ಚಿಕ್ಕಬಳ್ಳಾಪುರ:ಪ್ರತಿ ವರ್ಷದಂತೆ ಮುಂಜಾಗ್ರತಾ ಕ್ರಮವಾಗಿ ನಂದಿಗಿರಿ ಧಾಮದಲ್ಲಿ ಈ ಭಾರಿಯೂ ಮಧ್ಯರಾತ್ರಿ ಹೊಸ ವರ್ಷದ ಸಂಭ್ರಮಾಚರಣೆ ನಿಷೇಧಿಸಲಾಗಿದೆ. ಜಿಲ್ಲಾಡಳಿತವು ಡಿ.31ರ ಸಂಜೆ 6ರಿಂದ ಜ.1ರ ಬೆಳಗ್ಗೆ 6ರವರೆಗೆ ಗಿರಿಧಾಮ ಪ್ರವೇಶಿಸಲು ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದೆ.
ಕರ್ನಾಟಕದ ಊಟಿ ಎಂದೇ ಪ್ರಖ್ಯಾತಿ ಹೊಂದಿರುವ ಗಿರಿಧಾಮಕ್ಕೆ ಬರುವ ಹೆಸರಿನಲ್ಲಿ ಮದ್ಯಸೇವನೆ, ಅನೈತಿಕ ಚಟುವಟಿಕೆ, ಗಲಾಟೆ ಮತ್ತು ಹಲ್ಲೆ ಸೇರಿದಂತೆ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಮಧ್ಯರಾತ್ರಿಯ ಸಂಭ್ರಮಕ್ಕೆ ಬ್ರೇಕ್​ ಹಾಕಲಾಗಿದೆ.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಪ್ರವಾಸಿಗರಿಂದ ತುಂಬಿ ತುಳುಕಾಡುವ ನಂದಿ ಗಿರಿಧಾಮ, ಸ್ಕಂದಗಿರಿ, ಆವಲಬೆಟ್ಟವನ್ನು ನಿಷೇಧಿತ ಅವಧಿಯಲ್ಲಿ ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ನಿಯಮವನ್ನು ಉಲ್ಲಂಘಿಸದಿರಲು ಜಿಲ್ಲಾಡಳಿತ ತಿಳಿಸಿದೆ.
ಈಗಾಗಲೇ ನಂದಿ ಗಿರಿಧಾಮದಲ್ಲಿ ಚೆಕ್​ ಪೋಸ್ಟ್​ ಕಾರ್ಯ ನಿರ್ವಹಿಸುತ್ತಿದ್ದು, ಹೊಸ ವರ್ಷದ ದಿನದಂದು ಮತ್ತಷ್ಟು ಬಂದೋಬಸ್ತ್​ ಕೈಗೊಳ್ಳುವಲ್ಲಿ ಪೊಲೀಸ್​ ಇಲಾಖೆ ಸಜ್ಜಾಗಿದೆ.
ಎಸ್​ಐಗೆ ಧಮ್ಕಿ ಹಾಕುತ್ತಲೇ ನಾಲಗೆ ಹರಿಯಬಿಟ್ಟ ಮಾಜಿ ಶಾಸಕ ಸುರೇಶ್​ಗೌಡ! ಒಂದು ಸಲ ನಿಮ್ಮ ಸ್ಟೇಷನ್ ಬಳಿ ಮಲಗಿದ್ದೆ, ಇನ್ನೊಂದು ಬಾರಿ ಮಲಗಬೇಕಾಗುತ್ತೆ…

HDKಗೆ ನಾಣ್ಯ​, ನೇಗಿಲು, ಸ್ಕೂಲ್​ ಬ್ಯಾಗ್​, ಕಬ್ಬು, ಬೆಲ್ಲದ ಹಾರ… ಏಷ್ಯಾ​ ಬುಕ್​ ಆಫ್​ ರೆಕಾರ್ಡ್ಸ್​- ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಪಂಚರತ್ನ ಯಾತ್ರೆ

ಹೆಲ್ಮೆಟ್​ ಹಾಕಿಲ್ಲ ಎಂದು ಕಾರು ಮಾಲೀಕನಿಗೆ ನೋಟಿಸ್​ ಕಳಿಸಿದ ಟ್ರಾಫಿಕ್​ ಪೊಲೀಸರು! ಮಂಗಳೂರಲ್ಲಿ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 13 =
Remember me
