ಎಲ್ಲರೂ ಬೆಳಗಿನ ಜಾವದ ಸವಿನಿದ್ರೆಯಲ್ಲಿ ಇರುವಾಗ ತಾವು ಮಾತ್ರ ಚಳಿ-ಮಳೆ ಲೆಕ್ಕಿಸದೆ ಮನೆಮನೆಗೆ ದಿನಪತ್ರಿಕೆಗಳನ್ನು ತಲುಪಿಸುವ ಶ್ರಮಜೀವಿಗಳು ಪತ್ರಿಕಾ ವಿತರಕರು. ಜಗತ್ತಿಗೆಲ್ಲ ವಾರಾಂತ್ಯ, ಹಬ್ಬ, ಹರಿದಿನಗಳೆಂಬ ಹತ್ತು-ಹಲವು ರಜೆ ಸಿಕ್ಕರೂ, ಇವರದು ಮಾತ್ರ ವರ್ಷ ಪೂರ್ತಿ ಬಿಡುವೇ ಇಲ್ಲದಕಾಯಕ. ವಿತರಕರಿಲ್ಲದೆ ದಿನಪತ್ರಿಕೆಗಳಿಲ್ಲ ಎಂಬಷ್ಟರ ಮಟ್ಟಿಗೆ ಪತ್ರಿಕಾ ವ್ಯವಸ್ಥೆಗೆ ಇವರು ಅನಿವಾರ್ಯ ಬೆನ್ನೆಲುಬು. ಏಕೆಂದರೆ, ಪತ್ರಿಕೆಗಳನ್ನು ಎಷ್ಟು ಒಪ್ಪ-ಓರಣವಾಗಿ ಸಿದ್ಧಪಡಿಸಿದ ಬಳಿಕವೂ ಅದನ್ನು ಓದುಗರ ಮನೆಬಾಗಿಲಿಗೆ ತಲುಪಿಸುವ ಆಪದ್ಬಾಂಧವರು ಇವರೇ. ಮನೆಯಲ್ಲಿ ಮದುವೆ ಇರಲಿ, ಸೂತಕವಿರಲಿ, ವಿತರಕರು ಯಾವತ್ತೂ ತಮ್ಮ ಕಾಯಕ ತಪ್ಪಿಸುವವರಲ್ಲ. ಕರೊನಾ ಸಂಕಷ್ಟದ ಸಂದರ್ಭ ಇಡೀ ದೇಶವೇ ಲಾಕ್​ಡೌನ್ ಆಗಿದ್ದಾಗಲೂ ಮನೆ-ಮನೆಗೆ ಪತ್ರಿಕೆ ತಲುಪಿಸಿದ ವಾರಿಯರ್ಸ್ ಇವರು. ಶುಕ್ರವಾರ (ಸೆ.4) ಪತ್ರಿಕಾ ವಿತರಕರ ದಿನ. ಈ ಹಿನ್ನೆಲೆಯಲ್ಲಿ ಪತ್ರಿಕಾ ವಿತರಣೆಗೇ ತಮ್ಮ ಜೀವನ ಸಮರ್ಪಿಸಿಕೊಂಡು, ಹತ್ತಾರು ಮಂದಿಗೆ ಉದ್ಯೋಗದಾತರಾಗಿರುವ, ಈ ವೃತ್ತಿಯಿಂದಲೇ ಉತ್ತಮ ಬದುಕು ಕಟ್ಟಿಕೊಂಡು ಮಾದರಿ ಆಗಿರುವ ವಿತರಕ ಬಂಧುಗಳ ಯಶೋಗಾಥೆಯನ್ನು ನಾಡಿಗೆ ಪರಿಚಯಿಸುವ ಕಿರು ಪ್ರಯತ್ನ ಇಲ್ಲಿದೆ. ವಿಜಯವಾಣಿಯ ಎಲ್ಲ ವಿತರಕ ಬಾಂಧವರಿಗೆ ಪತ್ರಿಕಾ ವಿತರಕರ ದಿನ ಶುಭಾಶಯಗಳು.
