ಹುಬ್ಬಳ್ಳಿ:ರಿಯಲ್ ಎಸ್ಟೇಟ್ ಬೂಮ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹು-ಧಾ ಮಹಾನಗರದಲ್ಲಿ ನೂತನ ಕಟ್ಟಡ ಎತ್ತರದ ಮಿತಿ 15 ಮೀಟರ್​ಗೆ ಹೆಚ್ಚಿಸಬೇಕೆಂಬ ಬೇಡಿಕೆ ರಾಜ್ಯ ಸರ್ಕಾರದಿಂದ ಈಡೇರಿದ್ದು, ಪಾಲಿಕೆ ಅಧಿಕಾರಿಗಳು ‘ನಿರ್ಮಾಣ್ -2’ ಸಾಫ್ಟ್​ವೇರ್​ನಲ್ಲಿ ಇದನ್ನು ಅಳವಡಿಸಿಕೊಂಡು ಜಾರಿ ಮಾಡಿಲ್ಲ. ಹಾಗಾಗಿ, 180ಕ್ಕೂ ಹೆಚ್ಚು ಹೊಸ ವಸತಿ ಯೋಜನೆಗಳಿಗೆ ಗ್ರಹಣ ಹಿಡಿದಿದೆ.
ಹು-ಧಾ ಮಹಾನಗರದಲ್ಲಿ ವಸತಿ ನಿರ್ವಣದ ಮಿತಿಯನ್ನು ಹನ್ನೊಂದೂವರೆ ಮೀಟರ್​ನಿಂದ ಹದಿನೈದು ಮೀಟರ್​ಗೆ ಹೆಚ್ಚಿಸಬೇಕೆಂಬ ವರದಿಯನ್ನು ಕ್ರೆಡೈ ಮಂಡಿಸಿತ್ತು. ಈ ಕುರಿತು ರಾಜ್ಯ ಸರ್ಕಾರ 2021ರ ನವೆಂಬರ್ 11ರಂದು ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ. ಕಟ್ಟಡ ವನ್ನು ಮಿತಿಯನ್ನು 15 ಮೀಟರ್​ವರೆಗೆ ಕಟ್ಟಲು ಅನುಮತಿಸಿದೆ. ಆದರೆ, ಮಹಾನಗರ ಪಾಲಿಕೆಯು ನಿರ್ವಣ್-2 ಸಾಫ್ಟ್​ವೇರ್​ನಲ್ಲಿ ಇದನ್ನು ಅಳವಡಿಸಿಲ್ಲ. ಹಾಗಾಗಿ ಜಾರಿಯಲ್ಲಿ ವಿಳಂಬವಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.
ಬಸ್ ‘ವೇ’, ಶೆಲ್ಟರ್ ಹಾಗೂ ನೀರಿನ ಟ್ಯಾಂಕ್ ಅಳವಡಿಸುವುದನ್ನು 10 ಎಕರೆ ಬದಲಾಗಿ 25 ಎಕರೆ ಹಾಗೂ ಅದಕ್ಕೆ ಮಿಕ್ಕಿದ ಕ್ಷೇತ್ರಕ್ಕೆ ಅಳವಡಿಸುವಂತಾಗಬೇಕು. ಸಿಂಗಲ್ ಯೂನಿಟ್ ಲೇಔಟ್​ಗೆ ನೀಡಿದ ಮಿತಿ ತೆಗೆದುಹಾಕಬೇಕು. ಉದ್ದಿಮೆ ಹೊರತುಪಡಿಸಿ ಕಟ್ಟಡಗಳ ನಿರ್ಮಾಣ ಮಿತಿ 15 ಮೀಟರ್ ಒಳಗಡೆ ಇರುವಂಥ ವಸತಿ/ವ್ಯಾಪಾರಿ ಕಟ್ಟಡಗಳಿಗೆ ಮುಂದುವರಿಯಬೇಕು. ಕಟ್ಟಡದ ಕಾರಿಡಾರ್ ಕ್ಷೇತ್ರವನ್ನು ಕೂಡ ಎಫ್​ಎಆರ್ ಕಮ್ಯೂಟೇಷನ್​ನಿಂದ ಹೊರಗಿಡಬೇಕು. ಹು-ಧಾ ಮಹಾನಗರದಲ್ಲಿ ಈಗ ಶೇ. 80ರಂತೆ 9 ಮೀಟರ್ ಅಗಲದ ರಸ್ತೆಗಳಿವೆ. ಕಾರಣ ಈಗಿರುವ ಸ್ಥಿತಿಯಲ್ಲಿ 12 ಮೀಟರ್ ಮಿತಿ ಪ್ರಾಯೋಗಿಕವಾಗಿ ಕಠಿಣ. ಆದ್ದರಿಂದ ಈ ಮಿತಿ 9 ಮೀಟರ್​ಗೆ ಕಡಿತಗೊಳಿಸಬೇಕು. ರಿಟೇಲ್ ಬಿಜಿನೆಸ್ ಮಳಿಗೆ, ಶಾಪಿಂಗ್ ಕಾಂಪ್ಲೆಕ್ಸ್​ನ ರ್ಪಾಂಗ್ ಕ್ಷೇತ್ರ 75 ಚ.ಮೀಟರ್ ಇಡಬೇಕು ಎಂಬ ಬೇಡಿಕೆಯನ್ನು ಕ್ರೆಡೈ, ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು.
