ಬೀದರ್​:ಪ್ರೀತಿಸಿ ಎರಡು ತಿಂಗಳ ಹಿಂದೆ ದಾಂಪತ್ಯಕ್ಕೆ ಕಾಲಿಟ್ಟಿದ್ದ ಜೋಡಿಗೆ ಅಂದುಕೊಂಡಂತೆ ಎಲ್ಲವೂ ಸರಿ ಇದ್ದಿದ್ದರೆ ಸಂಸಾರದ ಬಂಡಿ ಸರಿಯಾಗೇ ನಡೆಯುತಿತ್ತು. ಆದರೆ, ಅದ್ಹೇನಾಯ್ತೋ ಏನೋ ಕೈ ಹಿಡಿದ ಹೆಂಡತಿಯನ್ನು ಒಬ್ಬಂಟಿ ಮಾಡಿ ಆತ ಬಾರದ ಲೋಕಕ್ಕೆ ಹೋಗಿದ್ದಾನೆ. ಖುಷಿಯಾಗಿ ಇರಬೇಕಿದ್ದ ನವಜೋಡಿಯ ದಾಂಪತ್ಯ ಕರೊನಾ ಕ್ವಾರಂಟೈನ್​ ಕೇಂದ್ರದಲ್ಲಿ ದುರಂತ ಅಂತ್ಯಕಂಡಿದೆ.
ಇದನ್ನೂ ಓದಿರಿಸಾಮೂಹಿಕ ಪ್ರಾರ್ಥನೆ ಬಂದ್​, ಪಾಲಕರಿಗೂ ನಿರ್ಬಂಧ, ಮನೆಯೂಟ ಕಡ್ಡಾಯ… ಶಾಲಾರಂಭಕ್ಕೆ ಹೀಗಿರಲಿದೆಯೇ ಮಾರ್ಗಸೂಚಿ?
ನಾರಾಯಣಪುರ ಗ್ರಾಮದ ಸಚಿನ್ ತೇಜೆರಾವ್ ಜಾಧವ್ (21) ಮೃತ. ಮೇ 19ರಂದು ಪತ್ನಿ ಜತೆ ಸಚಿನ್ ತೇಜೆರಾವ್ ಮುಂಬೈನಿಂದ ಆಗಮಿಸಿದ್ದ. ಹಾಗಾಗಿ ಇವರಿಬ್ಬರನ್ನೂ ಔರಾದ್ ತಾಲೂಕಿನ ವನಮಾರಪಳ್ಳಿ ಗ್ರಾಮ ಹೊರವಲಯದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆದರೆ, ಮಂಗಳವಾರ ಬೆಳಗಿನ ಜಾವ ಸಚಿನ್​ ತೇಜೆರಾಜ್​ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕೌಟುಂಬಿಕ ಕಲಹ ಆತ್ಮಹತ್ಯೆಗೆ ಕಾರಣ ಎನ್ನಲಾಗಿದ್ದು, ತಡರಾತ್ರಿವರೆಗೂ ಗಂಡ-ಹೆಂಡತಿ ನಡುವೆ ಜಗಳ ನಡೆದಿತ್ತು ಎಂಬ ಮಾಹಿತಿ ಇದೆ. ಔರಾದ್ ಪೊಲೀಸರು ಸ್ಥಳಕ್ಕೆ ಭೇಟಿ ‌ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿರಿಕ್ವಾರಂಟೈನ್​ ಕೇದ್ರದಲ್ಲಿ ಮತ್ತೊಂದು ಸಾವು, ಮುಂದುವರಿದ ಆತ್ಮಹತ್ಯೆ ಸರಣಿ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
