|ಗೋವಿಂದರಾಜು ಚಿನ್ನಕುರ್ಚಿಬೆಂಗಳೂರು
ಶೃಂಗೇರಿಯ ಸಬ್​ರಿಜಿಸ್ಟ್ರಾರ್ ಕಚೇರಿಯಲ್ಲಿ ಜನರು ಪಾವತಿಸಿರುವ ಕೆಲ ಭಾಗ ಹಣ ರಾಜ್ಯದಲ್ಲಿನ ನಕ್ಸಲರು ಹಾಗೂ ಉಗ್ರ ಸಂಘಟನೆಗಳ ಕೃತ್ಯಕ್ಕೂ ಬಳಕೆಯಾಗಿರುವ ಅನುಮಾನದ ಬೆನ್ನಲ್ಲೇ ಆನ್​ಲೈನ್ ವ್ಯವಹಾರಕ್ಕೆ ಅವಕಾಶ ಮಾಡಿಕೊಟ್ಟಿರುವ ಡಿಜಿಟಲ್ ತಂತ್ರಾಂಶ ಕೂಡ ನೋಂದಣಿ ಮತ್ತು ಮುದ್ರಣ ಇಲಾಖೆಯಲ್ಲಿ ಅಕ್ರಮಕ್ಕೆ ದಾರಿಮಾಡಿರುವುದು ಬೆಳಕಿಗೆ ಬಂದಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿನ ಅಕ್ರಮ ತಡೆಗಟ್ಟುವುದಕ್ಕಾಗಿ ನಗದು, ಡಿಮಾಂಡ್ ಡ್ರಾಫ್ಟ್ (ಡಿಡಿ)ನಿರ್ಬಂಧಿಸಿ ಬ್ಯಾಂಕ್ ಮತ್ತು ಡಿಜಿಟಲ್ ಪೇಮೆಂಟ್ ಮೂಲಕ ಹಣಕಾಸು ವ್ಯವಹಾರ ನಡೆಸುವುದಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈ ವ್ಯವಸ್ಥೆ ಜಾರಿಗೊಳಿಸಿ ಇಲಾಖೆ ಜೂನ್ 11ರಂದು ಆದೇಶ ಹೊರಡಿಸಿದೆ. ಇದರನ್ವಯ ಸಾರ್ವಜನಿಕರು ನೋಂದಣಿ, ಮುದ್ರಾಂಕ ಶುಲ್ಕ, ಇ.ಸಿ, ಪ್ರಮಾಣೀಕೃತ ನಕಲು ಪ್ರತಿ ಪಡೆಯಲು ಹಾಗೂ ಇತರ ಯಾವುದೇ ವ್ಯವಹಾರ ನಡೆಸಲು ಆನ್​ಲೈನ್​ನಲ್ಲಿ ಅಥವಾ ಬ್ಯಾಂಕ್ ಮೂಲಕ ಹಣ ಪಾವತಿಸಿ ಚಲನ್ ಅನ್ನು ಸಬ್ ರಿಜಿಸ್ಟ್ರಾರ್ ಕಚೇರಿಗೆ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬಹುದು. ಆದರೆ, ಖಜಾನೆ-2 ಮತ್ತು ಕಾವೇರಿ ತಂತ್ರಾಂಶ ಇನ್ನೂ ಇಂಟಿಗ್ರೇಷನ್ ಆಗದ ಕಾರಣ ಸಾರ್ವಜನಿಕರು, ಸ್ಟಾಂಪ್​ವೆಂಡರ್, ಸಬ್ ರಿಜಿಸ್ಟ್ರಾರ್ ಕಚೇರಿ ಅಧಿಕಾರಿಗಳು, ಗುತ್ತಿಗೆ ನೌಕರರು ಸೇರಿ ಯಾರು ಬೇಕಾದರೂ ನಕಲಿ ಚಲನ್ ಸೃಷ್ಟಿಸಿ ಸರ್ಕಾರಕ್ಕೆ ಮೋಸ ಮಾಡಬಹುದಾಗಿದೆ. ಇದರಿಂದ ನೋಂದಣಿ ಇಲಾಖೆಯ ಹಣಕಾಸಿನ ಜವಾಬ್ದಾರಿ ವಹಿಸಿರುವ ಸಬ್ ರಿಜಿಸ್ಟ್ರಾರ್ ಮತ್ತು ಪ್ರಥಮ ದರ್ಜೆ ನೌಕರರಿಗೆ ಮಾಡದ ತಪ್ಪಿಗೆ ತಲೆದಂಡಕ್ಕೆ ಒಳಗಾಗಬೇಕಾಗುವ ಭೀತಿ ಶುರುವಾಗಿದೆ.
