| ಡಿಪಿಎನ್ ಶ್ರೇಷ್ಠಿಚಿತ್ರದುರ್ಗ
ಕೋವಿಡ್ ರೂಪಾಂತರಿ ವೈರಾಣು ಭೀತಿಯ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಜಾರಿಯಾಗುತ್ತಿರುವುದು ಗ್ರಾಮ ಪಂಚಾಯಿತಿ 2ನೇ ಹಂತದ ಚುನಾವಣೆ ಕಲಿಗಳಿಗೆ ಆತಂಕವನ್ನು ತಂದೊಡ್ಡಿದೆ. ಮೊದಲ ಹಂತದಲ್ಲಿ ಅಭ್ಯರ್ಥಿಗಳು ಮತದಾರರ ಮನವೊಲಿಸಲು ನಾನಾ ಕಸರತ್ತು ನಡೆಸಿದ್ದರು. ರಾತ್ರಿ ವೇಳೆ ಹಲವೆಡೆ ಗುಂಡು- ತುಂಡಿನ ಪಾರ್ಟಿ ಕೂಡ ಭರ್ಜರಿಯಾಗಿ ನಡೆದಿತ್ತು. ಮತದಾನದ ಹಿಂದಿನ 2-3 ದಿನಗಳ ಕಾಲ ಹಲವು ಅಭ್ಯರ್ಥಿಗಳು, ಅವರ ಬೆಂಬಲಿಗರು ನಿದ್ರೆಗೆಟ್ಟು ಗೆಲುವಿಗೆ ಅಗತ್ಯ ತಂತ್ರಗಾರಿಕೆಗಳ ಅನುಷ್ಠಾನಕ್ಕೆ ಶ್ರಮಿಸಿದ್ದರು. ಆ ಅವಕಾಶ ಎರಡನೇ ಹಂತದ ಅಭ್ಯರ್ಥಿಗಳಿಗೆ ಇಲ್ಲದಂತಾಗಿದೆ.
ಸರ್ಕಾರದ ಅಧಿಕೃತ ಮಾಹಿತಿಗೆ ಕಾಯುತ್ತಿದ್ದೇವೆ. ಕರ್ಫ್ಯೂ ಜಾರಿಗೆ ಸಜ್ಜಾಗಿದ್ದೇವೆ. ನಿಗದಿತ ಸಮಯದ ಒಂದು ಗಂಟೆ ಮೊದಲೇ ನಮ್ಮವರು ಸೈರನ್​ನೊಂದಿಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ನಿಟ್ಟಿನಲ್ಲಿ ರೌಂಡ್ಸ್ ನಡೆಸಲಿದ್ದಾರೆ. ಹಣ ಇತ್ಯಾದಿ ಹಂಚಲು ಮುಂದಾಗುವಂಥವರು ಈಗ ಪಕ್ಕಾ ಸಿಕ್ಕಿಬೀಳುತ್ತಾರೆ.ಜಿ.ರಾಧಿಕಾ,ಎಸ್ಪಿ, ಚಿತ್ರದುರ್ಗ.—-ಕೆಎಸ್​ಆರ್​ಟಿಸಿ ಬಸ್ಸುಗಳ ರಾತ್ರಿ ವೇಳೆಯ ಸೇವೆಯಲ್ಲಿ ವ್ಯತ್ಯಯವಾಗುವುದಿಲ್ಲ. ನಿಗದಿತ ಸಮಯದೊಳಗೆ ಪ್ರಯಾಣಿಕರು ನಿಲ್ದಾಣ ವನ್ನು ಸೇರಬೇಕು. ತಡರಾತ್ರಿ ಬಂದಿಳಿಯುವ ಪ್ರಯಾಣಿಕರಿಗಾಗಿ ಸರ್ಕಾರ ಆಟೋ, ಟ್ಯಾಕ್ಸಿಗಳಿಗೆ ಅನುಮತಿ ಕೊಟ್ಟಿದೆ.ವಿಜಯಕುಮಾರ್,ವಿಭಾಗೀಯ ನಿಯಂತ್ರಕರು, ಕೆಎಸ್​ಆರ್​ಟಿಸಿ ಚಿತ್ರದುರ್ಗ.
ರಾಜ್ಯದ 5,762 ಗ್ರಾಪಂಗಳ 92,121 ಸ್ಥಾನಗಳಿಗೆ ಡಿ.22 ಹಾಗೂ ಡಿ.27ರಂದು ಮತದಾನ. ಡಿ.30ರಂದು ಎಣಿಕೆ ನಿಗದಿಯಾಗಿತ್ತು. ಈಗಾಗಲೇ 117 ತಾಲೂಕು, 3019 ಗ್ರಾಪಂಗಳ 43238 ಸ್ಥಾನಗಳಿಗೆ ಮತದಾನ ನಡೆದಿದೆ. ಉಳಿದ ಗ್ರಾಪಂಗಳ ಸ್ಥಾನಗಳ ಸ್ಪರ್ಧಿಗಳಿಗೆ ಉಳಿದಿದ್ದ ಮೂರು ದಿನಗಳು ಪ್ರೖೆಮ್ ಟೈಮ್ ಎನಿಸಿತ್ತು. ಈಗ ರಾತ್ರಿ ಕರ್ಪ್ಯೂ, ಗೆಲುವಿನ ಸೋಲಿನ ಲೆಕ್ಕಾಚಾರವನ್ನೇ ಉಲ್ಟಾ ಮಾಡಬಹುದೆಂಬ ಆತಂಕ ಹಲವರದು. ಬಿಂದಾಸ್ ಆಗಿ ಖರ್ಚು ಮಾಡುತ್ತಿದ್ದವರಿಗೆ ಬ್ರೇಕ್ ಬಿತ್ತೆಂಬುದು ಕೆಲ ಸ್ಪರ್ಧಿಗಳ ಸಮಾಧಾನ. ಮಾದರಿ ನೀತಿ ಸಂಹಿತೆ ಖಡಕ್ ಅನುಷ್ಠಾನಕ್ಕೆ ಇದು ನೆರವಾಗಲಿದೆ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು.
ತೋಟ, ತುಡಿಕೆ, ಹೊಸ ಲೇಔಟ್​ಗಳಲ್ಲಿ ನಡೆಯಬೇಕಿದ್ದ ಭರ್ಜರಿ ಪಾರ್ಟಿಗಳಿಗೂ ಕಡಿವಾಣ ಬೀಳುವಂತಾಗಿದ್ದು, ಮೋಜು, ಮಸ್ತಿ ನಿರೀಕ್ಷೆಯಲ್ಲಿದ್ದವರಿಗೆ ಈಗ ಪೊಲೀಸ್ ಸೈರನ್ ಸದ್ದು ಭಯ ತರಲಿದೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಡಿಟಿಎಚ್​ ಪರಿಷ್ಕೃತ ಮಾರ್ಗದರ್ಶಿಗೆ ಸಚಿವ ಸಂಪುಟ ಒಪ್ಪಿಗೆ – ಪರವಾನಗಿ 20 ವರ್ಷಕ್ಕೆ, ಎಫ್​ಡಿಐ 100%

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
