ಬೆಂಗಳೂರು:ಈ ಹೊಸ ವರ್ಷದಲ್ಲಿ ನಿಮ್ಮನ್ನು ನೀವೇ ಅಪ್​ಗ್ರೇಡ್​ ಮಾಡಿಕೊಳ್ಳುವ ಮಾರ್ಗಗಳನ್ನು ಹುಡುಕುತ್ತಿರುವಿರಾ? ಹಾಗಾದರೆ ಈ ಲೇಖನ ನಿಮಗೆ ಹೇಳಿ ಮಾಡಿಸಿದ್ದು!
2023ನೇ ಇಸವಿ ಹತ್ತಿರದಲ್ಲಿದೆ. ಈ ಕ್ರಿಸ್​ಮಸ್​ ರಜೆಗೆ ವಿಶ್ರಾಂತಿ ಬ್ಗೆ ಮಾತ್ರ ಆಲೋಚನೆ ಮಾಡೋದಲ್ಲ. ಬದಲಾಗಿ ಹೊಸ ವರ್ಷವನ್ನು ಹೊಸ ಆರಂಭವಾಗಿ ಹೇಗೆ ಮಾಡೋದು? ಈ ಹೊಸ ವರ್ಷದಲ್ಲಿ ಯಾವ ಹೊಸ ಗುರಿಯನ್ನು ತಲುಪುವುದು ಎಂಬುದರ ಬಗ್ಗೆ ಆಲೋಚಿಸಿ. ಇದಕ್ಕಿಂತ ಉತ್ತಮ ಅವಕಾಶ ಇಂತಹ ಕೆಲಸಗಳಿಗೆ ಸಿಗದು.
ಹೊಸ ವರ್ಷದ ನಿರ್ಣಯಗಳನ್ನು ಅನುಸರಿಸಲು 5 ಸಲಹೆಗಳು:
ಗುರಿ ಇಡುವುದಕ್ಕಿಂತ ಅದಕ್ಕಾಗಿ ಕೆಲಸ ಮಾಡೋದು ಕಷ್ಟದ ವಿಷಯ. ವಿಶೇಷವಾಗಿ ರಜಾದಿನಗಳಲ್ಲಿ ಆರಾಮವಾಗಿ ಇರೋಣ ಎಂದು ಭಾವಿಸುವ ಸಮಯದಲ್ಲೂ ಇಟ್ಟ ಗುರಿಯ ಬಗ್ಗೆ ಆಲೋಚನೆ ಮಾಡುವುದು ಇನ್ನೂ ಕಷ್ಟ. ಆದರೆ ಅದು ಅನಿವಾರ್ಯ. ಗುರಿ ಸಾಧಿಸಲು ಕಷ್ಟಪಡಲೇ ಬೇಕು. ಇದಕ್ಕೆ 5 ಸರಳ ಸಲಹೆಗಳಿವೆ
1.ನಿಮ್ಮ ನಿರೀಕ್ಷೆಗಳನ್ನು ನಿರ್ವಹಿಸಿನೀವು ನಿಮ್ಮ ಹೊಸ ವರ್ಷದ ಸಂಕಲ್ಪಗಳನ್ನು ಮಾಡಿ ಕೆಲವೇ ದಿನಗಳಲ್ಲಿ ಅದನ್ನು ಮರೆತು ಬಿಡುತ್ತೀರಾ? ಹೌದು ಎಂದಾದರೆ ಅದಕ್ಕೆ ಕಾರಣ ನೀವು ನಿಮ್ಮಿಂದ ಆಗದಷ್ಟು ಕೆಲಸಗಳನ್ನು ಹೊತ್ತುಕೊಂಡಿದ್ದೀರಿ ಎಂದರ್ಥ. ಹೆಚ್ಚಿನದನ್ನು ಸಾಧಿಸಬೇಕು ಎನ್ನುವುದು ಒಳ್ಳೆಯ ನಿರೀಕ್ಷೆ. ಆದರೆ ಮಾಡಲಾಗದಷ್ಟು ಕೆಲಸವನ್ನು ಹೊತ್ತುಕೊಂಡು ಅನಗತ್ಯವಾಗಿ ನಿರಾಸೆ ಅನುಭವಿಸುವುದಕ್ಕಿಂತ ವಾಸ್ತವಿಕ ನಿರೀಕ್ಷೆಗಳನ್ನು ಹೊಂದಿದರೆ ಸುಲಭವಾಗಿ ಗುರಿ ಸಾಧಿಸಬಹುದು. ಅದು ಹೇಗೆ ಮಾಡುವುದು? ತೀರಾ ಸರಳ. ನೀವು ಏನನ್ನೋ ಒಂದನ್ನು ಮಾಡಲೇಬೇಕು ಎಂದುಕೊಂಡಿರುತ್ತೀರಿ. ಅಂತಹ ಒಂದು ಅಥವಾ ಎರಡು ವಿಷಯಗಳನ್ನು ಮಾತ್ರವೇ ಗುರಿಯಾಗಿ ಇಟ್ಟುಕೊಳ್ಳಬೇಕು. ಇದರಿಂದ ಅನಗತ್ಯವಾಗಿ ನಮ್ಮ ತಲೆ ಇತರ ಸಾವಿರ ವಿಚಾರಗಳ ಬಗ್ಗೆ ಚಿಂತೆ ಮಾಡುವುದಿಲ್ಲ. ವಾಸ್ತವವನ್ನು ಗಮನದಲ್ಲಿ ಇಟ್ಟುಕೊಂಡು ಗುರಿ ಸೆಟ್​ ಮಾಡಿಕೊಂಡರೆ ಯಶಸ್ಉ ಖಚಿತ.
