ಬೆಂಗಳೂರು:ಅಬಕಾರಿ ಸಚಿವ ಎಚ್​. ನಾಗೇಶ್ ಅವರ ನಿರ್ಧಾರಕ್ಕೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಬ್ರೇಕ್​ ಹಾಕಿದ್ದಾರೆ.
ಅಬಕಾರಿ ಇಲಾಖೆಯ ಪುನಾರಚನೆ ಹಾಗು ಸಿಬ್ಬಂದಿ ವರ್ಗಾವಣೆಯ ನಿರ್ಧಾರಕ್ಕೆ ಸಿಎಂ ಬಿಎಸ್​ವೈ ತಡೆ ನೀಡಿದ್ದಾರೆ. ಸಚಿವ ನಾಗೇಶ್ ನಿರ್ಧಾರದ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಹಣದ ವ್ಯವಹಾರ ಹಾಗೂ ಭಾರಿ ಲಾಬಿಯ ಶಂಕೆ ಇರುವ ಹಿನ್ನಲೆಯಲ್ಲಿ ಸಿಎಂ ಬ್ರೇಕ್ ಹಾಕಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ:ತಾಯಂದಿರ ದಿನವೇ ನಡೆಯಿತು ತಂದೆ-ತಾಯಿಯ ಭೀಕರ ಹತ್ಯೆ: ಮಗನೇಕೆ ಇಂಥ ನೀಚ ಕೆಲಸಕ್ಕೆ ಮುಂದಾದ?
ಎ, ಬಿ, ಸಿ ವರ್ಗ ಸೇರಿದಂತೆ 200ಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿಯನ್ನು ವರ್ಗಾವಣೆಗೊಳಿಸಲು ನಾಗೇಶ್ ಆದೇಶ ಮಾಡಿದ್ದರು. ಇದೀಗ ಈ ಆದೇಶವನ್ನು ತಡೆ ಹಿಡಿಯುವಂತೆ ಸಿಎಂ ಸೂಚನೆ ನೀಡಿದ್ದಾರೆ.
ಇಲಾಖೆಯನ್ನು ಪುನಾರಚನೆಗೊಳಿಸಿದರೆ ಹೊಸ ಹುದ್ದೆ ಸೃಷ್ಟಿಸ ಬೇಕಾಗುತ್ತದೆ. ಇದರಿಂದ ಆರ್ಥಿಕವಾಗಿಯೂ ಹೊರೆ ಬೀಳಲಿದೆ ಎಂದು ಸಚಿವ ನಾಗೇಶ್​ ಅವರ ಆದೇಶಕ್ಕೆ ಸಿಎಂ ಅಲ್ಪವಿರಾಮ ಇಟ್ಟಿದ್ದಾರೆ.(ದಿಗ್ವಿಜಯ ನ್ಯೂಸ್​​)
ಇದನ್ನೂ ಓದಿ:ನೆರವಿಗೆ ಮಿಡಿಯುತ್ತಿದೆ ತಾಯಿ ಹೃದಯ; ಪ್ರೀತಿಸಿ ಮದುವೆಯಾದವಳನ್ನು ಕ್ಯಾನ್ಸರ್ ಎಂದು ತಿಳಿದು ಬಿಟ್ಟುಹೋದ ಪತಿ
ರಾಯಚೂರಿನ ಮಾಜಿ ಸಂಸದ ರಾಜಾರಂಗಪ್ಪ ನಾಯಕ ನಿಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
