ಉತ್ತರಕನ್ನಡ/ತುಮಕೂರು:ಭಟ್ಕಳದ ಇಬ್ಬರು ಸಹೋದರರು ಹಾಗೂ ತುಮಕೂರಿನ ಒಬ್ಬ ವಿದ್ಯಾರ್ಥಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಇಂದು ವಶಕ್ಕೆ ಪಡೆದಿದ್ದು, ಮೂವರನ್ನೂ ಇವತ್ತೇ ಬಿಟ್ಟು ಕಳುಹಿಸಿದೆ.
ಭಯೋತ್ಪಾದಕ ಸಂಘಟನೆ ಜತೆ ನಂಟಿರುವ ಶಂಕೆಯ ಮೇರೆಗೆ ಭಟ್ಕಳದ ಅಬ್ದುಲ್ ಮುಖ್ತದೀರ್ ಮತ್ತು ಆತನ ಸಹೋದರನನ್ನು ಇಂದು ಬೆಳಗಿನ ಜಾವ ಎನ್​ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಮತ್ತೊಂದೆಡೆ ತುಮಕೂರಿನ ಹೆಚ್ಎಂಎಸ್ ಯುನಾನಿ ಮೆಡಿಕಲ್ ಕಾಲೇಜ್ ವಿದ್ಯಾರ್ಥಿ ಸಾಜೀನ್ ಎಂಬಾತನನ್ನು ಎನ್​ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ದೆಹಲಿ ಹಾಗೂ ಬೆಂಗಳೂರಿನ ಎನ್‌ಐಎ ತಂಡ ಇವರನ್ನು ವಶಕ್ಕೆ ಪಡೆದಿತ್ತು.
ಬೆಳಗ್ಗೆಯಿಂದ ಈವರೆಗೆ ಇವರನ್ನು ಗೌಪ್ಯಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ಮುಖ್ತದೀರ್‌ನ ಮೊಬೈಲ್​ಫೋನ್​ ಡೇಟಾ ಹಾಗೂ ಇತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಹಾಗೆಯೇ ಸಾಜಿದ್​ಗೆ ಸೇರಿದ್ದ ಮೊಬೈಲ್​ಫೋನ್​ ಮತ್ತು ಲ್ಯಾಪ್​ಟಾಪ್ ವಶಕ್ಕೆ ಪಡೆದಿದ್ದರು. ಆದರೆ ಶಂಕೆಗೆ ಪೂರಕ ಅಂಶ ಸಿಗದ ಕಾರಣದಿಂದ ಮೂವರನ್ನೂ ಬಿಟ್ಟು ಕಳುಹಿಸಿದ್ದಾರೆ.
ಪ್ರೇಮಿಯೇ ಪ್ರೇಯಸಿಯ ರುಂಡ ಕಡಿದ ಪ್ರಕರಣ; ಕೊಲೆಗೆ ಸಹಕರಿಸಿದ್ದ ತಂದೆ, ಮದ್ವೆ ಮಾಡಿಸಿದ್ದ ತಾಯಿಯ ಬಂಧನ..

ಬುಲೆಟ್​​ನ ಹಿಂದೊಂದು ನಂಬರ್, ಮುಂದೊಂದು ನಂಬರ್; 29 ಸಾವಿರ ರೂ. ದಂಡ, ಬೈಕ್ ಸವಾರ ಅಂದರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