2.ಗುರಿಯ ಬಗ್ಗೆ SMART ಆಗಿರಿಗುರಿ ಯಶಸ್ವಿಯಾಗಲು ಮತ್ತು ಪ್ರೇರೇಪಿಸಲು ಇರುವುದು. ಅದು SMART ಆಗಿರಬೇಕು. ಇದು Specific, Mesuarable, Achieveable, Relavent ಮತ್ತು Time-specific” ಎಂದು ಸೂಚಿಸುತ್ತದೆ. ಈ ರೀತಿ ವ್ಯಕ್ತಿ SMART ಆಗಿದ್ದರೆ ತಮ್ಮ ಗುರಿಗಳನ್ನು ನಿರ್ದಿಷ್ಟ ಚೌಕಟ್ಟಿನಲ್ಲಿ ಹಾಕಿ ನಂತರ ಕೆಲಸ ಮಾಡುತ್ತಾರೆ. ಉದಾಹರಣೆಗೆ, ಉತ್ತಮವಾಗಿ ಕೆಲಸ ಮಾಡುವುದು ಒಂದು ಅಸ್ಪಷ್ಟ ಗುರಿ. ಅದು ಮನುಷ್ಯನ್ನು ಅಷ್ಟೇನೂ ಪ್ರೇರೇಪಿಸುವುದಿಲ್ಲ. ಬದಲಾಗಿ, ಈ ಸಮಸದ ಒಳಗೆ ನಾನು ಇಷ್ಟನ್ನು ಸಾಧಿಸುತ್ತೇನೆ ಎಂದು ಗುರಿ ಹಾಕಿಕೊಂಡರೆ ಬೇಗನೇ ಗುರಿ ತಲುಪಬಹುದು.
3.ಒಮ್ಮೆಗೆ ಒಂದೇ ಹೆಜ್ಜೆಒಮ್ಮೆಲೆ ಎಲ್ಲವನ್ನೂ ಮಾಡಬಲ್ಲೆ ಎನ್ನುವುದು ಮೂರ್ಖತನ. ಎಲ್ಲವನ್ನೂ ಒಮ್ಮೆಗೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಒಮ್ಮೆಗೆ ಒಂದೇ ಹೆಜ್ಜೆ ಇಟ್ಟು ಮುನ್ನುಗ್ಗಬೇಕು. ಕೆಲ; ಸಮಯದ ನಂತರ ಹಳೆ ಹೆಜ್ಜೆಗಳನ್ನು ನೋಡಿದಾಗ ನಾನೇನಾ ಇಷ್ಟೆಲ್ಲಾ ಮಾಡಿದ್ದು ಎಂದು ಎನಿಸುವುದು ಗ್ಯಾರೆಂಟಿ!
