ಮಂಡ್ಯ:ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಚುನಾವಣೆಗೆ ನಿಂತಿದ್ದ ನಿಖಿಲ್​ ಕುಮಾರಸ್ವಾಮಿ ಸುಮಲತಾ ಎದುರು ಸೋಲನ್ನುಂಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಅದೇ ವಿಚಾರವನ್ನು ಮತ್ತೊಮ್ಮೆ ನೆನೆದಿರುವ ನಿಖಿಲ್​, ಭಾವುಕರಾಗಿ ಮಾತನಾಡಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಗ್ರಾ.ಪಂ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿಖಿಲ್​ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. “ಮಂಡ್ಯದ ಎಲ್ಲ ಶಾಸಕರು ನಾನು ಚುನಾವಣೆಗೆ ನಿಲ್ಲಬೇಕು ಎಂದು ಹೇಳಿದರು. ಅವರ ಅಭಿಪ್ರಾಯದ ಪ್ರಕಾರ ನಾನು ಚುನಾವಣೆಗೆ ನಿಂತೆ. ಚುನಾವಣೆಯಲ್ಲಿ ಸೋತಿರೋದು ನನಗೆ ಚಿಂತೆ ಇಲ್ಲ. ನೀವು ನಾನು ಗೆಲ್ಲುತ್ತೇನೆ ಅಂದುಕೊಂಡಿದ್ರಿ. ಲಕ್ಷಾಂತರ, ಕೋಟ್ಯಾಂತರ ರೂಪಾಯಿಯನ್ನ ನನ್ನ ಪರ ಬೆಟ್ಟಿಂಗ್ ಕಟ್ಟಿದ್ರಿ. ಎಷ್ಟೋ ಜನ ನನ್ನ ಸೋಲಿನಿಂದ ಮನೆ-ಮಠ ಕಳೆದುಕೊಂಡಿದ್ದಾರೆ. ಇದು ನನಗೆ ತುಂಬಾ ನೋವಾಗುತ್ತಿದೆ.” ಎಂದು ಅವರು ಹೇಳಿದ್ದಾರೆ.
ನನಗೂ ಚುನಾವಣೆಗು ಮೊದಲು ಮಂಡ್ಯ ಕ್ಷೇತ್ರದ ಜತೆಗೆ ಅಷ್ಟೊಂದು ಒಡನಾಟ ಇರಲಿಲ್ಲ. ನನ್ನ ವಿರೋಧವಾಗಿ ನಿಂತಿದ್ದವರಿಗೆ ಜಿಲ್ಲೆಯಲ್ಲಿ ಅಷ್ಟು ಜನ ಸಂಪರ್ಕ ಇರಲಿಲ್ಲ. ಕುಮಾರಣ್ಣನವರ ಶಕ್ತಿ ಕುಗ್ಗಿಸಲು ವಿರೋಧಿ ಬಣ ಸೃಷ್ಟಿಯಾದವು ಎಂದು ಸಂಸದೆ ಸುಮಲತಾ ಹೆಸರು ಹೇಳದೆ ನಿಖಿಲ್ ವಾಗ್ದಾಳಿ ನಡೆಸಿದ್ದಾರೆ.
ನಾನು ಸೋತರು ನನಗೆ ಬೇಸರ ಆಗಿಲ್ಲ. ನಾನು ಗೆದ್ದು ದೆಹಲಿಗೆ ಹೋಗಿ ಮೆರೆಯಬೇಕಿರಲಿಲ್ಲ. ಆ ವಿಚಾರ ಈಗ ಮಾತನಾಡುವುದು ಬೇಡ ಎನ್ನುತ್ತಲೇ ಸೋಲಿನ ಬಗ್ಗೆ ಮಾತನಾಡಿದ್ದಾರೆ. (ದಿಗ್ವಿಜಯ ನ್ಯೂಸ್​)
ಪ್ರೀತಿಸಿ ಮದುವೆಯಾಗಿದ್ದ ಹುಡುಗಿ ಮಸಣ ಸೇರಿದಳು! ಇಷ್ಟಕ್ಕೆಲ್ಲ ಕಾರಣವಾಗಿದ್ದು ಒಂದು ಮೊಬೈಲ್​

48 ಗಂಟೆಗಳಲ್ಲಿ 9 ಕಾಮುಕರಿಂದ 13 ಬಾರಿ ರೇಪ್​: ನರಕಯಾತನೆ ಬಿಚ್ಚಿಟ್ಟ 9ನೇ ತರಗತಿ ವಿದ್ಯಾರ್ಥಿನಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + three =
Remember me
