ಬೆಂಗಳೂರು:ಡಿಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಡಿ.ಜೆ ಹಳ್ಳಿ ಠಾಣಾ ಇನ್ಸ್​ಪೆಕ್ಟರ್​ ಕೇಶವಮೂರ್ತಿ ದೂರಿನನ್ವಯ 9 ಪ್ರತ್ಯೇಕ ಎಫ್.ಐ.ಆರ್ ದಾಖಲಾಗಿದ್ದು, ಅಫ್ನಾನ್, ಮುಜಾಮಿಲ್ ಪಾಷಾ, ಸೈಯದ್ ಮಸೂದ್, ಅಯಾಜ್ ಹಾಗೂ ಅಲ್ಲಾಭಕ್ಷ್ ವಿರುದ್ಧ ದೂರು ದಾಖಲಾಗಿದೆ.
ಫೇಸ್​ಬುಕ್ ಬರಹದ ಸಂಬಂಧ ಮಂಗಳವಾರ ರಾತ್ರಿ ಪೊಲೀಸರು ನವೀನ್​ನನ್ನು ಬಂಧಿಸಿ ಕರೆ ತರುತ್ತಿದ್ದರು. ಆತನ ಮೇಲೆ ಹಲ್ಲೆ ಮಾಡುವ ಉದ್ದೇಶದಿಂದ ಮೊದಲೇ ಗುಂಪು ರಚಿಸಿದ್ದ ಆರೋಪಿಗಳು. ನವೀನ್​ ಕರೆತರುವಾಗ ಏಕಾಏಕಿ ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ.
ಪೊಲೀಸರನ್ನೂ ಕೊಲ್ಲಿ, ಮುಗಿಸಿಬಿಡಿ ಎಂಬ ಘೋಷಣೆಗಳೊಂದಿಗೆ ದಾಳಿ ಮಾಡಿದ್ದು, ಇದೇ ವೇಳೆ ಹೆಡ್ ಕಾನ್ಸ್​ಟೇಬಲ್​ ಶ್ರೀಧರ್​ ಎಂಬುವರ ತಲೆಗೆ ಗಾಯವಾಗಿದೆ. ಶಾಂತಿ ಕಾಪಾಡುವಂತೆ ಮನವಿ ಮಾಡಿದರೂ ಅದನ್ನು ಕಿವಿಗೆ ಹಾಕಿಕೊಳ್ಳದೇ ಉದ್ರಿಕ್ತ ಗುಂಪು ಠಾಣಾ ಆವರಣಕ್ಕೆ ನುಗ್ಗಿ ಪೊಲೀಸ್ ವಾಹನ‌ ಹಾಗೂ ಹೊರಗಿದ್ದ ಸಾರ್ವಜನಿಕ ವಾಹನಗಳಿಗೆ ಬೆಂಕಿ ಇಟ್ಟಿದ್ದಾರೆ.
ಠಾಣಾ ಕೆಳಮಹಡಿಯಲ್ಲಿದ್ದ ಜಪ್ತಿಯಾದ ವಾಹನಗಳಿಗೂ ಬೆಂಕಿ ಹಚ್ಚಿದ್ದಾರೆ. ಕಮಿಷನರ್ ಅನುಮತಿ ಪಡೆದು ತಕ್ಷಣ 144 ಸೆಕ್ಷನ್ ಜಾರಿ ಮಾಡಲಾಯಿತು. ಮಾತು ಕೇಳದಿದ್ದಾಗ ಅಶ್ರುವಾಯು ಸಿಡಿಸಿ, ಲಾಠಿ ಚಾರ್ಜ್ ಆರಂಭಿಸಿದರು ಆರೋಪಿಗಳು ಕೆ.ಎಸ್.ಆರ್.ಪಿ ವಾಹನಕ್ಕೆ ಬೆಂಕಿ ಹಚ್ಚಿ, ಸಿಬ್ಬಂದಿಗಳ ಶಸ್ತ್ರಾಸ್ತ್ರ ಕಿತ್ತುಕೊಂಡು ಹಲ್ಲೆ ಮಾಡಿದ್ದಾರೆ.
ಕಿತ್ತುಕೊಂಡ ಶಸ್ತ್ರಾಸ್ತ್ರಗಳಿಂದ ಪೊಲೀಸರನ್ನೇ ಕೊಲ್ಲಲು ಮುನ್ನುಗಿದ್ದರು. ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ಈ ವೇಳೆ ಗಾಳಿಯಲ್ಲಿ‌ ಗುಂಡು ಹಾರಿಸಿದ್ದಾರೆ. ದಿಕ್ಕಾಪಾಲಾಗಿ ಓಡುವಾಗ ಕೆಲ ಉದ್ರಿಕ್ತರಿಗೆ ಗಂಭೀರ ಗಾಯಗಳಾಗಿವೆ ಎಂದು ಸರ್ಕಾರದ ಪರವಾಗಿ ಘಟನೆ ಸಂಬಂಧ ಇನ್ಸ್​ಪೆಕ್ಟರ್​ ಲಿಖಿತ ದೂರು ಸಲ್ಲಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
