ಬೆಂಗಳೂರು:ಯುನೈಟೆಡ್​ ಕಿಂಗ್​ಡಮ್​ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಿವಿಧ ಶುಲ್ಕಗಳೆಂದು ಹಣ ಪಡೆದು ಮೋಸ ಮಾಡುತ್ತಿದ್ದ ನೈಜೀರಿಯನ್ ದೇಶದ ಪ್ರಜೆಯನ್ನು ಬಂಧಿಸಲಾಗಿದೆ.
ಬಂಧಿತನನ್ನು ನೋಕೋಚಾ ಕಾಸ್ಮೀರ್ ಇಕೆಂಬಾ ಎಂದು ಗುರುತಿಸಲಾಗಿದೆ. ಯುಕೆ ದೇಶದ ಶೆಲ್ ಆಯಿಲ್ ಕಂಪನಿಯಲ್ಲಿ ಮ್ಯಾನೆಜ್‌ಮೆಂಟ್ ಹುದ್ದೆ, ಸ್ಟಾಪ್ ನರ್ಸ್, ಚೆಫ್ ಮುಂತಾದ ಹುದ್ದೆಗಳನ್ನು ಕೊಡಿಸುವುದಾಗಿ ಹೇಳಿ ನಂಬಿಸಿ ವಿವಿಧ ಶುಲ್ಕಗಳ ಹೆಸರಿನಲ್ಲಿ ಹಣ ಹಾಕಿಸಿಕೊಂಡು ಅಮಾಯಕ ಜನರನ್ನು ಈತ ವಂಚಿಸುತ್ತಿದ್ದ. ಇದೀಗ ಆರೋಪಿಯನ್ನು ಬೆಂಗಳೂರು ನಗರದ ಈಶಾನ್ಯ ವಿಭಾಗದ ಸಿ.ಇ.ಎನ್ ಪೊಲೀಸರು ಫೆ. 11 ರಂದು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಅಪಾರ್ಟ್​​ಮೆಂಟ್​​ನ 11ನೇ ಮಹಡಿಯಿಂದ ಕೆಳಕ್ಕೆ ಬಿದ್ದ ಯುವತಿ ಸ್ಥಳದಲ್ಲೇ ಸಾವು!
ಬೆಂಗಳೂರು ಮೂಲದ ಮಲ‌ರ್​ ಕೋಡಿ ಅವರಿಗೆ[email protected]ಎಂಬ ಈಮೇಲ್ ಐಡಿಯಿಂದ ಯುಕೆ ದೇಶದಲ್ಲಿ ಸ್ಟಾಫ್​ ನರ್ಸ್ ಕೆಲಸ ಕೊಡಿಸುವುದಾಗಿ ಹೇಳಿ ಸಂದೇಶ ಕಳುಹಿಸಿದ್ದ. ಇದನ್ನು ನಂಬಿದ ಮಲರ್​ ಕೋಡಿ, ಆರೋಪಿಯನ್ನು ಸಂಪರ್ಕಿಸಿದಾಗ ವಿವಿಧ ಶುಲ್ಕ ಹಾಗೂ ಕ್ಲಿಯರನ್ಸ್ ಫೀಜ್‌ಗಳೆಂದು ಹಂತ ಹಂತವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಒಟ್ಟು 3 ಲಕ್ಷ ರೂ. ಅಧಿಕ ಹಣವನ್ನು ಹಾಕಿಸಿಕೊಂಡು ಯಾವುದೇ ಕೆಲಸ ಕೊಡಿಸದೆ ವಂಚಿಸಿದ್ದಾನೆ.
ಈ ಬಗ್ಗೆ ಸಂತ್ರಸ್ತೆ ಮಲಾರ್​ ಕೋಡಿ ಅವರು ಈಶಾನ್ಯ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖಾಧಿಕಾರಿಗಳು ಪ್ರಕರಣದ ತನಿಖೆ ನಡೆಸಿ, ಆರೋಪಿ ನೋಕೊಚಾ ಕಾಶ್ಮೀರ್ ಇಕೆಂಬಾನನ್ನು ಬಂಧಿಸಿದ್ದಾರೆ. ಆತನ ಬಳಿ ಕೃತ್ಯಕ್ಕೆ ಬಳಸಿದ್ದ ಸಿಮ್ ಕಾರ್ಡಗಳು, 6 ಮೊಬೈಲ್ ಫೋನ್‌ಗಳು, 1 ಲ್ಯಾಪ್‌ಟಾಪ್, 2 ಡೆಬಿಟ್ ಕಾರ್ಡ್​ ಹಾಗೂ ಪಾಸ್​ಪೋರ್ಟ್​ ಮುಂತಾದವುಗಳನ್ನು ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಆಗಮನ ಹಿನ್ನೆಲೆ ವಿಐಎಸ್ಎಲ್ ಕಾರ್ಮಿಕ‌ ಮುಖಂಡರು ಪೊಲೀಸ್​ ವಶಕ್ಕೆ

ಆಂಟಿ ಎಂಬುದು ಇಂದು ಅಶ್ಲೀಲ ಪದವಾಗಿದೆ: ಆಂಟಿ ಟ್ರೆಂಡ್​ಗೆ ನಟಿ ಕಸ್ತೂರಿ ಖಡಕ್​ ತಿರುಗೇಟು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × 3 =
Remember me
