ಬೆಂಗಳೂರು:ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದುಕೊಂಡು ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ ನೈಜೀರಿಯನ್ ಪ್ರಜೆಯನ್ನು ಬಂಧಿಸಲಾಗಿದೆ.
ವಿವಿ ಪುರಂ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಈ ಸಂದರ್ಭ, ಬರೋಬ್ಬರಿ ಎರಡು ಕೋಟಿ ಮೌಲ್ಯದ ಒಂದು ಕೆ.ಜಿ ಎಮ್​ಡಿಎಂಎ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಅಂದಹಾಗೆ ಬಂಧಿತನಾದದ್ದು, ಮೋಸ್ಟ್ ವಾಂಟೆಡ್ ಆರೋಪಿ ನೈಜೀರಿಯನ್ ಜಾನ್ ಬಂಧಿತ ಆರೋಪಿ.
ಇದನ್ನೂ ಓದಿ:ಮಂಡ್ಯ ಜಿಲ್ಲೆಗೂ ಕಾಲಿಟ್ಟಿದೆ ಡ್ರಗ್ಸ್: ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಆತಂಕ
ಆರ್​ಟಿ ನಗರ ಠಾಣಾ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡು ಈತ ಖುದ್ದಾಗಿ ಡ್ರಗ್ಸ್ ತಯಾರಿ ಮಾಡುತ್ತಿದ್ದ. ಈತನಲ್ಲಿ ಪರಿಶುದ್ಧ ಕಚ್ಚಾವಸ್ತುಗಳು ಕೂಡ ಇದ್ದು, ಅವುಗಳನ್ನು ಬಳಸಿ ಎಮ್​ಡಿಎಂಎ ಪೌಡರ್ ತಯಾರಿ ಮಾಡುತ್ತಿದ್ದ. ಈ ಕುರಿತಾಗಿ ಖಚಿತ ಮಾಹಿತಿ ಆಧರಿಸಿ ಮನೆ ಮೇಲೆ ವಿವಿ ಪುರಂ ಪೊಲೀಸರು ದಾಳಿ ನಡೆಸಿದ್ದರು.
ಇದನ್ನೂ ಓದಿ:ಎಚ್ಚರ! ಮಂಗಳೂರಿನಲ್ಲಿ ನಡೆಯುತ್ತಿದೆ ಚಾಕಲೇಟ್ ರೂಪದಲ್ಲಿ ಡ್ರಗ್ಸ್ ಮಾರಾಟ…
ಈ ಜಾನ್, ಎಂತಹ ಕಿಲಾಡಿ ಎಂದರೆ, ಸಿಲಿಂಡರ್ ಕೆಳಗೆ ಡ್ರಗ್ಸ್ ಬಚ್ಚಿಟ್ಟಿದ್ದ. ಪೊಲೀಸರು ದಾಳಿ ಮಾಡುತ್ತಿದ್ದಂತೆಯೇ ಈತ ಕೆಲ ಡ್ರಗ್ಸ್ ಪ್ಯಾಕೆಟ್​ಗಳನ್ನು ಬಾತ್ರೂಂನಲ್ಲಿ ಹಾಕಿ ಫ್ಲಷ್ ಬೇರೆ ಮಾಡಿದ್ದ!
ಆದರೂ ಕಿಟಕಿ ಮೂಲಕ ಜಂಪ್ ಮಾಡಿ ಪೈಪ್ ಮೂಲಕ ಮಹಡಿಯಿಂದ ಇಳಿದು ಎಸ್ಕೇಪ್ ಆಗಲು ಯತ್ನ ಮಾಡಿದ್ದಾನೆ. ಈ ವೇಳೆ ಸಿನಿಮೀಯ ರೀತಿಯಲ್ಲಿ ಪೊಲೀಸರು ಹಿಂಬಾಲಿಸಿ ಆರೋಪಿ ಜಾನ್​ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಶಾಶ್ವತ ಕಾರ್ಯವಿಧಾನದಿಂದ ಡ್ರಗ್ಸ್ ಮುಕ್ತ ದಕ್ಷಿಣ ಕನ್ನಡ ಅಭಿಯಾನಕ್ಕೆ ಚಾಲನೆ ನೀಡಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್
ಬಂಧನದ ಬಳಿಕ ಈತ ಅಕ್ರಮವಾಗಿ ನಗರದಲ್ಲಿ ನೆಲೆಸಿ ಡ್ರಗ್ಸ್ ತಯಾರು ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ. ಈತ ಗೋವಾ ಹಾಗೂ ಮಹಾರಾಷ್ಟ್ರ ಕಡೆಯಿಂದ ಕಚ್ಚಾ ವಸ್ತು ತರಿಸಿ ಎಂಡಿಎಂಎ ತಯಾರು ಮಾಡುತ್ತಿದ್ದ. ಎಂಡಿಎಂಎ ತಯಾರು ಮಾಡಿ ಹೋಲ್​ಸೇಲ್​ನಲ್ಲಿ ಮಾರಾಟ ಮಾಡುತ್ತಿದ್ದ.
ಇದನ್ನೂ ಓದಿ:ಅಮೆರಿಕದ ಶ್ವೇತಭವನದಲ್ಲಿ ಸಿಕ್ಕ ಬಿಳಿ ಪೌಡರ್​ ಡ್ರಗ್ಸ್ ಎಂದು ದೃಢ!
ಸದ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ವಿವಿ ಪುರಂ ಪೊಲೀಸರು, ಆರೋಪಿಗೆ ಸೆಲಬ್ರೆಟೀಸ್ ಅಥವಾ ಪಾರ್ಟಿಗಳ ಸಂಪರ್ಕವಿದ್ಯಾ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
