
ವಕ್ರ ಗುರುವು ಡಿ. 31ಕ್ಕೆ ಮುಂದೆ ಸಾಗುವುದರಿಂದ, ಜನ್ಮದಲ್ಲಿ ಗುರುವಿದ್ದರೂ ವಕ್ರದೆಸೆಯಲ್ಲಿ ಆದ ಕೆಲವು ಅನನುಕೂಲಗಳನ್ನು ಸರಿಪಡಿಸಿ ನಿಮಗೆ ಉತ್ತಮ ದಾರಿ ತೋರಿಸುತ್ತಾನೆ. ನೂತನ ಸಂವತ್ಸರದಲ್ಲಿ ಗುರು ವೃಷಭ ರಾಶಿಯ 2ನೇ ಮನೆಗೆ ಬರುವುದರಿಂದ ಶುಭಫಲ ನೀಡುವುದರಲ್ಲಿ ಸಂದೇಹವಿಲ್ಲ. ಮೇಷ, ವೃಶ್ಚಿಕ ರಾಶಿಯಲ್ಲಿ ಜನಿಸಿದವರು ಜನ್ಮಜನ್ಮಾಂತರದ ದೋಷ ಕಳೆಯಲು ಸುಬ್ರಹ್ಮಣ್ಯಸ್ವರೂಪಿ ನಾಗದೇವರ ಆರಾಧನೆ ಮಾಡಬೇಕು. ವ್ಯಾಪಾರ, ಕ್ರೀಡೆ, ವ್ಯವಹಾರ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಇರುವವರೆಲ್ಲರೂ 2025ರ ಮಧ್ಯಭಾಗದವರೆಗೂ ಸುಖದಿಂದ ನೆಮ್ಮದಿಯ ಜೀವನ ನಡೆಸಬಹುದು. ಹೆಣ್ಣುಮಕ್ಕಳಿಗೆ ವಿವಾಹ ಭಾಗ್ಯವಿದೆ.
ದ್ವಾದಶದಲ್ಲಿ ಗುರುವು, ಏಕಾದಶದಲ್ಲಿ ರಾಹು ಇರುವುದರಿಂದ, ಗುರುವಿನಿಂದ ಮಾರ್ಗ ಕಾಣದೆ ಮುಂದೆ ಹಾನಿಗೆ ಒಳಗಾಗುವ ಸಾಧ್ಯತೆ ಇದೆ. ಆದರೆ ಪಾಪ ಕಳೆಯಲು ಮನುಷ್ಯನು ಪುಣ್ಯ ಸಂಪಾದಿಸಬೇಕು. ರಾಹುವಿಗೆ ದುರ್ಗೆ ಆರಾಧಿಸುವುದು, ಷಣ್ಕುಲ ನಾಗದೇವರನ್ನು ಆರಾಧಿಸಬೇಕೆಂಬ ಶಾಸ್ತ್ರ ವಚನವಿದೆ. ಅದರಂತೆ ಅನುಸರಿಸಿ ವ್ಯಾಪಾರ, ವಹಿವಾಟಿನಲ್ಲಿ ಎಚ್ಚರಿಕೆಯಿಂದ ಸಾಗಬೇಕು. ಏಪ್ರಿಲ್​ನಿಂದ ಗುರುವು ಜನ್ಮಕ್ಕೆ ಬಂದು ಸಮಸ್ಯೆಗಳಿಗೆ ಪರಿಹಾರ ಕೊಡಬೇಕಾದರೆ ಮನುಷ್ಯನು ದೈವಋಣ, ಗುರುಋಣ, ಪಿತೃಋಣ ಪಾಲಿಸಲೇಬೇಕು. ಜನ್ಮ ಗುರುವಿಗೆ ನರಸೋಬಾಡಿ ದತ್ತಾತ್ರೇಯನನ್ನು ಪ್ರಾರ್ಥಿಸಿ.
