ರಾಯಚೂರು:ಅಂಕಲ್​ ಹಾಗೂ ಅಪ್ರಾಪ್ತೆಯ ಲವ್ವಿಡವ್ವಿ ಸೂಸೈಡ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಪ್ರಕರಣ ಸಂಬಂಧ ಮಹಿಳಾ ಸಾಂತ್ವಾನ ಕೇಂದ್ರದ ಮೇಲ್ವಿಚಾರಕಿಯನ್ನು ಬಂಧಿಸಲಾಗಿದೆ.
ಬಾಲಕಿಯು ಸಾಂತ್ವಾನ ಕೇಂದ್ರದಿಂದ ತಪ್ಪಿಸಿಕೊಳ್ಳಲು ಮೇಲ್ವೀಚಾರಕಿ ಅನುರಾಧ ಕುಮ್ಮಕ್ಕು ನೀಡಿದ್ದಾಳೆಂದು ಅಪ್ರಾಪ್ತ ಬಾಲಕಿಯ ಪೋಷಕರು ನೀಡಿದ ದೂರಿನನ್ವಯ ಅನುರಾಧಳನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಪ್ರೇಮ ವಿವಾಹ, ಒಳ್ಳೆಯ ಹುದ್ದೆಯಲ್ಲಿದ್ರೂ ಸಿಐಡಿ ಡಿವೈಎಸ್​ಪಿ ಲಕ್ಷ್ಮೀ ಆತ್ಮಹತ್ಯೆ ಶರಣಾಗಿದ್ದೇಕೆ: ಇಲ್ಲಿದೆ ಸ್ಫೋಟಕ ಮಾಹಿತಿ!
ಈಗಾಗಲೇ ಮದ್ವೆ ಆಗಿ ಎರಡು ಮಕ್ಕಳ ತಂದೆಯಾಗಿರುವ 37 ವರ್ಷದ ನರಸಿಂಹ ಅಪ್ರಾಪ್ತ ಬಾಲಕಿಯ ಜತೆ ಪ್ರೀತಿಯ ನಾಟಕವಾಡಿದ್ದ ಎಂದು ಪಾಲಕರು ಆರೋಪಿಸಿದ್ದಾರೆ. ವಿವಾಹಿತನೊಂದಿಗಿನ ಪ್ರೀತಿಗೆ ಬಾಲಕಿ ಮನೆಯವರು ವಿರೋಧಿಸಿದ ಹಿನ್ನೆಲೆಯಲ್ಲಿ ಡಿಸೆಂಬರ್ 12ರಂದು ಲಿಂಗಸಗೂರು ತಾಲೂಕಿನ ಪೈದೊಡ್ಡಿ ಗ್ರಾಮದಲ್ಲಿ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅಪ್ರಾಪ್ತ ಬಾಲಕಿ ಮೃತಪಟ್ಟರೆ, ನರಸಿಂಹ ಸ್ಥಿತಿ ಗಂಭೀರವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ:VIDEO| ರುಂಡವೇ ಇಲ್ದಿದ್ರೂ ದಾಳಿಗೆ ಯತ್ನಿಸಿದ ಹಾವು: ನೀವು ನೋಡಿರದ ಭಯಾನಕ ವಿಡಿಯೋ ಇದು!
ಘಟನೆ ಹಿನ್ನೆಲೆ ಬಾಲಕಿ ಪೋಷಕರಿಂದ ಹಟ್ಟಿ ಪೋಲೀಸ್ ಠಾಣೆಯಲ್ಲಿ ನರಸಿಂಹ ಹಾಗೂ ಮಹಿಳಾ ಸಾಂತ್ವಾನ ಕೇಂದ್ರದ ಮೇಲ್ವಿಚಾರಕಿ ಅನುರಾಧ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಮೇಲ್ವಿಚಾರಕಿ ಅರೆಸ್ಟ್ ಮಾಡಲಾಗಿದ್ದು, ನರಸಿಂಹ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.(ದಿಗ್ವಿಜಯ ನ್ಯೂಸ್​)
ಹೆಚ್ಚಿನ ವಿವರಣೆಗಾಗಿ ಈ ಕೆಳಗಿನ ಲಿಂಕ್​ ಮೇಲೆ ಕ್ಲಿಕ್ಕಿಸಿ
https://www.vijayavani.net/love-case-suicide/
ಊಟಕ್ಕೆಂದು ಪರಿಚಯಸ್ಥರ ಮನೆಗೆ ಹೋದ ಮಹಿಳಾ ಅಧಿಕಾರಿ ಆತ್ಮಹತ್ಯೆಗೆ ಶರಣು..!

ವಿವಾಹಿತ ಪುತ್ರಿಗೂ ಅನುಕಂಪದ ನೌಕ್ರಿ; ಸರ್ಕಾರಿ ಉದ್ಯೋಗಕ್ಕೆ ಅರ್ಹ ಎಂದು ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
