ವಿಟ್ಲ(ದಕ್ಷಿಣ ಕನ್ನಡ):ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ನಾಲ್ವರು ಪಿಎಫ್​ಐ ಸದಸ್ಯರನ್ನು ಹುಡುಕಿಕೊಟ್ಟವರಿಗೆ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಘೋಷಿಸಿದೆ.
ಬೆಳ್ಳಾರೆ ಬೂಡು ನಿವಾಸಿ ಮೊಹ್ಮದ್​ ಮುಸ್ತಫ ಎಸ್​. ಅಲಿಯಾಸ್​ ಮುಸ್ತಫ ಪೈಚಾರು ಹಾಗೂ ಮಡಿಕೇರಿ ಗದ್ದಿಗೆ ಮಸೀದಿ ಹಿಂಭಾಗದ ನಿವಾಸಿ ಎಂ.ಎಚ್​. ತುಫೈಲ್​ನನ್ನು ಹುಡುಕಿಕೊಟ್ಟವರಿಗೆ ತಲಾ 5 ಲಕ್ಷ ರೂ., ಸುಳ್ಯ ನಗರ ಕಲ್ಲುಮುಟ್ಟು ನಿವಾಸಿ ಉಮ್ಮರ್​ ಫಾರೂಕ್​ ಎಂ.ಆರ್​. ಅಲಿಯಾಸ್​ ಉಮ್ಮರ್​, ಬೆಳ್ಳಾರೆ ನಿವಾಸಿ ಅಬೂಬಕ್ಕರ್​ ಸಿದ್ದೀಕ್​ ಅಲಿಯಾಸ್​ ಪೈಂಟರ್​ ಸಿದ್ದೀಕ್​ ಅಲಿಯಾಸ್​ ಗುಜರಿ ಸಿದ್ದೀಕ್​ನನ್ನು ಹುಡುಕಿಕೊಟ್ಟವರಿಗೆ ತಲಾ 2 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.
ಇವರ ಮಾಹಿತಿ ತಿಳಿದವರುದೂ:080-29510900, 8904241100, ಇಮೇಲ್​[email protected],ಅಂಚೆ ವಿಳಾಸ:ಪೊಲೀಸ್​ ಅಧೀಕ್ಷಕರು, ರಾಷ್ಟ್ರೀಯ ತನಿಖಾ ದಳ (ಎನ್​ಐಎ), 8ನೇ ಮಹಡಿ ಸರ್​ ಎಂ.ವಿಶ್ವೇಶ್ವರಯ್ಯ ಕೇಂದ್ರೀಯ ಸದನ, ದೊಮ್ಲೂರು, ಬೆಂಗಳೂರು-560071ಗೆ ಮಾಹಿತಿ ನೀಡಬಹುದು.
ನನ್ನನ್ನು ಮುಗಿಸಲು ಮುಧೋಳ-ಬೆಂಗಳೂರಿಂದ ಗ್ಯಾಂಗ್​ ಬಂದಿತ್ತು: ಹೊಸ ಬಾಂಬ್​ ಸಿಡಿಸಿದ ಯತ್ನಾಳ್​

ಇನ್ನೇನು ತಾಳಿಕಟ್ಟಬೇಕು, ನಾಳೆಯೇ ಹನಿಮೂನ್​… ಅಷ್ಟರಲ್ಲಿ ಪೊಲೀಸರ ಅತಿಥಿಯಾದ ವರ! ನಿಟ್ಟುಸಿರು ಬಿಟ್ಟ ವಧುವಿನ ಕುಟುಂಬಸ್ಥರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 11 =
Remember me
