ಬೆಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ನವವಿವಾಹಿತೆಯ ಶವ ಪತ್ತೆಯಾಗಿರುವ ಘಟನೆ ಹೊಸಕೋಟೆ ತಾಲೂಕಿನ ಗಿಡ್ಡಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತಳನ್ನು ಇಜಾರ್ (23) ಎಂದು ಗುರುತಿಸಲಾಗಿದೆ. ಗಂಡ ಶಾಬುದ್ದಿನ್ ವರದಕ್ಷಿಣೆ ಕಿರುಕುಳ ನೀಡಿ, ಹೊಡೆದು ಕೊಲೆ ಮಾಡಿ ನೇಣು ಹಾಕಿದ್ದಾನೆಂದು ಇಜಾರ್, ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಮೂಲತಃ ಕೋಲಾರ ಬಳಿಯ ಕ್ಯಾಲನೂರು ಗ್ರಾಮದ ಇಜಾರ್​ನನ್ನು ಹೊಸಕೋಟೆ ತಾಲೂಕಿನ ಗಿಡ್ಡಪ್ಪನಹಳ್ಳಿ ಗ್ರಾಮದ ಶಾಬುದ್ದಿನ್ ಎಂಬಾತನ ಜತೆ ಕಳೆದ ಮೂರು ತಿಂಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಇದೀಗ ಇಜಾರ್​ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವರದಕ್ಷಿಣೆ ಕಿರುಕುಳ ನೀಡಿ ಇಜಾರ್​ನನ್ನು ಗಂಡ ಶಾಬುದ್ದಿನ್, ಮಾವ ಮೆಹಬೂಬ್, ಅತ್ತೆ ಯಾಸ್ಮಿನ್ ಮತ್ತು ನಾದಿನಿ ಸುಮೇರಾ ಹೊಡೆದು ಕೊಲೆ ಮಾಡಿ ಯಾರಿಗೂ ಅನುಮಾನ ಬಾರದಂತೆ ಕಿಟಕಿಗೆ ನೇಣು ಬಿಗಿದಿದ್ದಾರೆಂದು ಇಜಾರ್​ ಕುಟುಂಬಸ್ಥರು ದೂರಿದ್ದಾರೆ.
ಇದನ್ನೂ ಓದಿರಿ:ಮುಕೇಶ್​ ಅಂಬಾನಿ ಪತ್ನಿಯಾದ್ರು ಪ್ರೊಫೆಸರ್​- ವಿದ್ಯಾರ್ಥಿಗಳು ಕೆಂಡಾಮಂಡಲ; ಭಾರಿ ಪ್ರತಿಭಟನೆ
ಮೃತಪಟ್ಟಿರುವ ಇಜಾರ್​ನ ಮದುವೆ ಶಾಬುದ್ದಿನ್ ಜತೆ ನಿಗದಿಯಾದಾಗ ಒಳ್ಳೆಯ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಿಕೊಡುವಂತೆ ಹುಡುಗನ ಕಡೆಯವರು ತಿಳಿಸಿದ್ದರಂತೆ. ಇದಕ್ಕೂ ಒಪ್ಪಿದ ಹುಡುಗಿ ಕುಟುಂಬಸ್ಥರು ದೊಡ್ಡದಾದ ಕಲ್ಯಾಣ ಮಂಟಪವನ್ನು ಬುಕ್ ಮಾಡಿದ್ದಾರೆ. ಆದ್ರೆ, ಕಲ್ಯಾಣ ಮಂಟಪದಲ್ಲಿ ಮದುವೆ ಬುಕ್ ಆಗುತ್ತಿದ್ದಂತೆ ಶಾಬುದ್ದಿನ್ ಬುಲೆಟ್ ಗಾಡಿ ನೀಡುವಂತೆ ಒತ್ತಾಯಿಸಿದ್ದಾನೆ.