ಏಕಾದಶ ಗುರು, ನವಮದಲ್ಲಿರುವ ಶನಿ ಸುಖ, ಸಂತೋಷ, ಐಶ್ವರ್ಯ ನೀಡಿದ್ದಾನೆ. ಕಾಣದ ಕೈಗಳು ಸಹಾಯ ನೀಡುತ್ತವೆ. ನಿಮ್ಮನ್ನು ನೀವು ಅರಿತು ವ್ಯವಹಾರ ಮಾಡದೆ ಕೆಲವು ಬಾರಿ ದುಃಖಕ್ಕೆ ಒಳಗಾಗುತ್ತೀರಿ. ಆರೋಗ್ಯದ ವಿಚಾರ ಬಂದಾಗ ಶೇ.50 ಉತ್ತಮ ಫಲವಿದೆ. ನೂತನ ಸಂವತ್ಸರದಲ್ಲಿ ಗುರುವು 12ನೇ ಮನೆಗೆ, ಶನಿಯು 9ನೇ ಮನೆಗೆ, ರಾಹುವು 11ನೇ ಮನೆಗೆ ಬರುವುದರಿಂದ ವ್ಯಾಪಾರ, ವ್ಯವಹಾರವನ್ನು ಸೂಕ್ಷ್ಮತೆಯಿಂದ ನಿರ್ವಹಿಸಿದರೆ ಶನಿಯು ಅಭಿವೃದ್ಧಿ ನೀಡುತ್ತಾನೆ. ವೃಷಭದಲ್ಲಿರುವ ಗುರುವಿಗೆ ದತ್ತಾತ್ರೇಯರ ಗುರುಚರಿತ್ರೆಯ 14ನೇ ಅಧ್ಯಾಯ ಪಾರಾಯಣ ಮಾಡಿ.
ಅಷ್ಟಮ ಶನಿಯು ಯಾರ ಪೀಡೆಗೂ ಒಳಗಾಗದಂತೆ ಸ್ವತಂತ್ರವಾಗಿ ಪಾಪ ಪುಣ್ಯದ ಫಲ ನೀಡುತ್ತಿದ್ದಾನೆ. ನೂತನ ಸಂವತ್ಸರದಲ್ಲಿ ಏಕಾದಶಕ್ಕೆ ಗುರು ಬಂದು ನಿಮಗೆ ಪರಿಪೂರ್ಣವಾದ ಆರೋಗ್ಯ, ಅವಿವಾಹಿತರಿಗೆ ಕಲ್ಯಾಣ ಭಾಗ್ಯವನ್ನು ನೀಡುತ್ತಾನೆ. 2025ರವರೆಗೆ ಅಷ್ಟಮದಲ್ಲಿ ಶನಿ ಇರುವುದರಿಂದ ಶಿವನ ಪೂಜೆ, ರುದ್ರಪಾಠವನ್ನು ಮಾಡಿಸಿ. ಬೆಂಗಳೂರಿನ ಬಳೇಪೇಟೆಯ ಲಕ್ಷ್ಮೀನರಸಿಂಹನನ್ನು ಪೂಜಿಸಿದರೆ ಶತ್ರುನಾಶವಾಗಿ ಉತ್ತಮ ಫಲಗಳನ್ನು ಪಡೆಯಬಹುದು.
ಮುಂಬರುವ 2024ರ ಏಪ್ರಿಲ್​ವರೆಗೆ 9ನೇ ಮನೆಯಲ್ಲಿರುವ ಗುರುವು ಉತ್ತುಂಗಕ್ಕೆ ಒಯ್ದು ಅಖಂಡ ಆಯುಷ್ಯ, ಆರೋಗ್ಯ, ಸ್ಥಿರಲಾಭ, ಕೀರ್ತಿ ಕೊಟ್ಟು ಕಾಪಾಡುತ್ತಾನೆ. ಖಂಡೋಬರಾಯನನ್ನು ದರ್ಶನ ಮಾಡಿ ಪೂಜೆ ಸಲ್ಲಿಸುವುದರಿಂದ 10ನೇ ಮನೆಯಲ್ಲಿರುವ ಗುರುವು ವಿಶೇಷ ಫಲಗಳನ್ನು ನೀಡುತ್ತಾನೆ. ನಿಮ್ಮ ಮನೆಯ ಕುಲಗುರು ಮತ್ತು ನಿಮ್ಮ ಕುಲದೇವರನ್ನು ಪೂಜಿಸಬೇಕು. ಆರೋಗ್ಯಕ್ಕಾಗಿ ಆದಿತ್ಯಹೃದಯ ಪಾರಾಯಣ, ನವಗ್ರಹಗಳು ಹಾಗೂ ದತ್ತಾತ್ರೇಯನನ್ನು ಪ್ರಾರ್ಥಿಸಿದರೆ ಎಲ್ಲ ಫಲಗಳು ಸಿಗಲಿವೆ.
