ಚಿತ್ರದುರ್ಗ:ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಇಂಗ್ಲಿಷ್ ಸೇರಿ ದೇಶದ ಬೇರೆ-ಬೇರೆ ಭಾಷೆಗಳಲ್ಲೂ ಪ್ರಕಟವಾಗಬೇಕು ಎಂದು ಕೇಂದ್ರದ ಮಾಜಿ ಸಚಿವ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಆಶಿಸಿದರು. ದಸರಾ, ದೀಪಾವಳಿ ಹಿನ್ನೆಲೆಯಲ್ಲಿ ಚಿತ್ರದುರ್ಗದ ‘ವಿಜಯವಾಣಿ’ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ‘ವಿಜಯವಾಣಿ ಏಳನೇ ವರ್ಷದ ವಿಜಯೋತ್ಸವ-2020’ರ ಅದೃಷ್ಟಶಾಲಿಗಳ ಆಯ್ಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಆರ್​ಎಲ್ ಹೇಗೆ ದೇಶ-ವಿದೇಶಗಳಲ್ಲಿ ತನ್ನ ಜಾಲ ಹೊಂದಿದೆಯೋ ಹಾಗೆ ವಿಜಯವಾಣಿ ಕೂಡ ದೇಶಾದ್ಯಂತ ವಿಸ್ತರಣೆಯಾಗಬೇಕು ಎಂದರು.
ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರು ಕಷ್ಟ ಜೀವಿ, ಶಿಸ್ತಿನ ಸಿಪಾಯಿ. ಮೇಲಾಗಿ ಹಿಡಿದ ಕೆಲಸ ಸಾಧಿಸುವ ಛಲವಂತರು. ಅವರು ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ. ಹೀಗಾಗಿ ವಿಜಯವಾಣಿಯನ್ನು ಬೇರೆ- ಬೇರೆ ಭಾಷೆಗಳಲ್ಲಿ ಹೊರತರುವುದು ಅವರಿಗೆ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಈ ಹಿಂದೆ ಒಂದು ಪತ್ರಿಕೆ ಸ್ಥಾಪಿಸಿ ನಂ.1 ಮಾಡಿದ್ದರು. ಅದಾದ ನಂತರ ವಿಜಯವಾಣಿ ಸ್ಥಾಪಿಸಿ ಅದನ್ನೂ ನಂ.1 ಪಟ್ಟಕ್ಕೆ ತಂದರು. ದಿಗ್ವಿಜಯ ಸುದ್ದಿವಾಹಿನಿ ಆರಂಭಿಸಿ ಅಲ್ಲಿಯೂ ಹೆಜ್ಜೆ ಗುರುತು ಮೂಡಿಸಿದ್ದಾರೆ. ಅವರೊಬ್ಬ ಸಾಧನಾಮೂರ್ತಿ ಎಂದು ಬಣ್ಣಿಸಿದರು. ನಾಡಿನ ಜನತೆಗೆ ಏನಾದರೂ ಸೇವೆ ಸಲ್ಲಿಸಬೇಕೆಂಬ ಅವರ ತುಡಿತ ಅನುಕರಣೀಯ. ಒಂದೆರಡು ಲಾರಿಗಳಿಂದ ಆರಂಭಿಸಿದ ವಿಆರ್​ಎಲ್, ಇದೀಗ ದೇಶದ ನಂ.1 ಸಾರಿಗೆ ಸಂಸ್ಥೆಯಾಗಿದೆ. ಇದಕ್ಕೆ ಅವರ ಆಲೋಚನಾ ಶಕ್ತಿ, ಶಿಸ್ತು, ಸಮಯ ಪಾಲನೆ ಕಾರಣ ಎಂದರು.
ಡಾ.ವಿಜಯ ಸಂಕೇಶ್ವರ ಅವರನ್ನು ನಾನು ಹತ್ತಿರದಿಂದ ಬಲ್ಲೆ. ಅವರ ಸಮಯ ಪಾಲನೆ ಬಗ್ಗೆ ನನಗೆ ಹೆಮ್ಮೆ ಇದೆ. ಅವರೇನಾದರೂ ಇಂದಿನ ಕಾರ್ಯಕ್ರಮಕ್ಕೆ ಬಂದಿದ್ದರೆ ನಾನು ಅರ್ಧಗಂಟೆ ಮುಂಚೆಯೇ ಹಾಜರಿರುತ್ತಿದ್ದೆ ಎಂದು ತಿಳಿಸಿದರು.
ಮಲ್ಲಾಡಿಹಳ್ಳಿಯ ಅಮೃತ್ ಆರ್ಗ್ಯಾನಿಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ನಾಗರಾಜ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಉದ್ಯಮ ಸ್ಥಾಪಿಸಿ ಉದ್ಯೋಗ ಸೃಜನೆ ಮಾಡಿದ ನನಗೆ ಡಾ. ವಿಜಯ ಸಂಕೇಶ್ವರ ಅವರೇ ಪ್ರೇರಣೆ ಎಂದರು. ಮಲ್ಲಾಡಿಹಳ್ಳಿ ಸ್ವಾಮೀಜಿ ಆಶೀರ್ವಾದ ಹಾಗೂ ಡಾ.ವಿಜಯ ಸಂಕೇಶ್ವರ ಅವರ ಪ್ರೇರಣೆಯಿಂದ 50 ಕೋಟಿ ರೂ. ವೆಚ್ಚದಲ್ಲಿ ಸಾವಯವ ಉದ್ಯಮ ಸ್ಥಾಪಿಸಿದ್ದು 520ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ ಎಂದರು. ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 1 =
Remember me
