ಬೆಂಗಳೂರು:ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್​) ಬೆಂಗಳೂರು ಮತ್ತು ಧಾರವಾಡ ಘಟಕಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಡಿ.7 ಕೊನೇ ದಿನ.
ಹುದ್ದೆಗಳ ವಿವರಹಿರಿಯ ಸಲಹೆಗಾರ ಮನೋವೈದ್ಯ-2ಸಲಹೆಗಾರ ಮನೋವೈದ್ಯ- 4ಕ್ಲಿನಿಕಲ್​ ಸೈಕಾಲಜಿಸ್ಟ್​/ ಮನೋವೈದ್ಯಕೀಯ ಸಮಾಜ ಸೇವಕ-6ಸಲಹೆಗಾರ (ಕೌನ್ಸಿಲರ್​)-20ತಾಂತ್ರಿಕ ಸಂಯೋಜಕರು/ ಪ್ರಾಜೆಕ್ಟ್​ ಸಂಯೋಜಕರು-2
ವಿದ್ಯಾರ್ಹತೆ:ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಗಳಿಸಿದ್ದರೆ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಡಿ, ಡಿಎನ್​ಬಿ, ಡಿಪಿಎಂ, ಎಂ.ಫಿಲ್​., ಎಂಎ, ಎಂಎಸ್ಸಿ, ಎಂಎಸ್​ಡಬ್ಲ್ಯು, ಡಿಪ್ಲೊಮಾ, ಬಿಇ, ಬಿಟೆಕ್​, ಎಂಸಿಎ ವಿಷಯವನ್ನು ವ್ಯಾಸಂಗ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಿಶೇಷ ಸೂಚನೆ:ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಓದುವುದು, ಬರೆಯುವುದು ಮತ್ತು ಮಾತನಾಡುವುದಕ್ಕೆ ಬರಬೇಕು. ಕೆಲಸದಲ್ಲಿ ಅನುಭವ ಹೊಂದಿರುವ ಜೊತೆಗೆ ಹೊಸಬರಿಗೂ ಅವಕಾಶವಿರುತ್ತದೆ. ಅಭ್ಯರ್ಥಿಯ ಕಾರ್ಯಕ್ಷಮತೆಯ ಆಧಾರದ ಮೇಲೆ ಹುದ್ದೆಯ ಅವಧಿ ವಿಸ್ತರಿಸುವ ಸಾಧ್ಯತೆ ಇರುತ್ತದೆ.
ವಯೋಮಿತಿ:ನಿಮ್ಹಾನ್ಸ್​ ನಿಯಾಮನುಸಾರ ಕನಿಷ್ಠ 35 ಹಾಗೂ ಗರಿಷ್ಠ 50 ವರ್ಷ ಮೀರದ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.
ವೇತನ:ಹುದ್ದೆಗಳಿಗೆ ಅನುಗುಣವಾಗಿ 25,000 ರೂ.ನಿಂದ 1,10,000 ರೂ. ಮಾಸಿಕ ವೇತನ ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ:ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ನಿಮ್ಹಾನ್ಸ್​ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲ ವಿವರ ಭರ್ತಿ ಮಾಡಿ, ಸ್ವವಿವರ, ಪದವಿ ಪ್ರಮಾಣ ಪತ್ರಗಳ ಪ್ರತಿಗಳು, ಅನುಭವ ಪ್ರಮಾಣಪತ್ರಗಳ ಪ್ರತಿಗಳನ್ನು ಈkarnatakastate.telemanascellgmail.comಇಮೇಲ್​ ಐಡಿಗೆ ಕಳುಹಿಸಬೇಕು. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅಧಿಸೂಚನೆಗೆ:http://bit.ly/3Xf0m7M,ttp://bit.ly/3V7Tg36ಅರ್ಜಿ ಸಲ್ಲಿಸಲು ಕೊನೇ ದಿನ:7-.12.-2022ಮಾಹಿತಿಗಾಗಿ:https://nimhans.ac.in/
2023ನೇ ಸಾಲಿನ ‘ಸಾರ್ವತ್ರಿಕ ರಜೆ- ಪರಿಮಿತ ರಜೆ’ಗಳ ಅಧಿಕೃತ ಪಟ್ಟಿ ಬಿಡುಗಡೆ ಮಾಡಿದ ಕರ್ನಾಟಕ ಸರ್ಕಾರ

ಬಾಗಲಕೋಟೆ ಜಿಪಂ ವ್ಯಾಪ್ತಿಯಲ್ಲಿ ವಿವಿಧ 54 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಸೊಸೆ ಜತೆ ಸ್ಕೂಟಿಯಲ್ಲಿ ಹೋಗುವಾಗ ಕೆಳಗೆ ಬಿದ್ದು ಅತ್ತೆ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
