ಬೆಂಗಳೂರು:ಪ್ರತಿ ಚುನಾವಣೆಯಲ್ಲೂ ಫಲಿತಾಂಶ ಹೀಗೇ ಇರಲಿದೆ ಎಂದು ಒಂದಷ್ಟು ಮಂದಿ ಭವಿಷ್ಯ ನುಡಿದು ಬಿಡುತ್ತಾರೆ. ಆದರೆ ಎಷ್ಟೋ ಸಲ ಅಂಥ ಭವಿಷ್ಯಗಳು ಸುಳ್ಳಾಗಿ ತಮಾಷೆಗೀಡಾಗಿ ಬಿಡುತ್ತವೆ. ಆದರೆ ಇಲ್ಲೊಂದು ತಮಾಷೆಯೇ ನಿಜವಾಗಿ ಬಿಟ್ಟಿದೆ.
ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಂಬ ಶ್ವಾನಭವಿಷ್ಯವೊಂದು ಕಳೆದ ಚುನಾವಣೆ ಸಂದರ್ಭದಲ್ಲಿ ಗಮನ ಸೆಳೆದಿತ್ತು. ಮಂಡ್ಯ ಜಿಲ್ಲೆಯ ಅಶೋಕನಗರದಲ್ಲಿನ ಗೋಪಿ ಎಂಬವರು ಸಾಕಿದ್ದ ನಾಯಿ ಫೋಟೋ ಆರಿಸುವ ಮೂಲಕ ಮುಂದಿನ ಸಿಎಂ ಎಚ್​ಡಿಕೆ ಎಂದು ಸೂಚಿಸಿದ್ದನ್ನು ಕೆಲವರು ಆ ಸಂದರ್ಭದಲ್ಲಿ ತಮಾಷೆಯಾಗಿ ಕಂಡಿದ್ದು, ಕೊನೆಗೂ ಅದು ತಮಾಷೆಗೀಡಾಯ್ತು.
ಇದನ್ನೂ ಓದಿ:ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು?; ಇಲ್ಲಿದೆ ಶ್ವಾನಭವಿಷ್ಯ!
ಆದರೆ ಹನಿಗವಿ ಎಚ್.ಡುಂಡಿರಾಜ್ ಅವರು ತಮಾಷೆಗೆಂದು ಬರೆದಿದ್ದ ಹನಿಗವನದಂತೆ ಮುಂದಿನ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ‘ಒಂದು ವರ್ಷದ ಹಿಂದೆ ತಮಾಷೆಗೆಂದು ಬರೆದದ್ದು ಇಂದು ನಿಜವಾಗಿದೆ’ ಎಂದು ಡುಂಡಿರಾಜರೇ ತಮ್ಮ ಹನಿಗವನವನ್ನು ಹಂಚಿಕೊಂಡಿದ್ದಾರೆ.
ಒಂದು ವರ್ಷದ ಹಿಂದೆ ತಮಾಷೆಗೆಂದು ಬರೆದದ್ದು ಇಂದು ನಿಜವಾಗಿದೆ 😀pic.twitter.com/eqvfLTc0wQ
— Dundiraj H (@dundiraj_h)June 4, 2023

ತಂದೆ ಹೋದ ಮೇಲೆ ಸೊರಬ ಜನರು ನಮ್ಮ ಕೈಬಿಟ್ಟರಾ ಅನಿಸಿತ್ತು: ಭಾವುಕರಾದ ಗೀತಾ ಶಿವರಾಜಕುಮಾರ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 6 =
Remember me