ಡಿಜಿಟಲ್ ಪೇಮೆಂಟ್​ನಲ್ಲಿ ಪಡೆಯುವ ಚಲನ್ ಅನ್ನು ಯಾವ ರೀತಿ ಎಡಿಟ್ ಮಾಡಿ ವಂಚಿಸಬಹುದು ಎಂಬ ವಿಡಿಯೋ ಮಾಡಿ ವೈರಲ್ ಮಾಡಲಾಗಿದೆ. ತಪ್ಪನ್ನು ಸರಿಪಡಿಸಿಕೊಳ್ಳುವ ತಂತ್ರಜ್ಞಾನ ಬಳಸದೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮತ್ತೆ ಸಬ್ ರಿಜಿಸ್ಟ್ರಾರ್ ಕಚೇರಿ ಅಧಿಕಾರಿ, ಸಿಬ್ಬಂದಿ ಮೊರೆ ಹೋಗಿದೆ. ಖಜಾನೆ-2 ಚಲನ್​ಗಳನ್ನು ಖಾತರಿ ಪಡಿಸಿಕೊಂಡು ಆನಂತರ ಪಡೆಯುವಂತೆ ಹೊಸ ಆದೇಶ ಹೊರಡಿಸಿದೆ. ಡಿಜಿಟಲ್ ಪೇಮೆಂಟ್​ನಿಂದ ಪ್ರಯೋಜನದ ಬದಲು ಅಕ್ರಮ ನಡೆಸಲು ಮತ್ತು ಲಂಚ ಪಡೆಯಲು ಮತ್ತೊಂದು ದಾರಿ ಮಾಡಿಕೊಟ್ಟಂತೆ ಆಗಿದೆ.
ಖಜಾನೆ-2 ಚಲನ್ ಎಡಿಟ್:ಮುದ್ರಾಂಕ, ನೋಂದಣಿ ಶುಲ್ಕವನ್ನು ಆನ್​ಲೈನ್​ನಲ್ಲಿ ಅಥವಾ ಬ್ಯಾಂಕ್ ಮೂಲಕ ಸಲ್ಲಿಸಿ ಖಜಾನೆ-2 ಚಲನ್ ಪಡೆದ ಮೇಲೆ ಸುಲಭವಾಗಿ ಎಡಿಟ್ ಮಾಡಬಹುದು. ಬ್ಯಾಂಕ್ ಅಥವಾ ಡಿಜಿಟಲ್ ಪೇಮೆಂಟ್​ನಿಂದ ಪಡೆದ ಖಜಾನೆ-2 ಚಲನ್ ಅನ್ನು ಕಾವೇರಿ ತಂತ್ರಾಂಶದಲ್ಲಿ ಸ್ಟೇಟಸ್ ಪರಿಶೀಲನೆ ಕಾಲಂನಲ್ಲಿ ಚಲನ್​ನ 16 ಅಂಕಿಗಳನ್ನು ನಮೂದಿಸಿದಾಗ ಡೆಸ್ಕ್ ಟಾಪ್ ಮೇಲೆ ಬರಲಿದೆ. ಚಲನ್ ಸ್ಟೇಟಸ್ ಮೇಲೆ ರೈಟ್ ಕ್ಲಿಕ್ ಮಾಡಿ ಪೇಮೆಂಟ್ ಪೆಂಡಿಂಗ್ ಬದಲು ಸಕ್ಸಸ್ ಎಂದು ಟೈಪ್ ಮಾಡಬಹುದು. ಹೆಸರು ಮತ್ತು ಮೊತ್ತ ಬದಲಾಯಿಸಲು ಆನಂತರ ಪ್ರಿಂಟ್ ತೆಗೆದುಕೊಳ್ಳಬಹುದು. ಎಷ್ಟು ಬಾರಿಯಾದರೂ ಎಡಿಟ್ ಮಾಡಿ ಬಳಸಬಹುದು. ಇಂತಹ ನಕಲಿ ಚಲನ್​ಗಳನ್ನು ಪರಿಶೀಲಿಸದೆ ನೋಂದಣಿ ಪ್ರಕ್ರಿಯೆ ಮುಗಿಸಿದರೆ ಸರ್ಕಾರಕ್ಕೆ ನಷ್ಟವಾಗಲಿದೆ.
