ಮಂಡ್ಯ:ನಾನು ಬರ್ತೀನಿ ಎಂದು ಮೃತ ರೈತನ ಮನೆಗೆ ಸಚಿವ ನಾರಾಯಣ ಗೌಡ ಭೇಟಿ ಕೊಟ್ರಲ್ಲ ಅದು ಸಂತೋಷದ ವಿಚಾರ. ನಾನು ಬಂದಿಲ್ಲ‌ ಅಂದ್ರೆ ಸಚಿವರು ಬರುತ್ತಿರಲಿಲ್ಲವೇನೋ… ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಕೆ.ಆರ್​.ಪೇಟೆ ತಾಲೂಕಿನ ಚೌಡೇನಹಳ್ಳಿ ಗ್ರಾಮದ ರೈತ ನಂಜೇಗೌಡ ಸಾಲಬಾಧೆ ತಾಳಲಾರದೆ ವಿಷಸೇವಿಸಿ ಶುಕ್ರವಾರ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮೃತನ ಮನೆಗೆ ಭಾನುವಾರ ಭೇಟಿ ನೀಡಿದ ನಿಖಿಲ್​, ಸಾಂತ್ವನ ಹೇಳಿದರು. ಮೃತನ ಮನೆಗೆ ಭಾನುವಾರ ಭೇಟಿ ನೀಡುವುದಾಗಿ ನಿಖಿಲ್​ ಶನಿವಾರವೇ ಕಾರ್ಯಕ್ರಮ ನಿಗದಿ ಮಾಡಿದ್ದರು. ಇಂದು ನಿಖಿಲ್​ ಆಗಮನಕ್ಕೂ ಮುನ್ನ ಸಚಿವ ನಾರಾಯಣಗೌಡ ದಿಢೀರ್ ಭೇಟಿ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ನಿಖಿಲ್, ನಾನು ಇಲ್ಲಿಗೆ ಬರದಿದ್ದರೆ ಸಚಿವರೂ ಬರುತ್ತಿರಲಿಲ್ಲ ಅನ್ನಿಸುತ್ತೆ. ಅವರೀಗ ಬಂದದ್ದು ಸಂತೋಷ ಎಂದು ಲೇವಡಿ ಮಾಡಿದರು.
ನಂಜೇಗೌಡರು ಸಾಲದ ಹೊರೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಡ್ಡಿ ಕಟ್ಟಲಾಗದೆ, ಬೆಳೆಗೆ ಸರಿಯಾದ ಬೆಲೆ ಸಿಗದೆ ಕೆಲ ರೈತರು ಆತ್ಮಹತ್ಯೆ ದಾರಿ ಹಿಡಿದಿರುವುದು ವಿಪರ್ಯಾಸ. ಮುಂದಿನ ದಿನಗಳಲ್ಲಿ ರೈತರು ಸಾಲ ಮಾಡದ ರೀತಿ ಕಾರ್ಯಕ್ರಮ ಮಾಡೋದು ಕುಮಾರಣ್ಣನ ಕನಸಾಗಿತ್ತು. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ನಾವು ಹೋಗಬಹುದು, ಆದರೆ ಸರ್ಕಾರ ರೈತರ ಆತ್ಮಹತ್ಯೆ ನಿಲ್ಲಿಸುವ ರೀತಿಯಲ್ಲಿ ಕೆಲಸ ಮಾಡ್ಬೇಕು ಎಂದು ನಿಖಿಲ್​ ಹೇಳಿದರು.
ರಾಮನಗರ ಜನತೆ ನನ್ನ ತಂದೆಯನ್ನ ರಾಜಕೀಯವಾಗಿ ಬೆಳೆಸಿದ್ದಾರೆ. ನಿಖಿಲ್ ಇಲ್ಲಿಗೂ ಬರಲಿ ಎಂಬುದು ಅವರ ಆಸೆ. ನಾನು ಎಲ್ಲ ಕಡೆಯೂ ಒಡಾಡ್ತೀನಿ ಎಂದರು.ಇನ್ನು ಮುಂದಿನ ಎಂಪಿ ನಿಖಿಲ್ ಎಂಬ ಅಭಿಮಾನಿಗಳ ಘೋಷಣೆ ವಿಚಾರವಾಗಿ ಪ್ರತಿಕ್ರಿಯಿಸಿದ ನಿಖಿಲ್​ ಕುಮಾರಸ್ವಾಮಿ, ಅಭಿಮಾನಿಗಳು ಮತ್ತು ಕಾರ್ಯಕರ್ತರು ನನ್ನ ಮೇಲೆ ವಿಶೇಷ ಪ್ರೀತಿ- ಗೌರವ ಇಟ್ಟಿದ್ದಾರೆ. ಅವರಿಗಾಗಿ ನಾನು ಹೋರಾಟ ಮಾಡ್ತೀನಿ. ನನ್ನ ಕರ್ಮಭೂಮಿ ಮಂಡ್ಯ. ನನ್ನ ಆಯ್ಕೆ ಮಂಡ್ಯ. ಸೋಲು ಗೆಲುವು ರಾಜಕಾರಣದಲ್ಲಿ ಸಹಜ. ಆದ್ರೆ ಯಾವ ರಾಜಕಾರಣಿಗಳೂ ಮನೆಯಲ್ಲಿ ಕೂರಲ್ಲ. ಜನರೊಂದಿಗೆ ನಾವಿರುತ್ತೇವೆ, ಜನ ನನ್ನನ್ನು ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎನ್ನುವ ಮೂಲಕ ಮತ್ತೆ ಮಂಡ್ಯ ರಾಜಕೀಯಕ್ಕೆ ಎಂಟ್ರಿ ಕೊಡುವುದಾಗಿ ಸೂಚ್ಯವಾಗಿ ತಿಳಿಸಿದರು.
ನನ್ನ ಮೊದಲ ಆಯ್ಕೆ ಪಕ್ಷ. ನಂತರ ಸಿನೆಮಾ ಎಂದ ನಿಖಿಲ್​, ಪಕ್ಷ ಕೊಟ್ಟ ಜವಾಬ್ದಾರಿ ನಿಭಾಯಿಸಲು ಗಮನ ಹರಿಸುತ್ತೇನೆ ಎಂದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲಿನ ಬಳಿಕ ಮಂಡ್ಯ ಬಿಟ್ಟಿದ್ದ ನಿಖಿಲ್ ಕುಮಾರಸ್ವಾಮಿ, ಇದೀಗ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಮತ್ತೆ ಪ್ಲ್ಯಾನ್​ ಮಾಡಿದ್ದಾರೆ. ಕೆ.ಆರ್. ಪೇಟೆ ಕ್ಷೇತ್ರ ಕಳೆದುಕೊಂಡ ಜೆಡಿಎಸ್​ಗೆ ಶಕ್ತಿ ತುಂಬಲು ಯೋಚಿಸಿರುವ ಎಚ್​ಡಿಕೆ, ಯೂಥ್ ಐಕಾನ್ ಆಗಿರೋ ನಿಖಿಲ್ ಮೂಲಕ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಪ್ಲ್ಯಾನ್ ಮಾಡಿದ್ದಾರೆ.
ಸಾವಿನ ಮನೆಯಲ್ಲೂ ಬಿಜೆಪಿ-ಜೆಡಿಎಸ್​ ರಾಜಕೀಯ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + six =
Remember me