4.ಪ್ರಗತಿಯನ್ನು ಹೇಗೆ ಟ್ರ್ಯಾಕ್ ಮಾಡಬೇಕುಸುಮ್ಮನೇ ‘ಇದನ್ನು ಮಾಡುತ್ತೇನೆ’ ಎಂದು ಅಂದುಕೊಳ್ಳುವುದರಿಂದ ಕನಸು ನನಸಾಗಲ್ಲ. ಕನಸಿನ ಕಡೆಗೆ ಎಷ್ಟು ಹೆಜ್ಜೆ ಮುಂದೆ ಬಂದಿದ್ದೇನೆ ಎನ್ನುವುದನ್ನು ನಾವೇ ಟ್ರ್ಯಾಕ್​ ಮಾಡಿಕೊಳ್ಳುತ್ತಿದ್ದರೆ ಗುರಿ ತಲುಪಲು ಸಾಧ್ಯ. ಇದನ್ನು ಹೇಗೆ ಮಾಡುವುದು? ಸರಳ. ನಿತ್ಯವೂ ಬೆಳಗ್ಗೆ ಎದ್ದ ತಕ್ಷಣ ‘ಹಿಂದಿನ ದಿನ ಇಷ್ಟನ್ನು ಮಾಡಿದ್ದೆ, ಇವತ್ತು ಇಷ್ಟನ್ನು ಮಾಡಬೇಕು’ ಎಂದು ನಿಮ್ಮ ಡೈರಿಯಲ್ಲಿ ಬರೆದಿಟ್ಟು ಬಿಡಿ. ಅದೇ ರೀತಿ ಮಲಗುವ ಮುನ್ನ ‘ಇಡೀ ದಿನದಲ್ಲಿ ಇಷ್ಟು ಮಾಡಿದ್ದೆ, ಇಷ್ಟು ಸಕ್ಸಸ್​ ಸಿಕ್ಕಿದೆ, ನಾಳೆ ಇಷ್ಟನ್ನು ಮಾಡಬೇಕು’ ಎಂದು ಡೈರಿಯಲ್ಲಿ ಬರೆದು ನಿಮ್ಮ ಸಣ್ಣ ಸಣ್ಣ ಹೆಜ್ಜೆಗಳನ್ನು ಟ್ರ್ಯಾಕ್​ ಮಾಡಿ. ಇದರಿಂದ ಯಾವ ಕಡೆಗೆ ಸಾಗುತ್ತಿದ್ದೀರಿ ಎನ್ನುವ ಅರಿವು ನಿಮಗೆ ಇರುತ್ತದೆ. ಇದೇ ನಿಮಗೆ ಮೋಟಿವೇಷನ್​ ಆಗಿ ಬಿಡುತ್ತದೆ.
5.ತಪ್ಪುಗಳನ್ನು ಒಪ್ಪಿಕೊಳ್ಳಿ
ನೀವು ಉತ್ತಮವಾಗಿ ವಿನ್ಯಾಸಗೊಳಿಸಿದ ಪ್ಲಾನ್​ ಹೊಂದಿದ್ದರೂ, ಹಿನ್ನಡೆಗಳು ಯಾವಾಗ ಬೇಕಾದರೂ ಸಂಭವಿಸಬಹುದು. ಒಮ್ಮೆ ಸೋತರ ತಕ್ಷಣ ಗುರಿಯನ್ನು ಬಿಟ್ಟುಬಿಡಬಾರದು. ಯಾವ ಕಾರಣಕ್ಕೆ ನೀವು ಸೋತಿದ್ದು ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಇದನ್ನು ಮಾಡುವುದೂ ಸರಳ. ಒಂದು ಕಾಗದದಲ್ಲಿ ‘ನನ್ನ ಸೋಲಿಗೆ ಇದೆಲ್ಲಾ ಕಾರಣವಾಯಿತು. ಎಂದು ಬರೆದುಬಿಡಿ. ಇದರಿಂದ ಎರಡು ಲಾಭ. ಒಂದು, ಮನಸ್ಸು ಹಗುರ ಆಗುತ್ತೆ. ಎರಡು, ನಾವು ಮಾಡಿದ ತಪ್ಪಿನ ಪಾಠ ನಮಗೆ ಸಿಗುತ್ತೆ. ಈಗ ಮಾಡಿದ ತಪ್ಪನ್ನು ಮತ್ತೇ ಮಾಡದೆ ಹಿಂದಿನಷ್ಟೇ ಉತ್ಸಾಹದಿಂದ ಕೆಲಸ ಶುರು ಮಾಡಬೇಕು.
ಇಷ್ಟನ್ನು ಮಾಡಿದರೆ ಗೆಲುವು ಪಡೆಯಲು ಕಷ್ಟಪಡಬೇಕಿಲ್ಲ. ತಾನಾಗಿಯೇ ಬಂದೇ ಬರುತ್ತದೆ. ಆದರೆ ದುರದೃಷ್ಟವಶಾತ್​ ಇಡೀ ಗುರಿಯೇ ಯಾವುದೋ ಬೇರೆಯ, ಹೊರಗಿನ ಕಾರಣಕ್ಕೆ ಉಲ್ಟಾ ಆದರೆ ಹೊಸ ಗುರಿ ಸೆಟ್​ ಮಾಡಿಕೊಂಡು ಹೊಸತಾಗಿ ಈ 5 ಸೂತ್ರಗಳನ್ನು ಪಾಲಿಸುತ್ತಾ ಬನ್ನಿ. ಸರಳವಾಗಿ ಗೆಲ್ಲಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 10 =
Remember me