2024ರ ಏಪ್ರಿಲ್​ವರೆಗೂ ಅಷ್ಟಮದಲ್ಲಿ ಗುರು ಇದ್ದು, ಆರ್ಥಿಕ ಹೊರೆಯಾಗಿದೆ. ಸಾಲ ತೀರಿಸಲಾಗದೆ ಬಳಲುತ್ತಿದ್ದೀರಿ. ನೀವು ಜಾಣ್ಮೆಯಿಂದ ವರ್ತಿಸಲು ಈವರೆಗೂ ಆಗಿಲ್ಲ. ನಿಮ್ಮ ಬುದ್ಧಿಯೆಲ್ಲ ಅನವಶ್ಯಕ ಕೆಲಸಕ್ಕೆ ವ್ಯಯವಾಗುತ್ತಿದೆ. 2024ರ ಮೇ ತಿಂಗಳಲ್ಲಿ ಗುರುವು 9ನೇ ಮನೆಗೆ ಬಂದು ಸರ್ವ ಸಂಕಷ್ಟವನ್ನು ಪರಿಹರಿಸಿ ಶುಭಫಲ ಕೊಡುತ್ತಾನೆ. ಯಾರೇ ಆಗಲಿ ಗುರುವಿನ ಋಣ, ಪಿತೃಋಣ, ದೈವಋಣ ತೀರಿಸಬೇಕಾಗಿರುವುದು ಆದ್ಯ ಕರ್ತವ್ಯ. ಶಾಪ, ತಾಪಕ್ಕೆ ಬಲಿಯಾಗಿ ಜೀವನ ಕಷ್ಟಮಯವಾಗದಂತೆ ನೋಡಿಕೊಳ್ಳಿ. ಒಳ್ಳೆಯ ಕೆಲಸಗಳನ್ನು ಮಾಡಿ ಪುಣ್ಯ ವೃದ್ಧಿಸಿಕೊಂಡರೆ ಗ್ರಹಾನುಕೂಲ ದೊರೆಯಲಿದೆ.
2024ರ ಮೇ ತಿಂಗಳ ವರೆಗೆ ಸಪ್ತಮದಲ್ಲಿ ಗುರುವು ಇದ್ದು, ನಂತರ ಅಲ್ಲಿಂದ ಅಷ್ಟಮಕ್ಕೆ ಹೋಗುತ್ತಾನೆ. ಪಂಚಮದಲ್ಲಿ ಶನಿ ಇದ್ದು, ತುಲಾರಾಶಿಯಲ್ಲಿ ಶನಿಯು ಪಂಚಮದಲ್ಲಿದ್ದರೂ ಸ್ವಕ್ಷೇತ್ರನಾಗಿರುವುದರಿಂದ ಯಾವ ಪೀಡೆಯನ್ನು ನೀಡುವುದಿಲ್ಲ. ಬೇಕಾದ ವ್ಯಾಪಾರ ವಹಿವಾಟು ಮಾಡುವುದು ಹಾಗೂ ನೂತನ ಕಾರ್ಯಾರಂಭ ಮಾಡಲು ಶನಿಯು ಸಹಾಯಕನಾಗಿದ್ದಾನೆ. ಅಷ್ಟಮದಲ್ಲಿ ಗುರುವಿಗಾಗಿ ನಿತ್ಯವು ಗುರುಚರಿತ್ರೆಯನ್ನು ದಿನಕ್ಕೊಂದು ಅಧ್ಯಾಯದಂತೆ ಪಾರಾಯಣ ಮಾಡಿ ಅಷ್ಟಮ ಶನಿದೋಷವನ್ನೂ ನಿವಾರಿಸಿಕೊಳ್ಳಬಹುದು. ಮನುಷ್ಯನ ಧರ್ಮ-ಕರ್ಮದ ತಕ್ಕಡಿಯಲ್ಲಿ ಪುಣ್ಯಾಂಶ ಹೆಚ್ಚಿದ್ದರೆ ಯಾವ ಗ್ರಹವೂ ಏನೂ ತೊಂದರೆ ಮಾಡುವುದಿಲ್ಲ. ಚಂಡಿಕಾ ಪಾರಾಯಣವನ್ನು ಮಾಡಿ ಶ್ರೀಕೃಷ್ಣನನ್ನು ಪೂಜಿಸಿ.
