ಬೆಂಗಳೂರು:ನಟ, ನಿರೂಪಕ ಮಾಸ್ಟರ್​ ಆನಂದ್​ ಪುತ್ರಿ ವಂಶಿಕಾ ಹೆಸರು ಬಳಸಿ ವಂಚನೆ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತಳ ಸ್ಥಾನದಲ್ಲಿರುವ ನಿಶಾ ನರಸಪ್ಪಗೆ ನ್ಯಾಯಾಲಯ 14ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಬಂಧಿತೆ ನಿಶಾ ನರಸಪ್ಪ ಎಸಗಿರುವ ವಂಚನೆಗಳ ದೊಡ್ಡ ಪುರಾಣವೇ ಇದ್ದು, ವಂಶಿಕಾ ಹೆಸರಲ್ಲದೆ ಗೋಲ್ಡನ್​ ಸ್ಟಾರ್​ ಗಣೇಶ್​ ಅವರ ಹೆಸರು ಬಳಸಿಯೂ ಸಹ ಹಲವರಿಗೆ ಮೋಸ ಮಾಡಿದ್ದಾರೆ ಎಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಪೋಷಕರೊಬ್ಬರ ಜೊತೆ ಮಾತನಾಡುವ ವೇಳೆ ನಿಶಾ ತಾನು ಗೋಲ್ಡನ್​ ಸ್ಟಾರ್​ ಗಣೇಶ್​ ಅವರನ್ನು ಹಾಕಿಕೊಂಡು ಚಿತ್ರ ಒಂದನ್ನು ಮಾಡಲು ಸಜ್ಜಾಗುತ್ತಿದ್ದು, ಪ್ರದೀಪ್​ ಕರಣ್​ ಎಂಬುವವರು ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆಂದು ಹೇಳುತ್ತಿರುವ ಆಡಿಯೋ ವೈರಲ್​ ಆಗಿದೆ.
ಇದನ್ನೂ ಓದಿ:ವಂಶಿಕಾ ಹೆಸರಿನಲ್ಲಿ ವಂಚನೆ; ನಿಶಾ ನರಸಪ್ಪಗೆ 14 ದಿನಗಳ ನ್ಯಾಯಾಂಗ ಬಂಧನ
ಇತ್ತ ನ್ಯಾಯಾಂಗ ಬಂಧನದಲ್ಲಿದ್ದರು ಸಹ ಡ್ಯಾಮೇಜ್​ ಕಂಟ್ರೋಲ್​ಗೆ ಮುಂದಾಗಿರುವ ನಿಶಾ ನರಸಪ್ಪ ಸಾಮಾಜಿಕ ಜಾಲತಾಣದಲ್ಲಿ ತನಿಖೆ ಪ್ರಗತಿಯಲ್ಲಿದ್ದು, ಎಲ್ಲದ್ದಕ್ಕೂ ಉತ್ತರ ಕೊಡುತ್ತೇನೆ. ಹೊಸದಾಗಿ ಫೋಟೋ ಶೂಟ್​ಗೆ ರಿಜಿಸ್ಟ್ರೇಷನ್​ ಮಾಡಿಸುವವರು ದಯವಿಟ್ಟು ಎಲ್ಲರು ತಾಳ್ಮೆಯಿಂದ ಕಾಯಿರಿ ಎಂದು ಬರೆದುಕೊಂಡಿದ್ದಾರೆ.
ನಿಶಾ ನರಸಪ್ಪ ಸದಾಶಿವನಗರ ಹಾಗೂ ಯಲಹಂಕ ನ್ಯೂಟೌನ್​ನಲ್ಲಿ ಮೋಸ ಹೋದ ಪೋಷಕರು ಮತ್ತಷ್ಟು ವಂಚನೆ ಪ್ರಕರಣದ ದೂರು ದಾಖಲಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
