ರಾಮನಗರ:ಮುಂದಿನ ವಿಧಾನಸಭೆ ಚುನಾವಣೆಯಲ್ಲಿ  ರಾಮನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಹೆಸರನ್ನು ಶಾಸಕಿ ಅನಿತಾ ಕುಮಾರಸ್ವಾಮಿ ಘೋಷಿಸಿದರು.
ರಾಮನಗರದಲ್ಲಿ ಶನಿವಾರ ಪಂಚರತ್ನ ರಥಯಾತ್ರೆಯಲ್ಲಿ ಮಾತನಾಡಿದ ಅನಿತಾ, ನಮ್ಮ ಮಾವನವರಿಗೆ, ನನ್ನ ಪತಿ ಅವರಿಗೆ, ನನಗೆ ಕೊಟ್ಟ ಬೆಂಬಲವನ್ನು ನೀವುಗಳು ನನ್ನ ಮಗನಿಗೂ ಕೊಡಬೇಕು ಎಂದರು ಮನವಿ ಮಾಡಿದರು. ದೇವೇಗೌಡರ ಕುಟುಂಬ ಸದಾ ನಿಮ್ಮ ಸೇವೆ ಮಾಡಲು ಸಿದ್ದವಿದೆ. ಕೆಲವರು ಅಪಪ್ರಚಾರ ಮಾಡುತಿದ್ದರು. ಅದೆಲ್ಲಕ್ಕೂ ತೆರೆ ಎಳೆಯಬೇಕು ಎಂದು ನಿರ್ಧರಿಸಿರುವೆ ಎನ್ನುತ್ತಲೇ ರಾಮನಗರಕ್ಕೆ ನಿಖಿಲ್​ ಅಭ್ಯರ್ಥಿ ಎಂದರು. ನಿಖಿಲ್ ಹೆಸರು ಘೋಷಣೆ ಆಗುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಘೋರ ಮೊಳಗಿಸಿದರು.
ಬಳಿಕ ಮಾತನಾಡಿದ ನಿಖಿಲ್, ಅನಿತಾ ಕುಮಾರಸ್ವಾಮಿ ಅವರು ಇದ್ದಕ್ಕಿದ್ದಂಗೆ ಘೋಷಣೆ ಮಾಡಿದ್ದಾರೆ. ಅವರು ಘೋಷಣೆ ಮಾಡ್ತಾರೆ ಅಂತ ನನ್ನ‌ ಮನಸ್ಸಲ್ಲೂ ಅಂದು ಕೊಂಡಿರಲಿಲ್ಲ. ಯುವ ಘಟಕದ ರಾಜ್ಯಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಹಿಂದೆ ದೇವೇಗೌಡರ ಪರವಾಗಿ ನಿಂತ್ರಿ, ನಂತರ ಎರಡು ಬಾರಿ ಕುಮಾರಸ್ವಾಮಿ ಪರ ನಿಂತ್ರಿ. ಕುಮಾರಣ್ಣನ್ನ ರಾಜಕೀಯವಾಗಿ ಬೆಳೆಸಿದ್ದೀರಿ. ಬಹಳ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಇವತ್ತಿಗೂ ನನ್ನ ಅಭಿಪ್ರಾಯದಲ್ಲಿ ರಾಮನಗರ ಸೂಕ್ತ ಅಭ್ಯರ್ಥಿ ಅಂದ್ರೆ ಅದು ಕುಮಾರಣ್ಣ. ನಮ್ಮ ತಂದೆ ಜನರ ಪರವಾಗಿ ಧ್ವನಿ ಎತ್ತಿ ಕೆಲಸ ಮಾಡಿದ್ದಾರೆ… ಎನ್ನುತ್ತಲೇ ಗದ್ಗದಿತರಾದರು.
ರಾಮನಗರದಲ್ಲಿ ಅದ್ದೂರಿ ಶ್ರೀನಿವಾಸ ಕಲ್ಯಾಣೋತ್ಸವ: ತಿರುಮಲದ ಪ್ರತಿಬಿಂಬದಂತೆ ಕಂಗೊಳಿಸಿದ ಕ್ರೀಡಾಂಗಣ, ಭಕ್ತಿಭಾವದಲ್ಲಿ ಮಿಂದೆದ್ದ ಸಹಸ್ರಾರು ಮಂದಿ

ದಾವಣಗೆರೆ ಮೂಲದ ನವದಂಪತಿ ಬಾಳಲ್ಲಿ ದುರಂತ: ಸ್ಟ್ರೆಚರ್​​ನಲ್ಲಿ ಮಲಗಿಕೊಂಡೇ ಶವಗಾರಕ್ಕೆ ಬಂದು ಗಂಡನ ಮುಖ ಸವರಿದ ಪತ್ನಿ… ಮನಕಲಕುತ್ತೆ ಈ ಸ್ಟೋರಿ

ನಿಮ್ಮನ್ನು ನೋಡ್ಬೇಕು ಬನ್ನಿ ಎಂದು ಗೋಗರೆದರೂ ಹಾಸ್ಟೆಲ್​ಗೆ ಬಾರದ ಅಪ್ಪ-ಅಮ್ಮ… ಬೆಂಗಳೂರಲ್ಲಿ ಬಿಇ ವಿದ್ಯಾರ್ಥಿ ದುರಂತ ಅಂತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 13 =
Remember me
