ಬೆಂಗಳೂರು:ಕರೊನಾ 2ನೇ ಅಲೆಯು ಜನವರಿ, ಫೆಬ್ರವರಿ ಮಧ್ಯ ಪ್ರವೇಶಿಸುವ ಸಾಧ್ಯತೆಗಳಿದ್ದರೂ ರಾಜ್ಯದಲ್ಲಿ ಮತ್ತೆ ರಾತ್ರಿ ಕರ್ಫ್ಯೂ ಜಾರಿ ಮಾಡುವುದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಶುಕ್ರವಾರ ಸ್ಪಷ್ಟಪಡಿಸಿ, ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ವಿಧಾನ ಸೌಧ ಸಮ್ಮೇಳನ ಸಭಾಂಗಣದಲ್ಲಿ ತಾಂತ್ರಿಕ ತಜ್ಞರ ಸಲಹಾ ಸಮಿತಿ ಸಭೆ ಬಳಿಕ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೆ ರಾತ್ರಿ ಕರ್ಫ್ಯೂ ಅಗತ್ಯವಿಲ್ಲ. ಅಂತಹ ಸ್ಥಿತಿ ಬಂದಿಲ್ಲ. ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸಬೇಕೆಂಬ ತಜ್ಞರ ಸಲಹಾ ಸಮಿತಿ ವರದಿಯನ್ನು‌ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ಮುಖ್ಯಮಂತ್ರಿ ಜತೆಗೆ ಚರ್ಚೆ ನಡೆಸಿ ನಿರ್ಧರಿಸಲಾಗುವುದು. ಡಿ.20 ರಿಂದ ಜ.2ರವರೆಗೆ ನಿರ್ಣಾಯಕ ಘಟ್ಟವೆಂದು ವರದಿ ತಿಳಿಸಿದೆ. ಕಠಿಣ ಕ್ರಮಗಳಿಗೆ ಸಲಹೆ ನೀಡಿದೆಯೇ ಹೊರತು ರಾತ್ರಿ ಕರ್ಫ್ಯೂ ಜಾರಿ ಬಗ್ಗೆ ಪ್ರಸ್ತಾಪಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ತಂದೆಯ ಆಸ್ತಿ ಹೇಗೆ ಬೇಕಾದರೂ ಹಂಚಬಹುದೆ? ವಿಲ್​ ಮಾಡದಿದ್ದರೆ ಏನಾಗುತ್ತದೆ?
ಜನರು ಗುಂಪು ಗುಂಪಾಗಿ ಸೇರುವುದನ್ನು ನಿಲ್ಲಿಸಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜನ ಸೇರುವುದನ್ನು ನಿಯಂತ್ರಿಸಿ ಮದುವೆ ಸಮಾರಂಭದಲ್ಲಿ 100 ಜನರ ಮೀರಬಾರದು. ರಾಜಕೀಯ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮಗಳಲ್ಲಿ 200 ಜನರಿಗೂ ಹೆಚ್ಚಿರಬಾರದು. ಅಂತ್ಯಕ್ರಿಯೆ ಸಂದರ್ಭದಲ್ಲಿ 50 ಜನರಿಗಿಂತ ಹೆಚ್ಚು ಇರಬಾರದು ಎಂಬ ಅಂಶವು ತಜ್ಞರ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಮುಖಭಂಗ; ಪ್ರಮುಖ ಕ್ಷೇತ್ರಗಳನ್ನೇ ಕಳೆದುಕೊಂಡ ಪಕ್ಷ
ಸಮಿತಿ ವರದಿಯ ಪೂರ್ಣ ಅಧ್ಯಯನ, ಉನ್ನತಮಟ್ಟದ ಅಧಿಕಾರಿಗಳ ಜತೆ ಚರ್ಚಿಸಿದ ಬಳಿಕ ಸದ್ಯದಲ್ಲೇ ಸಿಎಂ ಜತೆಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಡಾ.ಸುಧಾಕರ್ ತಿಳಿಸಿದರು. ಕರೊನಾ 2ನೇ ಅಲೆ ಜನವರಿ-ಫೆಬ್ರವರಿ ಮಧ್ಯೆ ಅಪ್ಪಳಿಸುವ ಸಾಧ್ಯತೆಗಳ ಬಗ್ಗೆ ತಜ್ಞರು ತಿಳಿಸಿದ್ದಾರೆ ಎಂದರು.
ರಕ್ತದ ಮಡುವಿನಲ್ಲಿ ಬಿದ್ದು ಅಂಗಲಾಚುತ್ತಿದ್ದ ಮಂಜನ ಪ್ರಾಣ ಜನರ ಕಣ್ಣೆದುರೇ ಹೋಯ್ತು…
ಕಾಡಿನ ಗುಡಿಸಲಿನಲ್ಲಿ ಕೂಡಿ 14 ದಿನ ಅತ್ಯಾಚಾರ ಮಾಡಿದ! ಕಾಮುಕನಿಂದ ಬಚಾವಾಗಿದ್ದೇ ಒಂದು ರೋಚಕ ಕಥೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + twenty =
Remember me
