ಬೆಂಗಳೂರು:ಯುಪಿಎಸ್ಸಿ ಪರೀಕ್ಷೆಯಲ್ಲಿ ರ್‍ಯಾಂಕ್​ ಪಡೆದ ಸಾಧಕರು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಇದರಿಂದಾಗಿ ನಾಗರಿಕ ಸೇವೆಗೆ ಸೇರಿದಕ್ಕೆ ನಿಮ್ಮ ಜೀವನ ಸಾರ್ಥಕವೆನಿಸಲಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕಿವಿಮಾತು ಹೇಳಿದ್ದಾರೆ.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಶನಿವಾರ ಮಹಾಲಕ್ಷ್ಮೀಲೇಔಟ್‌ನ ಬಿಜಿಎಸ್‌ಸಿಇಟಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಸನ್ಮಾನ ಸಮಾರಂಭ’ದಲ್ಲಿ ಶ್ರೀಗಳು ಆಶೀರ್ವವನ ನೀಡಿದರು.
ಸಮಾಜದಲ್ಲಿ ಒಳ್ಳೆಯ ಸೇವೆ ಮಾಡಲು ಸಾಧಕರಿಗೆ ದೊಡ್ಡ ಅವಕಾಶ ಸಿಕ್ಕಿದಂತಾಗಿದೆ. ಹುದ್ದೆಯಲ್ಲಿ ಕುಳಿತ ಬಳಿಕ ಯಾವುದೇ ವ್ಯಾಮೋಹಕ್ಕೆ ಒಳಗಾಗದೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಒದಗಿಸಬೇಕು. ಸೇವೆಯು ನಿಮ್ಮ ಬದುಕಿಗೆ ದಿವ್ಯತನ ತರುವಂತಾಗಲಿ. ಹಣಕ್ಕೆ ಆಸೆಪಡೆದೆ ನಾಗರಿಕ ಸೇವೆಯಲ್ಲಿ ತೊಡಗುವಂತಾಗಬೇಕು. ದೇಶದ ಯಾವ ರಾಜ್ಯಕ್ಕೆ ತೆರಳಿದರೂ ನಮ್ಮ ಸಂಸ್ಕೃತಿಯನ್ನು ಮರೆಯದೆ ಭಾರತೀಯ ಮಕ್ಕಳಾಗಿ ಸೇವೆ ಮಾಡಲು ಮುಂದಾಗಬೇಕು. ಪ್ರತಿ ವರ್ಷ ಅಂದಾಜು 20 ಲಕ್ಷ ಜನ ಯುಪಿಎಸ್ಸಿ ಪರೀಕ್ಷೆ ಬರೆಯುತ್ತಾರೆ. ಇದರಲ್ಲಿ ಒಂದು ಸಾವಿರದೊಳಗೆ ರ್‍ಯಾಂಕ್ ಪಡೆಯುವುದು ಜೀವಮಾನದಲ್ಲಿ ದೊಡ್ಡ ಸಾಧನೆ ಮಾಡಿದಂತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಪೊಲೀಸ್​ ಅಧಿಕಾರಿಗಳ ಸೋಗಿನಲ್ಲಿ ಚಿನ್ನಾಭರಣ ದೋಚಿದ ಖದೀಮರು; ತನಿಖೆ ವೇಳೆ ಪ್ರಕರಣಕ್ಕೆ ಸಿಕ್ತು ರೋಚಕ ಟ್ವಿಸ್ಟ್​
ಸರ್ಮಪಕವಾಗಿ ಕಾನೂನು ಅನುಷ್ಠಾನಕ್ಕೆ ತರಲು ಸರ್ಕಾರ, ಅಧಿಕಾರಿಗಳಿಗೆ ಬಿಡಬೇಕು. ಮನಸ್ಸು ನಮ್ಮನ್ನು ಶತ್ರು ಅಥವಾ ಮಿತ್ರನಾಗಿ ಮಾಡುತ್ತದೆ. ಹೀಗಾಗಿ,ಮನಸ್ಸುನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು. ಕೊನೆಯವರೆಗೂ ಪಾಲಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಜತೆಗೆ, ಸಾಧಕರು ಉನ್ನತ ಹುದ್ದೆಗೇರಿದ್ದರೂ ನೀವು ಬಂದಿರುವ ದಾರಿಯನ್ನು ಯಾವುದೇ ಕಾರಣಕ್ಕೂ ಮರೆಯಕೂಡದು ಎಂದು ಶ್ರೀಗಳು ಸಲಹೆ ನೀಡಿದ್ದಾರೆ. 2022ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಕರ್ನಾಟಕದಿಂದ ಆಯ್ಕೆಯಾದ ಸಾಧಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ, ವಿಜಯನಗರ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು, ಕ್ರಿಷಿಕ್ ಸರ್ವೋದಯ ೌಂಡೇಷನ್ ಅಧ್ಯಕ್ಷ ವೈ.ಕೆ.ಪುಟ್ಟಸ್ವಾಮಿಗೌಡ ಮತ್ತಿತರರು ಉಪಸ್ಥಿತರಿದ್ದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಮಾತನಾಡಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ಸಾಧಕರು ಸಮಾಜದ ಋಣ ತೀರಿಸುವ ಕೆಲಸವನ್ನು ಮಾಡಬೇಕು. ಪ್ರತಿಯೊಬ್ಬರಿಗೂ ಗುರು ಋಣ, ತಂದೆ-ತಾಯಿ ಋಣ, ಸಮಾಜದ ಋಣ ಇರುತ್ತದೆ. ಸಾಧನೆ ಮಾಡಿ ಹುದ್ದೆಗೇರಿದ ಬಳಿಕ ಈ ಎಲ್ಲರ ಋಣವನ್ನು ತೀರಿಸುವ ಕೆಲಸ ಮಾಡಬೇಕು. ಅದರಲ್ಲೂ ಸಮಾಜದ ಋಣ ತೀರಿಸುವುದು ಜೀವನದ ಪ್ರಮುಖ ಕೆಲಸ. ಶಾಸಕಾಂಗ ರೂಪಿಸುವ ಕಾನೂನು ಕಾರ್ಯಾಂಗ ಜಾರಿಗೊಳಿಸಬೇಕು.
ಇದರಲ್ಲಿ ಯಾವುದಾದರೂ ಲೋಪ ಉಂಟಾದಾಗ ನ್ಯಾಯಾಂಗ ಮಧ್ಯ ಪ್ರವೇಶಿಸಿ ನ್ಯಾಯ ನೀಡಬೇಕು. ಇಂಥ ಒಕ್ಕೂಟ ವ್ಯವಸ್ಥೆಯಲ್ಲಿ ಕಾರ್ಯಾಂಗದ ಭಾಗವಾಗಿ ನೀವೆಲ್ಲರೂ ಆಯ್ಕೆಯಾಗಿದ್ದು, ಹೃದಯವಂತಿಕೆಯಿಂದ ಕಷ್ಟದಲ್ಲಿರುವವರ ಕಣ್ಣೀರು ಹೊರೆಸುವ ಕೆಲಸ ಮಾಡಬೇಕು.ಹೀಗಾದಾಗ, ನಿಮ್ಮ ಸಾಧನೆಗೂ ಗೌರವ ಸಿಕ್ಕಿದಂತಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲಹೆ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 5 =
Remember me
