ಬೆಂಗಳೂರು:ಇದು ಮಲೈ ಮಹದೇಶ್ವರ ದೇವಸ್ಥಾನದ ಭಕ್ತರ ಗಮನಕ್ಕೆ. ಏಕೆಂದರೆ ಈ ದೇವಳದಲ್ಲಿ ಸದ್ಯಕ್ಕೆ ರಾತ್ರಿಯ ವೇಳೆ ತಂಗುವ ವ್ಯವಸ್ಥೆಯನ್ನು ರದ್ದು ಪಡಿಸಲಾಗಿದೆ. ಹೀಗಾಗಿ ಮಹಾಶಿವರಾತ್ರಿಯ ಸಂದರ್ಭದಲ್ಲಿ ದೇವಸ್ಥಾನಕ್ಕೆ ತೆರಳುವವರು ಸೂಕ್ತ ವ್ಯವಸ್ಥೆ ಮಾಡಿಕೊಂಡೇ ಹೊರಡುವುದು ಒಳಿತು.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಹದೇಶ್ವರ ಬೆಟ್ಟದ ಶ್ರೀ ಮಲೈ ಮಹದೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಫೆ. 28ರಿಂದ ಮಾರ್ಚ್​ 2ರವರೆಗೆ ವಿಶೇಷ ಪೂಜೆ ಉತ್ಸವಗಳು ನಡೆಯಲಿವೆ.
ಫೆ. 28ರಂದು ಮಹಾಶಿವರಾತ್ರಿ ಪೂಜಾರಂಭ, ಮಾ. 1ರಂದು ಮಹಾಶಿವರಾತ್ರಿ, ಮಾ. 2ರಂದು ಅಮಾವಾಸ್ಯೆ ವಿಶೇಷ ಸೇವೆ ಉತ್ಸವ, ಮಾ. 3ರಂದು ರಥೋತ್ಸವ ನಡೆಯಲಿದೆ. ಆದರೆ ನಾಳೆ ರಾತ್ರಿಯಿಂದಲೇ ಅಂದರೆ ಫೆ. 27ರಿಂದ ಮಾ. 3ರವರೆಗೆ ದೇವಸ್ಥಾನದಲ್ಲಿ ರಾತ್ರಿ ತಂಗುವಿಕೆಯನ್ನು ಪೂರ್ಣವಾಗಿ ನಿಷೇಧಿಸಿರುವುದಾಗಿ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಪೇದೆಯನ್ನು ನಂಬಿ ಗಂಡನ ಬಿಟ್ಟ ಮಹಿಳೆಯ ಬಾಳೇ ಈಗ ಗೋಳು: ಕಾನ್​ಸ್ಟೆಬಲ್​ ಕಿತಾಪತಿ ಒಂದೆರಡಲ್ಲ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 7 =
Remember me
