ಕೋಲಾರ:ಬಿಗ್​ಬಾಸ್​ ಬೆಡಗಿ ಚೈತ್ರಾ ಕೊಟ್ಟೂರು ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಸದ್ದಿಲ್ಲದೆ ಸರಳವಾಗಿ ಮದುವೆಯಾಗಿದ್ದು, ಮದುವೆಯಾದ ಮೊದಲ ರಾತ್ರಿಯೇ ಗಲಾಟೆ-ಗದ್ದಲ ಉಂಟಾಗಿ, ದಂಪತಿ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ.
ಬಿಗ್​ಬಾಸ್​ ಸೀಸನ್​-7ರಲ್ಲಿ ಸ್ಪರ್ಧಿಸಿದ್ದ ಚೈತ್ರಾ ಕೊಟ್ಟೂರು ಮಂಡ್ಯ ಮೂಲದ ನಾಗಾರ್ಜುನ್ ಎಂಬವರ ಜತೆ ಇಂದು ಬೆಳಗ್ಗೆ ಬೆಂಗಳೂರಿನ ಬ್ಯಾಟರಾಯನಪುರದ ಗಣಪತಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಆದರೆ ಇದೀಗ ಇಬ್ಬರೂ ಕೋಲಾರದ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮದುವೆ ವಿಷಯವೇ ವಿವಾದಕ್ಕೀಡಾಗಿದೆ.ನಾಗಾರ್ಜುನ್​ಗೆ ಚೈತ್ರಾ ಜತೆ ಮದುವೆಯಾಗುವುದು ಇಷ್ಟವಿರಲಿಲ್ಲ. ಆದರೆ ಕೆಲವೊಂದು ಸಂಘಟನೆಗಳವರು ಸೇರಿ ನಾಗಾರ್ಜುನ್ ಅವರನ್ನು ದೇವಸ್ಥಾನದಲ್ಲಿ ಕೂಡಿ ಹಾಕಿ ಬಲವಂತದಲ್ಲಿ ಮದುವೆ ಮಾಡಿಸಿದ್ದಾರೆ ಎನ್ನಲಾಗಿದೆ. ಸಂಘಟನೆಗಳ ಬೆದರಿಕೆಗೆ ಮಣಿದ ನಾಗಾರ್ಜುನ್ ಒಲ್ಲದ ಮನಸ್ಸಿನಿಂದ ತಾಳಿ ಕಟ್ಟಿದ್ದಾರೆ ಎನ್ನಲಾಗಿದೆ.
ನಾಗಾರ್ಜುನ್ ಮನೆಯವರಿಗೂ ಈ ಮದುವೆ ಇಷ್ಟವಿರಲಿಲ್ಲ. ಹೀಗಾಗಿ ಅವರು ಇಂದು ಕೋಲಾರದ ಕುರುಬರಪೇಟೆಯಲ್ಲಿರುವ ಚೈತ್ರಾ ಮನೆಗೆ ಬಂದು ತರಾಟೆಗೆ ತೆಗೆದುಕೊಂಡಿದ್ದರಿಂದ ಮದುವೆ ಭಿನ್ನಾಭಿಪ್ರಾಯದ ವಿಚಾರ ಪೊಲೀಸ್ ಠಾಣೆಗೂ ತಲುಪಿದೆ. ನಾಗಾರ್ಜುನ್ ಕುಟುಂಬದವರು ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹೀಗಾಗಿ ಪೊಲೀಸರು ಚೈತ್ರಾ-ನಾಗಾರ್ಜುನ್ ದಂಪತಿಯನ್ನು ಠಾಣೆಗೆ ಕರೆಸಿದ್ದಾರೆ. ಅಲ್ಲಿ ನಾಗಾರ್ಜುನ್​ ಈ ಮದುವೆ ಇಷ್ಟವಿಲ್ಲ, ನಾನು ಚೈತ್ರಾ ಜತೆ ಬಾಳುವುದಿಲ್ಲ ಎಂದು ಹೇಳುತ್ತಿದ್ದರೆ, ನನಗೆ ನಾಗಾರ್ಜುನ್ ಇಷ್ಟ, ನಾನು ಅವನ ಜತೆಗೇ ಇರುತ್ತೇನೆ ಎಂದು ಚೈತ್ರಾ ಪಟ್ಟು ಹಿಡಿದಿದ್ದಾರೆ.
ಸದ್ದಿಲ್ಲದೆ ಮದುವೆಯಾದ ಚೈತ್ರಾ ಕೊಟ್ಟೂರು! ಅತ್ಯಂತ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ

ಮದುವೆಗೆ ಹೊರಟಿದ್ದವರ ಮರಣ: ಭೀಕರ ಅಪಘಾತದಲ್ಲಿ ಬಾಲಕಿಯರಿಬ್ಬರು ಸ್ಥಳದಲ್ಲೇ ಸಾವು; 10ಕ್ಕೂ ಅಧಿಕ ಮಂದಿಗೆ ಗಾಯ

ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಪಾಸ್ ಇಲ್ಲ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ

ನಾನು ನೀವು ಹೋಗಿ ಅವರ ಬಟ್ಟೆ ಬಿಚ್ಚಿದ್ವಾ? ಆ ಯಪ್ಪ ಎದುರಿಗೆ ಸಿಕ್ಕಾಗ ಏನು ಹೇಳಬೇಕೋ ಹೇಳುತ್ತೇನೆ: ಸಿಡಿ ಕೇಸ್​ ಬಗ್ಗೆ ಡಿ.ಕೆ. ಸುರೇಶ್ ಸಿಡಿಮಿಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 2 =
Remember me
