ಮಂಗಳೂರು:ಇತ್ತೀಚೆಗೆ ಆರೋಪಿ ಶಾರಿಕ್​ ಇಸ್ಲಾಮಿಕ್​ ಸ್ಟೇಟ್ಸ್​ ಮಾದರಿಯಲ್ಲೇ ಕುಕ್ಕರ್​ ಬಾಂಬ್​ ಹಿಡಿದು ನಿಂತ ಫೋಟೊ ಒಂದು ವೈರಲ್​ ಆಗಿತ್ತು. ಶಾರೀಕ್​ ಕೈಯಲ್ಲಿದ್ದ ಬಾಂಬ್​ಗೆ ಇಡೀ ಬಸ್​ ಸ್ಫೋಟ ಮಾಡುವ ಸಾಮರ್ಥ್ಯ ಇತ್ತು ಎನ್ನುವ ಮಾಹಿತಿಯೂ ಬಹಿರಂಗಗೊಂಡಿತ್ತು. ಇದೀಗ ಈ ಘಟನೆಯ ತನಿಖೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಳಿದಿದೆ.
ಕುಕ್ಕರ್ ಬಾಂಬ್ ಬ್ಲಾಸ್ಟ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರ ಶಾರೀಕ್​​ನನ್ನು ಬೆಂಬಲಿಸಿ ಇದೀಗ ಇಸ್ಲಾಮಿಕ್​​​ ರೆಸಿಸ್ಟೆನ್ಸ್​ ಕೌನ್ಸಿಲ್​ ಮಾಧ್ಯಮ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತ್ತು. ಅದರ ಜೊತೆಗೆ ಆತನ ಬಂಧನಕ್ಕೆ ಪ್ರತೀಕಾರವನ್ನೂ ತೆಗೆದುಕೊಳ್ಳುತ್ತೇವೆ ಎನ್ನುವ ರೀತಿಯ ಹೇಳಿಕೆಯನ್ನು ಇಸ್ಲಾಮಿಕ್​​​ ರೆಸಿಸ್ಟೆನ್ಸ್​ ಕೌನ್ಸಿಲ್​ ನೀಡಿತ್ತು.
ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಪ್ರಕರಣದ ಸಂಪೂರ್ಣ ತನಿಖೆ NIAಗೆ ಹಸ್ತಾಂತರ ಮಾಡಲಅಗುತ್ತಿದೆಯೇ ಎಂಬ ಅನುಮಾನ ಹುಟ್ಟಿಕೊಂಡಿದೆ. ಸದ್ಯ NIAಯ ದೆಹಲಿ ಬ್ರಾಂಚ್ ನಲ್ಲಿ ಪ್ರಕರಣ ದಾಖಲಾಗಿದ್ದು ಶಂಕಿತ ಉಗ್ರ ಶಾರೀಕ್​ ವಿರುದ್ಧ UAPA ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + eight =
Remember me
