ಬೆಂಗಳೂರು:ಮೈಸೂರು ರಸ್ತೆಯ ಕಲ್ಯಾಣಿ ಮೋಟಾರ್ಸ್ ಅರೇನಾ ಶೋರೂಂನಲ್ಲಿ ಬ್ಯಾಟರಾಯನಪುರದ ಪೊಲೀಸ್ ಠಾಣೆ ಇನ್​ಸ್ಪೆಕ್ಟರ್ ಲಿಂಗರಾಜು ಮಾರುತಿ ಸುಜುಕಿ ಕಂಪನಿಯ ಹೊಸ ವಿಟಾರಾ ಬ್ರಿಜಾ 1.5 ಕಾರು ಬಿಡುಗಡೆ ಮಾಡಿದರು. ಬಿಎಸ್-6 ಇಂಜಿನ್ ಹೊಂದಿರುವ 1.5 ಲೀಟರ್ ಕೆ-ಸೀರೀಸ್, ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಪೆಟ್ರೋಲ್ ಕಾರು ಇದಾಗಿದೆ.
ಹೊಸ ಬ್ರಿಜಾ ಕಾರುಗಳು ಡ್ಯುಯಲ್ ಟೋನ್ ವರ್ಣಗಳಾದ ಸಿಜ್ಲಿಂಗ್ ರೆಡ್ ಮತ್ತು ಮಿಡ್​ನೈಟ್ ಬ್ಲಾಕ್, ಟರ್ಕ್​ಬ್ಲೂ ಮತ್ತು ಮಿಡ್​ನೈಟ್ ಬ್ಲಾ್ಯಕ್, ಗ್ರಾ್ಯನಿಟಿ ಗ್ರೇ ಮತ್ತು ಆಟಮ್ ಆರೆಂಜ್ ಬಣ್ಣಗಳಲ್ಲಿ ಲಭ್ಯ ಇವೆ. ಬೆಂಗಳೂರು ಎಕ್ಸ್​ಶೋರೂಂನ ಆರಂಭಿಕ ಬೆಲೆ 7.34 ಲಕ್ಷ ರೂ. ಆಗಿರುವುದಾಗಿ ಕಲ್ಯಾಣಿ ಮೋಟಾರ್ಸ್​ನ ಸಹಾಯಕ ವ್ಯವಸ್ಥಾಪಕ ನಿರ್ದೇಶಕ ನಟರಾಜ್ ತಿಳಿಸಿದರು.
ಉತ್ತಮ ಮುಖಭಾಗ ಹೊಂದಿರುವ ಹೊಸ ಬ್ರಿಜಾ ಕಾರುಗಳು ಬೋಲ್ಡ್ ಲುಕ್, ಡ್ಯುಯಲ್ ಚೇಂಬರ್, ಎಲ್​ಇಡಿ ಪೊ›ಜೆಕ್ಟರ್ ಹೆಡ್ ಲ್ಯಾಂಪ್, ಎಲ್​ಇಡಿ ಫಾಗ್​ಲ್ಯಾಂಪ್, ಎಲ್​ಇಡಿ ಟೇಲ್ ಲ್ಯಾಂಪ್, ಪ್ರಿಸೆಷನ್ ಕಟ್ ಅಲಾಯ್ ವ್ಹೀಲ್ಸ್, ಪುಶ್ ಸ್ಟಾರ್ಟ್ ಮತ್ತು ಸ್ಟಾಪ್ ಬಟನ್, ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್, ಡ್ಯುಯಲ್ ಏರ್​ಬ್ಯಾಗ್, ಎಬಿಎಸ್ ನೊಂದಿಗೆ ಇಬಿಡಿ, ಬ್ರೇಕ್ ಅಸಿಸ್ಟ್ ಸೇರಿ ಹಲವು ವೈಶಿಷ್ಟ್ಯಗಳನ್ನು ಕಾರು ಹೊಂದಿದೆ ಎಂದು ಮಾಹಿತಿ ನೀಡಿದರು. ಮೊದಲ ಗ್ರಾಹಕ ಮುನಿಯಪ್ಪ ಅವರಿಗೆ ಕಲ್ಯಾಣಿ ಮೋಟರ್ಸ್ ಅಧಿಕಾರಿಗಳು ಕಾರಿನ ಕೀ ಹಸ್ತಾಂತರಿಸಿದರು.
ಮಾರುತಿ ಸುಜುಕ್ ಹೊಸ ವಿಟಾರಾ ಬ್ರಿಜಾ ಕಾರನ್ನು ಬಿಡುಗಡೆ ಮಾಡುವ ಮುನ್ನವೇ ಅಂದಾಜು 1 ಸಾವಿರ ಕಾರಗಳ ಬುಕ್ಕಿಂಗ್ ಆಗಿದೆ. ಗ್ರಾಹಕರ ಪ್ರತಿಕ್ರಿಯೆ ಉತ್ತಮವಾಗಿದೆ.
| ಎಸ್.ಎನ್. ಶೆಟ್ಟಿ ಕಲ್ಯಾಣಿ ಮೋಟರ್ಸ್ ಉಪಾಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + four =
Remember me
