ಹುಬ್ಬಳ್ಳಿ:ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ವಿದ್ಯಾರ್ಥಿನಿ ನೇಹಾ ಕೊಲೆಯಾಗಿದೆ.
ಪ್ರಕರಣ ಸಂಬಂಧ ಕೊಲೆ ಆರೋಪಿ ಫಯಾಜ್​ ತಾಯಿ ಮುಮ್ತಾಜ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನನ್ನ ಮಗ ಮಾಡಿರುವ ತಪ್ಪಿಗೆ ರಾಜ್ಯದ ಜನರ ಮುಂದೆ ಕ್ಷಮೆಯಾಚಿಸುತ್ತೇನೆ. ಆಕೆ ಕೂಡಾ ನನ್ನ ಮಗಳಂತೆ. ನೇಹಾ ತಂದೆ-ತಾಯಿ ಬಳಿ ಕೂಡಾ ನಾನು ಕ್ಷಮೆ ಕೇಳುತ್ತೇನೆ. ಯಾವ ಮಕ್ಕಳು ಇಂತಹ ತಪ್ಪು ಮಾಡಿದ್ರೆ ತಪ್ಪು ತಪ್ಪೆ ಆಗಿರುತ್ತದೆ ಎಂದಿದ್ದಾರೆ. ಈ ಬೆನ್ನಲ್ಲೆ ನೇಹಾ ತಂದೆ ಕೂಡಾ ಮಾತನಾಡಿ ಆಕ್ರೋಶ ಹೊರಹಾಕಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ನನ್ನ ಮಗಳ ಮದುವೆ ಪ್ರಸ್ತಾಪ ಬಂದಿಲ್ಲ. ಈ ವಿಚಾರ ನಮ್ಮ ಮನೆಗೆ ಬಂದಿಲ್ಲ. ಅವರು ಕ್ಷಮೆ ಕೇಳುತ್ತಾರೆ ಸರಿ, ಆದರೆ ನಮ್ಮ ಮಗಳು ಈಗ ವಾಪಸ್​ ಬರುವುದಿಲ್ಲ. ಅವರ ಮಗ ಕೂಡಾ ಇಂಥಹ ಘಟನೆ ಮಾಡಿ ಜೈಲುಪಾಲಾಗಿದ್ದಾನೆ.ಫಯಾಜ್​ ತಂದೆ-ತಾಯಿ ನಿಮ್ಮ ಬಳಿ ಮದುವೆ ವಿಷ್ಯ ಪ್ರಸ್ತಾಪಿಸಿಲ್ಲ. ಅವರ ಮಗ ಇಷ್ಟು ವಿಕೃತ ಮನೋಭಾವನೆ ಇದ್ದವನಲ್ವಾ? ನೀವು ಈ ಕುರಿತಾಗಿ ನಮಗೆ ಮಾಹಿತಿ ನೀಡಬೇಕಿತ್ತು. ನಾನು ಜಾಗೃತನಾಗಿರುತ್ತಿದ್ದೇನು. ನಾನು ಮುಂದಿನ ಕ್ರಮ ಕೈಗೊಳ್ಳುತ್ತಿದ್ದೇವು. ಈಗ ಕೊಲೆ ನಡೆದಿದೆ. ಕ್ಷಮೆ ಕೇಳುವುದು ಎಷ್ಟು ಸರಿ. ಅವನಿಗೆ ಜಾಮೀನಿ ನೀಡಿ ಹೊರಗೆ ಕರೆ ತಂದು ಅವನನ್ನು ಬರ್ಬರವಾಗಿ ಶಿಕ್ಷೆ ನೀಡಿ ಆಗ ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗುತ್ತದೆ.
ನೇಹಾ ಹತ್ಯೆಯಲ್ಲಿ ಫಯಾಜ್ ಒಬ್ಬನೇ ಇಲ್ಲ, ಈತನ ಹಿಂದೆ ನಾಲ್ಕು ಜನರಿದ್ದಾರೆ. ಅವರ ಹೆಸರನ್ನು ಪೋಲಿಸರಿಗೆ ಕೊಟ್ಟಿದ್ದೇನೆ. ಪೋಲಿಸರು ಈ ಕುರಿತು ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ಇನ್ಟಾಗ್ರಾಂನಲ್ಲಿ ನನ್ನ ಮಗಳ ಹೆಸರಿನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ ನನ್ನ ಮಗಳ ಬಗ್ಗೆ ಸಮಾಜದಲ್ಲಿ ತಪ್ಪು ತಿಳುವಳಿಕೆ ಬರುವಂತೆ ಮಾಡಿದ್ದಾರೆ. ಆರೋಪಿ ಜೈಲಿನಲ್ಲಿದ್ದರು ಖಾತೆಯನ್ನು ಯಾರು ಸೃಷ್ಟಿ ಮಾಡಿದ್ದಾರೆ ಎಂದು ಪೋಲಿಸರು ತನಿಖೆ ನಡೆಸಬೇಕು. ಈ ಕುರಿತು ವಕೀಲರೊಂದಿಗೆ ಮಾತನಾಡಿದ್ದೇನೆ.‌ ಸೈಬರ್ ಪೋಲಿಸರಿಗೆ ಈ ಬಗ್ಗೆ ದೂರು ನೀಡಲಿದ್ದೇನೆ ಎಂದರು.
ಹಿಂದೆ ಆರೋಪಿ ಫಯಾಸ್ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ತಂದೆಯನ್ನೇ ಪೋಲಿಸ್ ಠಾಣೆಯಲ್ಲಿ ಕೊಲೆ ಮಾಡಲು ಹೋಗಿದ್ದ, ಇದನ್ನು ಸಮಾಜದ ಮುಖಂಡರು ನನಗೆ ತಿಳಿಸಿದ್ದಾರೆ. ಪೋಲಿಸರು ಮುಚ್ಚಳಿಕೆ ಬರೆಸಿಕೊಂಡು ಕಳಿಸಿದ್ದಾರೆ. ಈ ವಿಷಯ ನನ್ನ ಗಮನಕ್ಕೆ ಬಂದಿದ್ದರೇ ನನ್ನ ಮಗಳ ರಕ್ಷಣೆಯನ್ನು ನಾನು ಮಾಡಿಕೊಳ್ಳುತ್ತಿದ್ದೆ, ಮಗಳು ಇಂದು ಬದುಕುಳಿಯುತ್ತಿದ್ದಳು ಎಂದು ಕಣ್ಣೀರು ಹಾಕಿದರು.
ಸಿನಿಮಾದಲ್ಲಿ ಅವಕಾಶಬೇಕಾದ್ರೆ ಮಲಗಬೇಕು, ಅದು ನನಗೆ ಕೆಟ್ಟ ಅನುಭವವಾಗಿತ್ತು ಎಂದು ಕಣ್ಣೀರಿಟ್ಟ ನಟಿ

ನಟ ದರ್ಶನ್‌ ಇದ್ದ ಪ್ರಚಾರ ವಾಹನಕ್ಕೆ ವಿದ್ಯುತ್‌ ಸ್ಪರ್ಶ; ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ…

ಶಿಕ್ಷೆ ಆಗಬೇಕು, ಆದ್ರೆ ನನ್ನ ಮಗ ಫಯಾಜ್​ಗೆ ಪ್ರಪೋಸ್​ ಮಾಡಿದ್ದೆ ನೇಹಾ; ಆರೋಪಿ ತಾಯಿ ಮುಮ್ತಾಜ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
