ಬೆಂಗಳೂರು:ಕರ್ನಾಟಕದ ತಾಯಿ, ಮಗು ಹಾಗೂ ಮತ್ತೊಬ್ಬ ವ್ಯಕ್ತಿಗೆ ಕರೊನಾ ಬ್ರಿಟನ್ ವೈರಾಣು ಸೋಂಕಿರುವುದು ದೃಢಪಟ್ಟಿದೆ. ಐಸಿಎಂಆರ್ ಇಂದು ಬಿಡುಗಡೆ ಮಾಡಿದ ಪಟ್ಟಿಯಿಂದ ನಮಗೆ ಗೊತ್ತಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸುದ್ದಿಗಾರರಿಗೆ ತಿಳಿಸಿದರು.
ಬ್ರಿಟನ್ ನಲ್ಲಿ ಹೊಸ ಮಾದರಿ ಕರೊನಾ ವೈರಾಣು ಕಾಣಿಸಿಕೊಂಡ ಬಳಿಕ, ಬ್ರಿಟನ್ ನಿಂದ ರಾಜ್ಯಕ್ಕೆ ಮರಳಿದರಲ್ಲಿ 1,614 ಜನರ ರಕ್ತದ ಮಾದರಿ ಪರೀಕ್ಷೆಯಲ್ಲಿ 26 ಮಂದಿಗೆ ಸೋಂಕು ಖಚಿತಪಟ್ಟಿತ್ತು. ತಕ್ಷಣ ಅವರೆಲ್ಲರನ್ನೂ ಪ್ರತ್ಯೇಕಿಸಿ ಸಾಂಸ್ಥಿಕ ಚಿಕಿತ್ಸೆಗೆ ಒಳಪಡಿಸಲಾಗಿದೆ. ಹೆಚ್ಚಿನ ಅಧ್ಯಯನಕ್ಕಾಗಿ ನಿಮ್ಹಾನ್ಸ್ ಪ್ರಯೋಗಾಲಯಕ್ಕೆ ಮಾದರಿ ಕಳುಹಿಸಿದ್ದು,‌ಈ ಪೈಕಿ ಮೂವರಿಗೆ‌ ಬ್ರಿಟನ್ ಸೋಂಕು ತಗಲಿರುವುದು ಇಂದು ಬೆಳಗ್ಗೆಯಷ್ಟೇ ಗೊತ್ತಾಗಿದೆ. ನಿಯಮಾವಳಿ ಪ್ರಕಾರ ಪರೀಕ್ಷಾ ವರದಿಯು ಪ್ರಯೋಗಾಲಯದಿಂದ ನೇರ ಐಸಿಎಂಆರ್ ಗೆ ರವಾನೆಯಾಗುತ್ತದೆ. ಅಲ್ಲಿಂದ ವರದಿ ಬಹಿರಂಗವಾದ ನಂತರವೇ ರಾಜ್ಯ ಸರ್ಕಾರದ ಗಮನಕ್ಕೆ ಬರುತ್ತದೆ ಎಂದು ಸುಧಾಕರ್ ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಶಾಕಿಂಗ್ ನ್ಯೂಸ್ ! ವಿಧಾನಪರಿಷತ್ ಉಪಸಭಾಪತಿ ಎಸ್​.ಎಲ್​.ಧರ್ಮೇಗೌಡ ಆತ್ಮಹತ್ಯೆ..
ಪತ್ತೆ, ಪ್ರತ್ಯೇಕ :ಬ್ರಿಟನ್ ವೈರಾಣು ಸೋಂಕಿತ ಮೂವರ ಪ್ರಥಮ ಸಂಪರ್ಕಿತರನ್ನು ಪತ್ತೆ ಹಚ್ಚಿ ಪ್ರತ್ಯೇಕಿಸುವ ಜತೆಗೆ ಸಾಂಸ್ಥಿಕ ನಿಗಾದಲ್ಲಿ ಇರಿಸಲಾಗಿದೆ ಎಂದರು. ಅಲ್ಲದೆ, ಪರೀಕ್ಷೆಗೆ ಒಳಗಾದ 1614 ಜನರ ಪ್ರಥಮ, ದ್ವಿತೀಯ ಸಂಪರ್ಕಿತರು ಹಾಗೂ ವಿಮಾನದಲ್ಲಿ ಸಹ ಪ್ರಯಾಣಿಕರನ್ನು ಹುಡುಕಿ ಐಸೋಲೇಷನ್ ಮಾಡಿ, 28 ದಿನಗಳ ಕಾಲ ಹೋಮ್ ಕ್ವಾರಂಟೈನ್ ನಲ್ಲಿ ಉಳಿಸಲು ನಿರ್ಧರಿಸಲಾಗಿದೆ ಎಂದು ಸುಧಾಕರ್ ಸ್ಪಷ್ಟಪಡಿಸಿದರು.
ಇದನ್ನೂ ಓದಿ:‘ಆಗಬಾರದ್ದು ಆಗಿದೆ. ಕುಮಾರಸ್ವಾಮಿ ಹೇಳಿಕೆಗೆ ನೋ ಕಾಮೆಂಟ್ಸ್..’
ಹೆಚ್ಚಿನ ಬಾಧೆಯಿಲ್ಲ :ತಜ್ಞರು ಹೇಳುವ ಪ್ರಕಾರ ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿದ್ದು, ಹೊಸ ರೂಪದ ವೈರಾಣು ಬಾಧಿಸದು. ಹೀಗಾಗಿ ಲಾಕ್ ಡೌನ್ ಅಥವಾ ಸೀಲ್ ಡೌನ್ ನಂತಹ ಬಿಗಿ ಕ್ರಮಗಳು ಅನಗತ್ಯವೆಂದು ಡಾ.ಸುಧಾಕರ್ ಸಮಜಾಯಿಷಿ ನೀಡಿದರು.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಬೆಂಗಳೂರಲ್ಲೂ ಪತ್ತೆಯಾಯಿತು ರೂಪಾಂತರಿ ಕೋವಿಡ್​ !
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + seven =
Remember me