2024ರ ಮೇ ತಿಂಗಳವರೆಗೆ ವೃಶ್ಚಿಕ ರಾಶಿಯವರ 6ನೇ ಮನೆಯಲ್ಲಿ ಗುರುವು ಇದ್ದು, ನಂತರ ಸಪ್ತಮಕ್ಕೆ ಬರುತ್ತಾನೆ. ಮೇಷ, ವೃಶ್ಚಿಕ ರಾಶಿ ಅಧಿಪತಿ ಅಂಗಾರಕನಾಗಿರುವುದರಿಂದ ಈ ಸಮಯದಲ್ಲಿ ಕುಕ್ಕೆಯಲ್ಲಿ ನೆಲೆಸಿರುವ ಸುಬ್ರಹ್ಮಣ್ಯ ದೇವರನ್ನು ಪೂಜಿಸಿದರೆ ನಿಮಗೆ ಅನುಕೂಲವಾಗಲಿದೆ. ಸುಬ್ರಹ್ಮಣ್ಯ ದೇವರ ಮೂಲಮಂತ್ರದ ಹವನ ಹಾಗೂ ಸ್ವತಂತ್ರವಾಗಿ ಆಶ್ಲೇಷ ಬಲಿಯನ್ನು ಮಾಡಿಸಿದರೆ ಎಲ್ಲ ಸಂಕಷ್ಟ ನಿವಾರಣೆಯಾಗುತ್ತದೆ. ಯಂತ್ರೋಪಕರಣದಿಂದ ಸಂಪಾದನೆ ಮಾಡುವವರು ಪಳಲಿ ದಂಡಾಯುಧ ಸುಬ್ರಹ್ಮಣ್ಯನನ್ನು ಪೂಜಿಸಿ ಲಾಭಾಂಶದ ಶೇ. 20ರಷ್ಟು ಧರ್ಮಕಾರ್ಯಕ್ಕೆ ಬಳಸಿ ಪುಣ್ಯ ಸಂಪಾದಿಸಬೇಕು.
ತೃತೀಯ ಶನಿ ಶುಭವನ್ನು ನೀಡುತ್ತಾನೆ. ಚತುರ್ಥದಲ್ಲಿ ರಾಹುವು, ರಾಶ್ಯಾಧಿಪತಿ ಗುರುವು ಪಂಚಮದಲ್ಲಿದ್ದಾರೆ. 4ನೇ ಮನೆಯಲ್ಲಿರುವ ರಾಹು ಕೆಲವೊಂದು ತಿಳಿಯದ ತಪ್ಪನ್ನು ಮಾಡಿಸಿ ಶಾಂತಿ ಕದಡುತ್ತಾನೆ. ಅದಕ್ಕೆ ಮೇಷ ಗುರುವು ಸುಬ್ರಹ್ಮಣ್ಯ ಸ್ವರೂಪದಲ್ಲಿದ್ದು, ಕುಂಭಕೋಣ ಸಮೀಪದಲ್ಲಿರುವ ಸ್ವಾಮಿಮಲೈ ಸ್ವಾಮಿನಾಥನ್ ದೇವರನ್ನು ಪೂಜಿಸಿ ತೊಡಕು ನಿವಾರಿಸಿಕೊಂಡು ಸುಖವಾಗಿರುವ ಕಾಲವಿದು. ತೃತೀಯ ಶನಿಯಿಂದ ಲಾಭ, ಕೀರ್ತಿ, ರಾಜಕಾರಣಿಗಳಿಗೆ ಸ್ಥಾನಮಾನ, ಹೆಣ್ಣುಮಕ್ಕಳಿಗೆ ವಿವಾಹ ಯೋಗ ಒದಗಿಬರುತ್ತದೆ. ಧನುರಾಶಿಯವರು ಗುರು ದತ್ತಾತ್ರೇಯನನ್ನು ಆಂಧ್ರಪ್ರದೇಶದ ಪೀಠಾಪುರದಲ್ಲಿ ಪೂಜಿಸಿದರೆ ಎಲ್ಲವನ್ನು ಪಡೆದು ಸಂತೋಷವಾಗಿರಬಹುದು.
ಶನಿಯು ಸ್ವಕ್ಷೇತ್ರನಾಗಿರುವುದರಿಂದ ತಾಪತ್ರಯಗಳು ದಿನಕಳೆದಂತೆ ಕಡಿಮೆಯಾಗುತ್ತವೆ. ಮೇ ತಿಂಗಳವರೆಗೆ ಚತುರ್ಥದಲ್ಲಿ ಗುರುವಿದ್ದು, ಕೆಲಸ ನಿಧಾನವಾದರೂ ವೃಷಭದಲ್ಲಿ ಪಂಚಮಕ್ಕೆ ಬಂದ ನಂತರ ಸಕಲ ಕಾರ್ಯಗಳು ಸಿದ್ಧಿಸಿ, ಸಂತೋಷ, ಧನಸಂಪತ್ತನ್ನು ಕೊಡುವುದರಲ್ಲಿ ಸಂದೇಹವಿಲ್ಲ. ದ್ವಿತೀಯದಲ್ಲಿ ಶನಿ ಇರುವುದರಿಂದ ಮಾತುಗಳಲ್ಲಿ ಎಚ್ಚರ ಇರಲಿ. ಮಾತಿನಿಂದ ಯಾರಿಗಾದರೂ ನೋವು ಉಂಟಾದರೆ ನಿಮ್ಮ ಮನಸ್ಸು ಕಲುಷಿತವಾಗಿ ಪೂರ್ಣಫಲ ಪಡೆಯಲು ಸಾಧ್ಯವಾಗುವುದಿಲ್ಲ. ಗುರುವನ್ನು ವಂದಿಸಿ.