ನಗರಾಭಿವೃದ್ಧಿ ಸೇರಿದಂತೆ ಇತರ ಇಲಾಖೆಗಳ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ವಿಷಯಗಳನ್ನು ಕೂಲಂಕಷವಾಗಿ ರ್ಚಚಿಸಲಾಗಿದೆ. 12 ಮೀ., 12ಮೀ.ಗಿಂತ ಹೆಚ್ಚಿನ ಹಾಗೂ 15 ಮೀ.ವರೆಗಿನ ಕಟ್ಟಡದ ಎಲ್ಲ ಬದಿಗಳಲ್ಲಿ ಕನಿಷ್ಠ 4 ಮೀ. ಜಾಗ ಮೀಸಲಿಡಬೇಕು. 400 ಚ.ಮೀ. ವರೆಗೆ ನಿವೇಶನ ಅಳತೆಯಲ್ಲಿ 9 ಮೀ. ರಸ್ತೆ ಅಗಲ, ಕಟ್ಟಡದ ಎತ್ತರ 12 ಮೀ. ಇರಬೇಕು. 400-1000 ಚ.ಮೀ. ನಿವೇಶನಕ್ಕೆ ಕನಿಷ್ಠ 9 ಮೀ. ರಸ್ತೆ ಅಗಲ, 15 ಮೀ. ಕಟ್ಟಡದ ಎತ್ತರ, 1000 ಚ.ಮೀ. ಮೇಲ್ಪಟ್ಟ ನಿವೇಶನಕ್ಕೆ ಕನಿಷ್ಠ 9 ಮೀ. ರಸ್ತೆ ಅಗಲ ಹಾಗೂ 15 ಮೀ.ವರೆಗೆ ಕಟ್ಟಡದ ಎತ್ತರ ಇರಬೇಕು. ವಾಣಿಜ್ಯ ಮಳಿಗೆಗಳು, ಮಾಲ್​ಗಳ ಬಳಕೆಯ ಪ್ರಕಾರ ವಾಹನ ನಿಲುಗಡೆಗೆ 75 ಚ.ಮೀ. ನೆಲ ವಿಸ್ತೀರ್ಣ ಇರಬೇಕು. ಬಹು ವಸತಿ ಸಂಕೀರ್ಣ, ಅಪಾರ್ಟ್​ವೆುಂಟ್​ಗಳು 75 ಚ.ಮೀ.ಅಥವಾ ಅದಕ್ಕಿಂತ ಕಡಿಮೆ, 1 ಕಾರ್ ರ್ಪಾಂಗ್, 75 ಚ.ಮೀ.ಗಿಂತ ಹೆಚ್ಚು ಮತ್ತು 150 ಚ.ಮೀ. ವರೆಗೆ, 1 ಕಾರ್ ರ್ಪಾಂಗ್ ನಿರ್ಮಾಣ ಮಾಡುವ ಕುರಿತು ಗೆಜೆಟ್ ನೋಟಿಫಿಕೇಷನ್​ನಲ್ಲಿ ವಿವರಿಸಲಾಗಿದೆ.
