ಎಸ್ಪಿ ರಂಜಿತ್ ಬಂಡಾರು ತಿಳಿಸಿದ್ದಾರೆ.
ಹನುಮಕ್ಕ, ಜಾಫರ್​​ನ ಎರಡನೇ ಪತ್ನಿ. ಮೊದಲನೇ ಹೆಂಡತಿ ನವೀನ್ ತಾಜ್ ಬಿಟ್ಟು ಹಿಂದು ಯುವತಿ ಹನುಮಕ್ಕಳನ್ನು ಜಾಫರ್​ ಮದುವೆಯಾಗಿದ್ದ. ಹನುಮಕ್ಕ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಳೆ. ಈಕೆಯನ್ನು ಮದುವೆಯಾಗಿ ನಾಲ್ಕು ವರ್ಷದ ಬಳಿಕ ಜಾಫರ್​ ಮತ್ತೆ ಮೊದಲನೇ ಹೆಂಡತಿಯ ಸಂಗ ಮಾಡಿದ್ದ. ಇದರಿಂದ ಕೋಪಗೊಂಡು ಅನೇಕ ಬಾರಿ ಜಾಫರ್ ಸಂಬಂಧಿಗಳ‌ ಮುಂದೆಯೇ ಹನುಮಕ್ಕ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಳಂತೆ.
ಇದನ್ನೂ ಓದಿ:ಮೀಸಲಾತಿ ವಿಚಾರದಲ್ಲಿ ಸರ್ಕಾರಕ್ಕೆ ಬಿಗ್ ರಿಲೀಫ್; ಪಂಚಮಸಾಲಿ ಮೀಸಲಾತಿಗಿಲ್ಲ ಅಡ್ಡಿ.. ಮಧ್ಯಂತರ ಆದೇಶ ತೆರವುಗೊಳಿಸಿದ ಹೈಕೋರ್ಟ್
ಎಷ್ಟೇ ಹೇಳಿದರೂ ಮೊದಲ ಹೆಂಡತಿಯನ್ನು ಬಿಡದಿದ್ದಕ್ಕೆ ಹನುಮಕ್ಕ ಪ್ಲಾನ್ ಮಾಡಿ ಜಾಫರ್ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಅಂದಹಾಗೆ ಜಾಫರ್​ ಬಳ್ಳಾರಿಯ ಪೊಲೀಸ್ ವಸತಿ ಗೃಹದಲ್ಲಿ ಬುಧವಾರ ರಾತ್ರಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಕಿವಿಯಲ್ಲಿನ ರಕ್ತಸ್ರಾವದಿಂದ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಆತನನ್ನು ವಿಮ್ಸ್​ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜಾಫರ್​ ಮೃತಪಟ್ಟಿದ್ದ. ರಾಡ್​ನಿಂದ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಇದೀಗ ಆತನ ಎರಡನೇ ಪತ್ನಿಯ ವಿರುದ್ಧವೇ ಅನುಮಾನ ಬಲವಾಗಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಜಾಫರ್​​ 2008ರಲ್ಲಿ ಡಿಎಆರ್ ನೇಮಕವಾಗಿದ್ದ. (ದಿಗ್ವಿಜಯ ನ್ಯೂಸ್​)
ಕಲಬುರಗಿ ಮಹಾನಗರ ಪಾಲಿಕೆ BJP ತೆಕ್ಕೆಗೆ: ಮೇಯರ್ ಆಗಿ ವಿಶಾಲ್ ದರ್ಗಿ, ಉಪಮೇಯರ್ ಆಗಿ ಶಿವಾನಂದ ಆಯ್ಕೆ

ಹೆಣ್ಣು, ಹೊನ್ನು, ಮಣ್ಣು ಸಿಗಬೇಕು ಅಂದ್ರೆ ಪುಣ್ಯ ಬೇಕು; ಆನಂದ್ ಸಿಂಗ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 17 =
Remember me