ಶನಿಯು ಸ್ವಕ್ಷೇತ್ರನಾಗಿದ್ದು, ಹೆಚ್ಚಿನ ತಾಪ ನೀಡದಿದ್ದರೂ, ನಿಮ್ಮಿಷ್ಟದಂತೆ ಕೆಲಸ ಸಾಗುವುದಿಲ್ಲ. ಮನುಷ್ಯನಿಗೆ ಮಹದೌಷಧವೆಂದರೆ ನಿಧಾನ, ಪ್ರೀತಿ, ತ್ಯಾಗ. ಈ ಬುದ್ಧಿಯಿಂದ ಅಪಾಯಗಳನ್ನು ಉಪಾಯದಿಂದ ದಾಟಿ ಜೀವನವನ್ನು ಸರಿಪಡಿಸಿಕೊಳ್ಳಬೇಕು. ಮೀನ ರಾಶಿಯಲ್ಲಿ ರಾಹು ಇರುವುದರಿಂದ ಮಡದಿ, ಮಕ್ಕಳೊಂದಿಗೆ ಜಗಳವಾಡದೆ, ಯಾರನ್ನೂ ನಿಷ್ಠುರಪಡಿಸದೆ, ಈ ಸಮಯದಲ್ಲಿ ದೈವಪ್ರಾರ್ಥನೆಗೆ ಆದ್ಯತೆ ನೀಡಿ. ಕುಲದೇವರ ಜತೆ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿಯನ್ನು ಪೂಜಿಸಿ.
ದ್ವಿತೀಯದಲ್ಲಿ ಗುರುವಿದ್ದು, 2024ರ ಮೇ ತಿಂಗಳಲ್ಲಿ ಶುಕ್ರನ ಮನೆಗೆ ಬರುತ್ತಾನೆ. ನಿಮ್ಮ ರಾಶಿಯಲ್ಲಿ ರಾಹು ಇರುವುದರಿಂದ ಕೆಟ್ಟ ಆಲೋಚನೆಗಳನ್ನು ಬಿಟ್ಟು, ನಕಾರಾತ್ಮಕ ಚಿಂತನೆ ದೂರವಿಟ್ಟು ಈ ಸದ್ಯದಲ್ಲಿ ಮೇ ತಿಂಗಳವರೆಗೂ ದ್ವಿತೀಯ ಗುರುವಿನ ಭಾಗ್ಯ ಪಡೆದು, ತೃತೀಯ ಮನೆಗೆ ಬಂದಾಗ ವೃಷಭ ರಾಶಿ ಗುರುವಿಗೆ ನಾಡಿನ ದೇವತೆ ಚಾಮುಂಡೇಶ್ವರಿ ಅಥವಾ ಕೊಲ್ಲೂರು ಮೂಕಾಂಬಿಕೆಯನ್ನು ಪ್ರಾರ್ಥಿಸಿ ಮುಂದೆ ಸಾಗಬಹುದು. ಜನ್ಮ ಶನಿಯ ಸಂಚಾರ ಇರುವುದರಿಂದ ಮೌನದಿಂದ ಇದ್ದು, ಯಾರಿಗೂ ತಿರುಗಿ ಉತ್ತರಿಸದೆ, ಕ್ರೌರ್ಯ, ಅಸಂತೋಷ ಉಂಟು ಮಾಡದೆ ಇರುವುದು ನಿಮ್ಮ ಧ್ಯೇಯವಾಗಲಿ. ತೃತೀಯ ಗುರುವಿಗೆ ಶೃಂಗೇರಿ ಶಾರದೆ, ನಿಮ್ಮ ಕುಲಗುರುಗಳನ್ನು ಸಂದರ್ಶಿಸಿ.
ಕಣ್ಣಿಗೊಂದು ಸವಾಲ್​: ಬಾತುಕೋಳಿ ಪತ್ತೆಹಚ್ಚಲು ಶೇ. 98 ಮಂದಿ ಫೇಲ್​, ಸಾಧ್ಯವಾದ್ರೆ ನೀವು ಪತ್ತೆ ಹಚ್ಚಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − six =
Remember me