ರಾಜ್ಯ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿರುವುದು ಕ್ರೆಡೈ ಪದಾಧಿಕಾರಿಗಳ ಹೋರಾಟಕ್ಕೆ ಸಿಕ್ಕ ಜಯ. ಆದರೆ, ಸ್ಥಳೀಯ ಸಂಸ್ಥೆಗಳ ವ್ಯವಸ್ಥೆಯಲ್ಲಿ ಇನ್ನೂ ಬದಲಾವಣೆಯಾಗಿಲ್ಲ. ಹೊಸ ಸಾಫ್ಟ್ ವೇರ್​ನಲ್ಲಿ ನೋಟಿಫಿಕೇಷನ್ ಅಳವಡಿಸಿದರೆ, ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ತ್ವರಿತಗೊಳ್ಳಲಿವೆ. ಪ್ರತಿಯೊಬ್ಬರೂ ಮನೆ, ನಿವೇಶನ, ಅಪಾರ್ಟ್​ವೆುಂಟ್ ಖರೀದಿಗೆ ದುಂಬಾಲು ಬೀಳಲಿದ್ದಾರೆ. ಜತೆಗೆ ರಾಜ್ಯದ ಬೊಕ್ಕಸಕ್ಕೂ ಆದಾಯ ಹರಿದು ಬರಲಿದೆ. ಇದೆಲ್ಲವೂ ರಾಜ್ಯ ಸರ್ಕಾರದ ಗಮನಕ್ಕಿದೆ. ಜಾರಿಗೊಳಿಸುವಲ್ಲಿ ವಿಫಲರಾದ ಅಧಿಕಾರಿಗಳ ಕಿವಿ ಹಿಂಡುವಲ್ಲಿ ಹಿಂದುಳಿದಿದೆ.
ಜನಪ್ರತಿನಿಧಿಗಳು ಕೆಲಸ ಮಾಡಲಿ:ಒಂದೂವರೆ ವರ್ಷದಿಂದ ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರದ ಮೇಲೆ ತೀವ್ರ ತರಹದ ಒತ್ತಡ ಹೇರಲಾಗಿತ್ತು. ಯಾಕೆಂದರೆ, ಬೃಹತ್ ಕೈಗಾರಿಕೆಗಳು ಮಹಾನಗರಕ್ಕೆ ಆಗಮಿಸುತ್ತಿವೆ. ರೈಲ್ವೆ, ವಿಮಾನ ನಿಲ್ದಾಣ, ಅದ್ಭುತ ರಸ್ತೆಗಳು ಇಲ್ಲಿವೆ. ಬೃಹತ್ ಕಟ್ಟಡಗಳ ನಿರ್ವಣದಿಂದ ರಿಯಲ್ ಎಸ್ಟೇಟ್ ಉದ್ಯಮ ಇನ್ನಷ್ಟು ಬೆಳೆಯಲಿದೆ. ಪ್ರವಾಸೋದ್ಯಮ ಕ್ಷೇತ್ರವೂ ವಿಸ್ತರಿಸಲಿದೆ. ಜನಪ್ರತಿನಿಧಿಗಳು ಇದಕ್ಕೆ ಪೂರಕವಾದ ಕೆಲಸ ಮಾಡಬೇಕಿದೆ.
ಸ್ಟಾಲ್​ಗಳಿಗಾಗಿ ಸಂಪರ್ಕಿಸಿ
ಪ್ರಾಪರ್ಟಿ ಎಕ್ಸ್​ಪೋದಲ್ಲಿ ಕೆಲವೇ ಸ್ಟಾಲ್​ಗಳು ಉಳಿದಿದ್ದು, ಆಸಕ್ತರು ಸ್ಟಾಲ್​ಗಳಿಗಾಗಿ ಮೊ. 98869 22116 ಅಥವಾ 88844 32303 ಸಂರ್ಪಸಬಹುದು.
ಸ್ಥಳ:ರಾಯ್ಕರ ಗ್ರೌಂಡ್ ವಿದ್ಯಾನಗರ, ಹುಬ್ಬಳ್ಳಿ
ದಿನಾಂಕ:ಏ. 22, 23, 24
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × one =
Remember me