ಅಕ್ಷಯ್​ ಕುಮಾರ್ ಚಿಕ್ಕಮಗಳೂರುಜೀವನ ಮತ್ತು ವಿದ್ಯಾಭ್ಯಾಸಕ್ಕಾಗಿ ಪತ್ರಿಕಾ ವಿತರಕನಾಗಿ ಗುರಿ ಮುಟ್ಟಿದ ಹೆಚ್ಚುಗಾರಿಕೆ ‘ವಿಜಯವಾಣಿ’ ಚಿಕ್ಕಮಗಳೂರು ಏಜೆಂಟ್ ಅಕ್ಷಯ್ ಕುಮಾರ್ ಅವರದು. ಎಸ್ಸೆಸ್ಸೆಲ್ಸಿ ಬಳಿಕ ಓದು ಮುಂದುವರಿಸುವ ಮಹತ್ವಾಕಾಂಕ್ಷೆಯ ಹಂತದಲ್ಲಿ ಅಕ್ಷಯ್ ಆರಿಸಿಕೊಂಡಿದ್ದು ಪತ್ರಿಕೆ ವಿತರಕನ ಕೆಲಸ. ಜಿಲ್ಲಾಮಟ್ಟದ ಏಜೆನ್ಸಿ ಪಡೆದು ಏಕಾಂಗಿಯಾಗಿ ಐದಾರು ಪ್ರದೇಶಗಳಲ್ಲಿ ಮನೆಗಳಿಗೆ ಪತ್ರಿಕೆ ತಲುಪಿಸಿದರೂ ಮಾಸಿಕ ಉಳಿಸಲು ಸಾಧ್ಯವಾಗಿದ್ದು 2-3 ಸಾವಿರ ರೂ. ಮಾತ್ರ. 2010ರಲ್ಲಿ ರಾಜ್ಯಮಟ್ಟದ ಪತ್ರಿಕೆಯ ಏಜೆನ್ಸಿ ಪಡೆದ ಬಳಿಕ ಸಾಕಷ್ಟು ಪತ್ರಿಕಾ ವಿತರಕರನ್ನೂ ನೇಮಿಸಿಕೊಳ್ಳಬೇಕಾಯಿತು. 2012ರಲ್ಲಿ ‘ವಿಜಯವಾಣಿ’ ಆರಂಭವಾದ ಬಳಿಕ ಇವರ ಬದುಕಿಗೆ ಹೊಸ ತಿರುವು ಸಿಕ್ಕಿತು. ಸಾವಿರಾರು ಚಂದಾದಾರರನ್ನು ಸಂಪಾದಿಸಿದ ಇವರು, ಹೊಸ ಹೊಸ ಓದುಗರನ್ನು ಬೆಳೆಸಲು ಕಾರಣರಾದರು. ಜತೆಗೆ ಕಿರುತೆರೆ ವಾಹಿನಿ ಹಾಗೂ ಪತ್ರಿಕಾ ಜಾಹೀರಾತು ಏಜೆನ್ಸಿಯೂ ಕೈ ಹಿಡಿಯಿತು. ಇದೀಗ 20ಕ್ಕೂ ಹೆಚ್ಚು ಸಹ ವಿತರಕರನ್ನು ಹೊಂದಿರುವ ಅಕ್ಷಯ್, ಚಂದಾದಾರರಿಗೆ ಎಸ್​ಎಂಎಸ್ ಮೂಲಕ ಬಿಲ್ ಕಳಿಸಿ ಆನ್​ಲೈನ್​ನಲ್ಲೇ ಬಿಲ್ ಪಾವತಿಸುವ ವ್ಯವಸ್ಥೆ ಮಾಡಿರುವುದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಪತ್ರಿಕಾ ಏಜೆನ್ಸಿ ನನಗೆ ಬದುಕು ರೂಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಸಣ್ಣ ವಿತರಕನಾಗಿದ್ದ ನನ್ನನ್ನು ಸರ್ಕಾರಕ್ಕೆ ತೆರಿಗೆ ಪಾವತಿಸುವ ಮಟ್ಟಕ್ಕೆ ‘ವಿಜಯವಾಣಿ’ ಬೆಳೆಸಿದೆ ಎನ್ನುತ್ತಾರೆ ಅಕ್ಷಯ್ ಕುಮಾರ್.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − one =
Remember me
