ಬೆಂಗಳೂರು:ಕರೊನಾ ಸೋಂಕು ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿಂದ ಸೇವೆ ಸ್ಥಗಿತಗೊಳಿಸಿದ್ದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಸೋಮವಾರದಿಂದ ಹೊರರೋಗಿಗಳ ಸೇವೆಯನ್ನು ಪುನರಾರಂಭಿಸಲಿದ್ದು, ನೋಂದಣಿ ಮಾಡಿಕೊಂಡ ರೋಗಿಗಳಿಗೆ ಮಾತ್ರ ಸೇವೆ ಲಭ್ಯವಾಗಲಿದೆ.
ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಲಾಕ್​ಡೌನ್ ಹೇರಿದ ಸರ್ಕಾರ, ಚೇತರಿಕೆ ಕಂಡಿರುವ ರೋಗಿಗಳನ್ನು ಬಿಡುಗಡೆಗೊಳಿಸಬೇಕು. ತುರ್ತು ಚಿಕಿತ್ಸೆ ಹೊರತುಪಡಿಸಿ ಆಸ್ಪತ್ರೆಗಳಲ್ಲಿನ ಎಲ್ಲ ಸೇವೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿತ್ತು. ಹೀಗಾಗಿ ನಿಮ್ಹಾನ್ಸ್ ಮಾ. 26ರಿಂದ ಹೊರ ರೋಗಿಗಳ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಿತ್ತು. ಇದರಿಂದ ನಿಯಮಿತ ಚಿಕಿತ್ಸೆ ಪಡೆಯುತ್ತಿದ್ದ ಸಾವಿರಾರು ರೋಗಿಗಳಿಗೆ ತೊಂದರೆಯಾಗಿತ್ತು.
ಇದನ್ನೂ ಓದಿಜೂ.8ರಿಂದ ಫ್ರೀಲೈಫ್: ಜುಲೈವರೆಗೆ ಶಾಲೆ ಇಲ್ಲ
ಇದೀಗ ಲಾಕ್​ಡೌನ್ ಸಡಿಲಿಕೆಯಾಗಿರುವುದರಿಂದ ನಿಮ್ಹಾನ್ಸ್​ನಲ್ಲಿ ಹೊರರೋಗಿಗಳ ಸೇವೆ ಆರಂಭಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಸೂಕ್ತ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ರೋಗಿಗಳ ದಟ್ಟಣೆ ತಪ್ಪಿಸಲು ಸೀಮಿತ ರೋಗಿಗಳಿಗೆ ಸೇವೆ ನೀಡಲು ನಿರ್ಧರಿಸಿದೆ. ಇದಕ್ಕಾಗಿ ರೋಗಿಗಳು ಐವಿಆರ್​ಎಸ್ ಮೂಲಕ (ದೂ: 080- 26991699) ಹೆಸರು ನೋಂದಾಯಿಸಿಕೊಳ್ಳಬೇಕು. ನಂತರ ಸಂಸ್ಥೆಯಿಂದ ಕರೆ ಮಾಡಿ ಸಮಸ್ಯೆ ಕುರಿತು ಸಮಾಲೋಚನೆ ನಡೆಸಿ, ಅಗತ್ಯತೆ ಅಧಾರದ ಮೇಲೆ ಆಸ್ಪತ್ರೆಗೆ ಬರಲು ಸೂಚಿಸಲಾಗುತ್ತದೆ ಎಂದು ನಿಮ್ಹಾನ್ಸ್ ನಿರ್ದೇಶಕ ಡಾ.ಬಿ.ಎನ್. ಗಂಗಾಧರ್ ತಿಳಿಸಿದ್ದಾರೆ. ತುರ್ತು ಚಿಕಿತ್ಸೆ ಹೊರತುಪಡಿಸಿ, ಉಳಿದವರು ನೋಂದಣಿ ಮೂಲಕ ಸೇವೆಗೆ ಬರುವುದು ಉತ್ತಮ. ಉಳಿದಂತೆ ಫಾಲೋಅಪ್ ರೋಗಿಗಳು ಮಾತ್ರ ಐವಿಆರ್​ಎಸ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು. ಎಲ್ಲ ರೋಗಿಗಳು ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಇದಕ್ಕಾಗಿ ರೋಗಿಗಳು ಪಾಳಿಯಲ್ಲಿ ಸರದಿಗಾಗಿ ಕಾಯಲು ಸಂಸ್ಥೆಯಲ್ಲಿ ಆಶ್ರಯ ತಾಣಗಳ ನಿರ್ಮಾಣ ಕಾರ್ಯ ನಡೆಸಿದೆ ಎಂದು ಹೇಳಿದ್ದಾರೆ. ವಿವರಕ್ಕೆ ನಿಮ್ಹಾನ್ಸ್ ಸಹಾಯವಾಣಿ 080- 46110007 ಸಂರ್ಪಸಬಹುದು.
1962 ಅಲ್ಲ ಈಗ ನಡೀತಿರೋದು- ಚೀನಾಕ್ಕೆ ಪಂಜಾಬ್ ಸಿಎಂ ವಾರ್ನಿಂಗ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two + thirteen =
Remember me