ಸಾರ್ವಜನಿಕರಿಗೂ ಕಂಟಕ:ಸರ್ಕಾರಿ ಇಲಾಖೆ ಜತೆಗೆ ಸಾರ್ವಜನಿಕರೂ ಇದರಿಂದ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಸಾಮಾನ್ಯವಾಗಿ ಎಲ್ಲರೂ ಸಬ್ ರಿಜಿಸ್ಟ್ರಾರ್ ಕಚೇರಿ ವ್ಯವಹಾರಕ್ಕೆ ಸ್ಟಾಂಪ್​ವೆಂಡರ್ ಅಥವಾ ಏಜೆಂಟ್​ಗಳ ಮೊರೆ ಹೋಗುತ್ತಾರೆ. ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಬ್ಯಾಂಕ್ ಅಥವಾ ಡಿಜಿಟಲ್ ಪೇಮೆಂಟ್ ಮಾಡಿ ಚಲನ್ ಪಡೆಯುವುದಾಗಿ ಸಾರ್ವಜನಿಕರಿಂದ ಹಣ ಪಡೆದು ಆ ಬಳಿಕ ನಕಲಿ ಚಲನ್ ಕೊಟ್ಟು ಸಬ್ ರಿಜಿಸ್ಟ್ರಾರ್ ಕಚೇರಿ ನೌಕರರನ್ನ ಬಳಸಿಕೊಂಡು ನೋಂದಣಿ ಪ್ರಕ್ರಿಯೆ ಮುಗಿಸುವ ಸಾಧ್ಯತೆ ಇದೆ. ಆನಂತರ ಸರ್ಕಾರಕ್ಕೆ ಶುಲ್ಕ ಪಾವತಿ ಆಗದೆ ಇದ್ದಾಗ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆದಿರುವ ಕರಾರು ನೋಂದಣಿ ಅನೂರ್ಜಿತಗೊಳ್ಳುತ್ತದೆ. ಸಬ್ ರಿಜಿಸ್ಟ್ರಾರ್​ಗಳು, ಕರಾರು ಪತ್ರ ಮಾಡಿಸಿಕೊಂಡಿರುವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಅವಕಾಶವಿದೆ. ಅದಕ್ಕಾಗಿ ಕಾವೇರಿ ಮತ್ತು ಖಜಾನೆ-2 ತಂತ್ರಾಂಶ ಸಂಯೋಜನೆ ಮಾಡಿ ನಕಲಿ ಚಲನ್​ಗೆ ತಡೆಗಟ್ಟಬೇಕೆಂಬ ಒತ್ತಾಯ ಕೇಳಿಬಂದಿದೆ.
18 ತಿಂಗಳ ಮಗುವಿಗಾಗಿ ಏಳೇ ದಿನಗಳಲ್ಲಿ ಸಂಗ್ರಹವಾಯ್ತು 18 ಕೋಟಿ ರೂ.; ಬೇಡ ಎಂಬಷ್ಟು ಬಂತು ಹಣ!

ಬೆರಳೆರಡನ್ನು ಕತ್ತರಿಸಿಕೊಂಡ, ಬಾಯಿಗೆರಡು ಕೋರೆ ಸಿಕ್ಕಿಸಿಕೊಂಡ!; ಮೈಮೇಲಿದೆಂಥ ಆಟ ಈ ಮೈಖೇಲ್​ನದ್ದು!?

ಎರಡೂ ಡೋಸ್ ಲಸಿಕೆ ಪಡೆದವರಿಗಿಂತಲೂ ಇವರಲ್ಲೇ ಹೆಚ್ಚು ರೋಗನಿರೋಧಕ ಶಕ್ತಿ!; ಯಾರಿವರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − five =
Remember me
