ಬೆಂಗಳೂರು: ಆರ್ಥಿಕವಾಗಿ ಐದು ಗ್ಯಾರಂಟಿಗಳನ್ನು ನಿಭಾಯಿಸುವ ವಿಶ್ವಾಸ ಬರುತ್ತಲೇ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಲ್ಪ ಮೈಚಳಿ ಬಿಟ್ಟಂತಿದ್ದು, ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಹೊಸ ಕಾರುಗಳ ಸೌಲಭ್ಯ ಕೊಡಮಾಡಿದ್ದಾರೆ.
ನಾಲ್ಕನೇ ಗ್ಯಾರಂಟಿ ಯೋಜನೆಯಾಗಿ ‘ಗೃಹಲಕ್ಷ್ಮಿ’ಗೆ ಅದ್ದೂರಿ ಚಾಲನೆ, ಶತದಿನೋತ್ಸವದ ಕೊಡುಗೆ ನೀಡುವ ಮೂಲಕ ಸಂಪುಟದ ಸದಸ್ಯರ ಸಂಭ್ರವನ್ನೂ ಹೆಚ್ಚಿಸಿದ್ದಾರೆ. ಎಲ್ಲ 33 ಸಚಿವರುಗಳಿಗೆ ಹೊಸ ಇನ್ನೋವಾ ಹೈಕ್ರಾಸ್-ಹೈಬ್ರಿಡ್ ವಾಹನಗಳು ದೊರೆಯಲಿದ್ದು, ಇದಕ್ಕಾಗಿ 9.90 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.
ಬಿಡದಿ ಸಮೀಪದ ಟೊಯೋಟ ಕಿರ್ಲೋಸ್ಕರ್ ಮೋಟಾರ್ಸ್‌ ಕಂಪನಿಯಿಂದಲೇ ತಲಾ 30 ಲಕ್ಷ ರೂ. ವೆಚ್ಚ (ಶೋರೂಮ್ ಹೊರತಾದ ದರ, ಜಿಎಸ್‌ಟಿ ಸೇರಿ)ದಲ್ಲಿ ಖರೀದಿಸಲಿದೆ. ಈ ವಾಹನಗಳ ಖರೀದಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವಿನಾಯಿತಿ ನೀಡಲಾಗಿದೆ.
ಸಚಿವರಿಗೆ ಹೊಸ ವಾಹನಗಳನ್ನು ಖರೀದಿಸಿ ಒದಗಿಸಲು ಸರ್ಕಾರ 15 ದಿನಗಳ ಹಿಂದೆಯೇ ಅನುಮತಿ ನೀಡಿ, ಅನುದಾನ ಒದಗಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
