
ಬೆಂಗಳೂರು:ವಾಲ್ಮೀಕಿ ನಿಗಮದಲ್ಲಿ ಆಗಿರುವ ಸ್ಥಿತಿ ಇನ್ನುಳಿದ ನಿಗಮಗಳಲ್ಲೂ ಆಗಿದೆಯೇ ಎಂಬ ಅನುಮಾನವಿದೆ. ಆದ್ದರಿಂದ ಎಸ್‌ಸಿ, ಎಸ್‌ಟಿ ಸಮುದಾಯಗಳ 13 ನಿಗಮಗಳಲ್ಲಿ ಲೆಕ್ಕ ಕೊಡಿ ಎಂದು ರಾಜ್ಯ ಬಿಜೆಪಿ ನಿಕಟಪೂರ್ವ ಕಾರ್ಯದರ್ಶಿ ಜಗದೀಶ ಹಿರೇಮನಿ ಆಗ್ರಹಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿ, ಲೆಕ್ಕ ಕೊಡಿ ಅಭಿಯಾನದ ಮೂಲಕ ಆಯ್ಕೆಯಾದ ಫಲಾನುಭವಿಗಳು ಎಷ್ಟು? ಎಷ್ಟು ಜನರಿಗೆ ಹಣ ಕೊಡಲಾಗಿದೆ ?, ಎಷ್ಟು ಹಣ ಉಳಿತಾಯ ಮಾಡಿದ್ದೀರಿ? ಎಷ್ಟು ಹಣ ಬೇರೆ ಇಲಾಖೆಗೆ ವರ್ಗಾವಣೆ ಆಗಿದೆ ಎಂದು ವಿವರ ಪಡೆಯಬೇಕು. ಗಂಗಾ ಕಲ್ಯಾಣ ಯೋಜನೆ, ಸಣ್ಣ ನೀರಾವರಿ ಯೋಜನೆಯ ವಿವರ ಕೊಡಬೇಕು ಎಂದು ಒತ್ತಾಯಿಸಿದರು.ಭೂ ಒಡೆತನ ಯೋಜನೆಯಡಿ ಒಂದಿಂಚೂ ಜಾಗವನ್ನು ಕೊಟ್ಟಿಲ್ಲ. ಹಿಂದಿನ ಸರಕಾರ ಅಗತ್ಯ ಉಳ್ಳವರಿಗೆ ಮಂಜೂರಾತಿ ನೀಡಿತ್ತು. ನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ 30 ಸಾವಿರ ಫಲಾನುಭವಿಗಳಿಗೆ ಬಿಡಿಗಾಸನ್ನೂ ನೀಡಿಲ್ಲ ಎಂದು ಟೀಕಿಸಿದರು.ಸ್ವಂತ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ತಾಂಡಾ ಅಭಿವೃದ್ಧಿ ನಿಗಮದಲ್ಲಿ ಇಬ್ಬರು ಅಧಿಕಾರಿಗಳನ್ನು ಸಚಿವರು ಅಮಾನತು ಮಾಡಿದ್ದಾರೆ. ವಿವಿಧ ನಿಗಮಗಳಿಂದ ಬಂದ ಹಣದ ಮಂಜೂರಾತಿ ಪತ್ರ ಹಿಡಿದುಕೊಂಡು ಹಣ ಬಂದಿಲ್ಲ ಎಂದು ತಿಳಿಸಲು ಫಲಾನುಭವಿಗಳು ನಿಗಮದ ಕಚೇರಿಗಳಿಗೆ ಅಲೆದಾಡುವಂತಾಗಿದೆ ಎಂದು ಆಕ್ಷೇಪಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
