ಮಂಡ್ಯ:ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ, ನಟ ನಿಖಿಲ್ ಕುಮಾರಸ್ವಾಮಿ ಇಂದು ನಟಿ ಹಾಗೂ ಸಂಸದೆ ಸುಮಲತಾ ಅವರ ‘ಸ್ವಾಭಿಮಾನ’ವನ್ನು ಕೆಣಕಿದ್ದಾರೆ. ಮಾತ್ರವಲ್ಲ, ಕಳೆದ ಲೋಕಸಭಾ ಚುನಾವಣೆಯಲ್ಲಿ ತಮಗಾದ ಸೋಲನ್ನೂ ಸ್ಮರಿಸಿಕೊಂಡಿದ್ದಾರೆ.
ಇಂದು ಪಾಂಡವಪುರದಲ್ಲಿ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ ನಿಖಿಲ್ ಕುಮಾರಸ್ವಾಮಿ, 2019ರ ಲೋಕಸಭೆಗೆ ಆಕಸ್ಮಿಕವಾಗಿ ಸ್ಪರ್ಧಿಸಿದೆ, ಪಕ್ಷದ ಶಾಸಕರ ಒತ್ತಾಯದಿಂದ ಸ್ಪರ್ಧೆ ಮಾಡಿದೆ. ಪುಟ್ಟರಾಜ ಅವರು ಸಂಸದ ಸ್ಥಾನಕ್ಕೆ ಸ್ಪರ್ಧಿಸಿದ್ದಾಗ 5.25 ಲಕ್ಷ ಮತ ನೀಡಿದ್ದ ಜನ, ನಾನು ಲೋಕಸಭಾ ಚುನಾವಣೆಗೆ ನಿಂತಿದ್ದಾಗ ಅದಕ್ಕಿಂತಲೂ ಹೆಚ್ಚಿನ ಮತ ನೀಡಿದ್ದರು. ಆದರೆ ರಾಜಕೀಯ ತಂತ್ರದಿಂದಾಗಿ ನಾನು ಸೋತೆ, ರೈತ ಸಂಘ ಎಲ್ಲ ಸೇರಿ ಸಂಚು‌ ರೂಪಿಸಿ ನನ್ನ ಸೋಲಿಗೆ ಕಾರಣವಾದರು ಎಂದು ಅಂದು ಸುಮಲತಾ ಎದುರಿನ ತಮ್ಮ ಸೋಲನ್ನು ಸ್ಮರಿಸಿಕೊಂಡಿದ್ದಾರೆ.
2019ರ ಸೋಲಿಗೆ ಉತ್ತರವನ್ನ ನೀವು ಕೊಡಬೇಕು ಎಂದು ಜನರಲ್ಲಿ ಮನವಿ ಮಾಡಿಕೊಂಡ ನಿಖಿಲ್, 2023ರಲ್ಲಿ ಏಳು ಶಾಸಕರನ್ನು ಗೆಲ್ಲಿಸಿ ಕೊಡಿ. ಆಗ ನಾನೇ ಲೋಕಸಭೆಯಲ್ಲಿ ಗೆದ್ದೆ ಎಂದು ಖುಷಿ ಪಡುತ್ತೇನೆ ಎಂದು ಹೇಳಿದರು.
ಮಳವಳ್ಳಿಯಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಪ್ರಸ್ತಾಪಿಸಿದ ನಿಖಿಲ್, ಸ್ವಾಭಿಮಾನಿ ಸಂಸದೆ ಎಂದು ಹೇಳಿಕೊಳ್ಳುವ ಸುಮಲತಾ ಅವರನ್ನು ಕೆಣಕಿದ್ದಾರೆ. ಏನೂ ಅರಿಯದ ಪುಟ್ಟ ಬಾಲಕಿ ಮೇಲೆ ಅತ್ಯಾಚಾರವಾಯಿತು. ಯಾವ ಸಚಿವರೂ ತಕ್ಷಣ ತೆರಳಿ ಸಾಂತ್ವನ ಹೇಳಿರಲಿಲ್ಲ. ಮಂಡ್ಯ ಸಂಸದರು ಒಂದು ವಾರು ಬಿಟ್ಟು ಬಂದಿದ್ದರು ಎಂದ ನಿಖಿಲ್​, ಇದೇನಾ ನಿಮ್ಮ ಸ್ವಾಭಿಮಾನ? ಎಂದು ಸುಮಲತಾ ಅವರನ್ನು ಉದ್ದೇಶಿಸಿ ಪ್ರಶ್ನೆ ಮಾಡಿದ್ದಾರೆ.
ಶಾಲಾ ಬಸ್​ನ ಪ್ರಥಮ ಚಿಕಿತ್ಸಾ ಡಬ್ಬದಲ್ಲಿ ಕಾಂಡಂ​, ಅವಧಿ ಮುಗಿದ ಔಷಧ, ಪೇನ್​ ಕಿಲ್ಲರ್ಸ್​ ಪತ್ತೆ!
ಡಾ.ರಾಜ್​​ ಕುಟುಂಬದ ವಿರುದ್ಧ ಹಗುರ ಮಾತು ಆರೋಪ; ಪುನೀತ್ ಕೆರೆಹಳ್ಳಿ ಮೇಲೆ ದಾಳಿ, ಅಂಗಿ ಹರಿದು ಹೊಯ್​ಕೈ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
