ಉಡುಪಿ:ನವ ವಿವಾಹಿತ ಜೋಡಿಯೊಂದು ತಮ್ಮ ಮದುವೆಯ ದಿನವನ್ನು ನೆನಪಿನಲ್ಲಿರುವಂತೆ ಮಾಡುವ ಸಲುವಾಗಿ ಸಾರ್ಥಕ ಕೆಲಸವೊಂದನ್ನು ಮಾಡಿದ್ದಾರೆ. ವಿದ್ಯುತ್ ಸಂಪರ್ಕವಿಲ್ಲದೆ ಸಮಸ್ಯೆಯಲ್ಲಿದ್ದ ದಲಿತ ಕುಟುಂಬವೊಂದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿ ಮಾನವವೀಯತೆ ಮೆರೆದಿದ್ದಾರೆ.
ಇದನ್ನೂ ಓದಿ:ಯಶ್​ ಮಗನ ಹೊಸ ಲುಕ್​! ಮಗನ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್​
ಉಡುಪಿ ಜಿಲ್ಲೆಯ ಕನ್ನರ್ಪಾಡಿ ನಿವಾಸಿ ಶರಣ್ ಶೆಟ್ಟಿ, ಮತ್ತು ನವ್ಯ ಶೆಟ್ಟಿ ಈ ವಿಶಿಷ್ಟ ನವದಂಪತಿಗಳು. ದಲಿತ ಸಮುದಾಯದ ಶ್ರೀಮತಿ ಲೀಲಾ ಅವರು ಕಳೆದ 30 ವರ್ಷಗಳಿಂದ ಮನೆಯಲ್ಲಿ ವಿದ್ಯುತ್​ ಇಲ್ಲದೆ ಪರದಾಡುತ್ತಿದ್ದರು. ಇದೀಗ ಈ ಜೋಡಿಯ ಮದುವೆಯ ದಿನದಂದು ಲೀಲಾ ಅವರ ಮನೆಗೆ ಹೊಸ ಬೆಳಕು ಬಂದಿದೆ. ಸ್ವತಃ ದಂಪತಿಗಳೇ ಅವರ ಮನೆಗೆ ಬಂದು ವಿದ್ಯುತ್ ಸಂಪರ್ಕವನ್ನು ಉದ್ಘಾಟಿಸಿದ್ದಾರೆ.
ಇದನ್ನೂ ಓದಿ:VIDEO| ಕರ್ನಾಟಕ ಮೂಲದ ವ್ಯಕ್ತಿಯಿಂದ ಉಳಿಯಿತು ಮುಂಬೈ ಪ್ರಯಾಣಿಕನ ಪ್ರಾಣ! ಪೊಲೀಸ್ ಪೇದೆ ಸಾಹಸ ಹೇಗಿದೆ ನೋಡಿ
ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ಮತ್ತು ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಈ ಮನೆಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಈ ಮನೆಗೆ ತಗಲಿದ ವಿದ್ಯುತ್ ಸಂಪರ್ಕದ ಸಂಪೂರ್ಣ ವೆಚ್ಚವನ್ನು ನವದಂಪತಿಗಳು ಆಸರೆ ಚಾರಿಟೇಬಲ್ ಟ್ರಸ್ಟ್​ಗೆ ಹಸ್ತಾಂತರಿಸಿದ್ದಾರೆ. ಉಡುಪಿ ಭಾಷೆಲ್ ಮಿಷನರಿ ಹಾಲಿನಲ್ಲಿ ತಮ್ಮ ಮದುವೆ ಸಂಪ್ರದಾಯ ಮುಗಿದ ತಕ್ಷಣ ನೇರವಾಗಿ ಪೆರಂಪಳ್ಳಿಗೆ ಬಂದು, ಲೀಲಾ ಅವರ ಮನೆಗೆ ಬೆಳಕು ನೀಡಿದ್ದಾರೆ.
ಅಮ್ಮ ಸತ್ತಿಲ್ಲ, ಮಲಗಿದ್ದಾಳೆ! 20 ದಿನದಿಂದ ಶವವನ್ನೇ ಪೂಜಿಸುತ್ತಿರುವ ಮಕ್ಕಳು! ಕಣ್ಣೀರು ತರಿಸುತ್ತೆ ಈ ಮಕ್ಕಳ ನಂಬಿಕೆ

‘ಸಿದ್ದರಾಮಯ್ಯನವರು ನಮ್ಮೂರಿಗೆ ಏನೂ ಮಾಡಿಲ್ಲ’ ಸಿದ್ದರಾಮಯ್ಯ ಎದುರೇ ಅಸಮಾಧಾನ ತೋಡಿಕೊಂಡ ಗ್ರಾ.ಪಂ ಸದಸ್ಯ! ವೇದಿಕೆಯಿಂದ ಕೆಳಕ್ಕೆ ನೂಕಿದ ಸಿದ್ದರಾಮಯ್ಯ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 + 14 =
Remember me