ಅಲ್ಲದೆ, ನಮ್ಮ ಮನೆಯಲ್ಲಿ ಕಾರಿದೆ. ಮದುವೆ ಖರ್ಚಿನ ಬದಲು ನಾವೇ ಸರಳವಾಗಿ ಮದುವೆ ಮಾಡಿಕೊಳ್ಳುತ್ತೇವೆ. ಆ ಹಣವನ್ನ ನಮಗೆ ನೀಡಿ ನಾವು ಕಾರಿನ ಕಂತು ಕಟ್ಟಿಕೊಳ್ಳುತ್ತೇವೆ ಅಂದಿದ್ದರಂತೆ. ಇದಕ್ಕೂ ಒಪ್ಪಿದ ಹುಡುಗಿ ಕಡೆಯವರು ಮೂರು ಲಕ್ಷ ರೂ. ಹಣವನ್ನ ನೀಡಿ ಮದುವೆಯನ್ನು ಮಾಡಿಕೊಟ್ಟಿದ್ದಾರೆ. ಆದರೆ, ಮದುವೆಯಾಗಿ 20 ದಿನಗಳಿಗೆ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಇಜಾರ್​ಗೆ ಕಿರುಕುಳ ನೀಡಿದ್ದಾರೆ.
ಈ ಬಗ್ಗೆ ನ್ಯಾಯ ಪಂಚಾಯ್ತಿಗಳು ಆಗಿದೆ. ಇನ್ನೂ ಕಳೆದ ಎರಡು ವಾರದ ಹಿಂದೆ ಮತ್ತೆ ನ್ಯಾಯ ಮಾಡಿ ಗಂಡನ ಮನೆಗೆ ಇಜಾರ್​ನನ್ನು ಬಿಟ್ಟು ಹೋಗಿದ್ದ ಕುಟುಂಬಸ್ಥರಿಗೆ ಮಂಗಳವಾರ (ಮಾರ್ಚ್​ 16) ಸಂಜೆ ನಿಮ್ಮ ಮಗಳು ನೇಣು ಬಿಗಿದುಕೊಂಡಿದ್ದಾಳೆ ಅಂತಾ ತಿಳಿಸಿದ್ದರಂತೆ. ಆದರೆ ಇವರು ಹೋಗುವ ವೇಳೆಗೆ ಮೃತದೇಹ ಗಾಯದ ಸ್ಥಿತಿಯಲ್ಲಿದ್ದು, ಕೊಲೆ ಮಾಡಲಾಗಿದೆ ಎಂದು ಹುಡುಗಿ ಕಡೆಯವರು ಆರೋಪಿಸಿದ್ದಾರೆ.
ಇದನ್ನೂ ಓದಿರಿ:ಪತ್ನಿ ಇರುವಾಗಲೇ ಇನ್ನೊಬ್ಬಳ ಜತೆ ಲೈಂಗಿಕ ಸಂಪರ್ಕ ಹೊಂದಿದರೆ ಕಾನೂನು ಏನು ಹೇಳುತ್ತದೆ?
ಈ ಸಂಬಂಧ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಂಡನ ಮನೆ ಕಡೆಯವರು ಮನೆ ಬಿಟ್ಟು ನಾಪತ್ತೆಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳಾ? ಅಥವಾ ಕೊಲೆ ಮಾಡಲಾಗಿದೆಯೋ? ಎಂದು ತನಿಖೆಯನ್ನ ನಡೆಸುತ್ತಿದ್ದು, ತನಿಖೆ ನಂತರ ಸತ್ಯಾಸತ್ಯತೆ ಗೊತ್ತಾಗಲಿದೆ.(ದಿಗ್ವಿಜಯ ನ್ಯೂಸ್​)
ಉಳುಕು ನೋವಿಂದ ಆಸ್ಪತ್ರೆಗೆ ಹೋದ ಯುವತಿಗೆ ಶಾಕ್​: 25 ವರ್ಷ ಬಳಿಕ ಗೊತ್ತಾಯ್ತು ತಾನು ಹೆಣ್ಣಲ್ಲ, ಗಂಡೆಂದು!

ಡಿಎನ್​ಎಯಲ್ಲಿ ಗೊತ್ತಾಯ್ತು ಅಪ್ಪನ 30 ಮಕ್ಕಳ ಭಯಾನಕ ಸತ್ಯ… ತಂಗಿಯಲ್ಲಿ ಒಬ್ಳು ಇವನದ್ದೇ ಲವರ್​!

ಪ್ಲೀಸ್​ ಬಿಟ್ಟು ಹೋಗ್ಬೇಡ.. ಕಾಲಿಡಿದು ಗೋಗರೆದ್ರೂ ಬೈಕ್​ ಏರಿ ಮತ್ತೊಬ್ಬನ ಜತೆ ಹೊರಟೇ ಹೋದ್ಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
