ಬೆಂಗಳೂರು:ಸ್ಯಾಂಡಲ್​​ವುಡ್​ನ ಕ್ಯೂಟ್ ಕಪಲ್​​ ಎಂದೆ ಗುರುತಿಸಿಕೊಳ್ಳುತ್ತಿದ್ದ ನಿವೇದಿತಾ ಗೌಡ ಹಾಗೂ ಚಂದನ್​ ಶೆಟ್ಟಿ 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯಹಾಡಿದ್ದಾರೆ. ಪತಿಯಿಂದ ವಿಚ್ಛೇದನ ಪಡೆದಿರುವ ನಿವೇದಿತಾ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಾರಾ ಎಂಬ ಚರ್ಚೆ ಶುರುವಾಗಿದ್ದು, ವಕೀಲರು ಖಾಸಗಿವಾಹಿನಿ ಸಂದರ್ಶನವೊಂದರಲ್ಲಿ ಉತ್ತರ ನೀಡಿದ್ದಾರೆ.

ಬಿಗ್​ ಬಾಸ್​ ಕನ್ನಡ ಸೀಸನ್​ 5’ ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್​ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿದ್ದರು. ನಂತರ ಇಬ್ಬರ ಸ್ನೇಹ ಪ್ರೀತಿಯಾಗಿ ತಿರುಗಿ ಇಬ್ಬರು 2020ರ ಫೆಬ್ರವರಿಯಲ್ಲಿ ಹಸೆಮಣೆ ಏರಿದ್ದರು. ಚಂದನ್ ಶೆಟ್ಟಿ ಸಿನಿಮಾ ಇಂಡಸ್ಟ್ರೀಯಲ್ಲಿ ಪತ್ನಿ ನಿವೇದಿತಾ ಗೌಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದರು. ಆದರೆ ಅದೇನಾಯ್ತೋ ಗೊತ್ತಿಲ್ಲ ಈ ಜೋಡಿ ನಿನ್ನೆ ಶಾಂತಿನಗರ ಕೋರ್ಟ್ ನಲ್ಲಿ ವಿಚ್ಛೇದನ ಪಡೆದುಕೊಂಡಿದ್ದಾರೆ.
ಇಬ್ಬರು ಪರಸ್ಪರ ಮಾತಾಡಿಕೊಂಡು ತಮ್ಮ ನಿರ್ಧಾರದ ಮೇರೆಗೆ ಡಿವೋರ್ಸ್​ ಪಡೆದಿದ್ದಾರೆ. ಕರಿಯರ್ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಆದರೆ ಇದೊಂದೆ ಕಾರಣಕ್ಕೆ ಈ ಜೋಡಿ ವಿಚ್ಛೇಧನಕ್ಕೆ ಮುಂದಾದ್ರಾ? ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಮಾಡುತ್ತಿದ್ದಾರೆ. ಅದೇನೆ ಆಗಲಿ ಇಬ್ಬರ ಪರಸ್ಪರ ಒಪ್ಪಿಗೆ ಸೂಚಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಶಾಂತಿನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ಈ ಜೋಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಪರಸ್ಪರ ಒಪ್ಪಿಗೆ ಮೇಲೆ ವಿಚ್ಛೇದನಕ್ಕೆ ಒಪ್ಪಿಗೆ ಸಲ್ಲಿಸಿದ್ದ ಕಾರಣ ಹಾಗೂ ಕಳೆದ ಆರು ತಿಂಗಳಿನಿಂದಲೂ ‘ಪತಿ-ಪತ್ನಿ ರೀತಿ’ ಸಹಬಾಳ್ವೆ ನಡೆಸದ ಕಾರಣ ನ್ಯಾಯಾಲಯವು ಇವರಿಗೆ ವಿಚ್ಛೇದನ ನೀಡಿದೆ. ಸಾಮಾನ್ಯವಾಗಿ ವಿಚ್ಛೇದನ ಎಂದೊಡನೆ ಜೀವನಾಂಶದ ವಿಷಯ ಮುನ್ನಲೆಗೆ ಬರುತ್ತದೆ. ಹಿಂದೂ ವಿವಾಹ ಕಾಯ್ದೆಯಲ್ಲಿ ವಿಚ್ಛೇದಿತ ಪತ್ನಿಗೆ ಪತಿ ಜೀವನಾಂಶ ನೀಡಬೇಕಾಗಿರುತ್ತದೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ, ತಮ್ಮ ವಿಚ್ಛೇದನದ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ. ಇಬ್ಬರೂ ಸಹ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಪರಸ್ಪರರ ಖಾಸಗಿ ಜೀವನವನ್ನು ಗೌರವಿಸಿ ಎಂದಷ್ಟೆ ಮನವಿ ಮಾಡಿದ್ದಾರೆ.

ಚಂದನ್-ನಿವೇದಿತಾರ ವಿಚ್ಛೇದನದ ಕುರಿತು ಖಾಸಗಿವಾಹಿನಿ ಜತೆಗೆ ಮಾತನಾಡಿರುವ ವಕೀಲೆ ಅನಿತಾ, ವಿಚ್ಛೇದನದ ಕುರಿತಾಗಿ ಹಲವು ವಿಷಯಗಳನ್ನು ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ಜೊತೆಗೆ ಜೀವನಾಂಶದ ಬಗ್ಗೆಯೂ ಮಾತನಾಡಿದ್ದಾರೆ.
ವಕೀಲೆ ಅನಿತಾ ಹೇಳಿರುವಂತೆ, ನಟಿ ನಿವೇದಿತಾ ಗೌಡ ಯಾವುದೇ ರೀತಿಯ ಜೀವನಾಂಶಕ್ಕೆ ಬೇಡಿಕೆಯನ್ನೇ ಇಟ್ಟಿಲ್ಲ. ಹಾಗಾಗಿ ಚಂದನ್ ಶೆಟ್ಟಿ, ನಿವೇದಿತಾಗೆ ಯಾವುದೇ ವಿಧವಾದ ಜೀವನಾಂಶವನ್ನು ನೀಡುವ ಅವಶ್ಯಕತೆ ಇಲ್ಲ. ಇಬ್ಬರದ್ದೂ ಸಹ ಪರಸ್ಪರ ಒಪ್ಪಿಗೆ ವಿಚ್ಛೇದನ ಆಗಿರುವ ಕಾರಣ, ನಿವೇದಿತಾ, ಜೀವನಾಂಶಕ್ಕೆ ಬೇಡಿಕೆ ಇಟ್ಟಿಲ್ಲ. ವಕೀಲೆ ಅನಿತಾ ಹೇಳಿರುವಂತೆ, ಇಬ್ಬರೂ ಸಹ ದುಡಿಯುತ್ತಿರುವವರು, ಹಾಗಾಗಿ ಇನ್ನೊಬ್ಬರ ಹಣದ ಅವಶ್ಯಕತೆ ಇಬ್ಬರಿಗೂ ಇಲ್ಲ’ ಎಂದಿದ್ದಾರೆ.

ಸೆಲೆಬ್ರಿಟಿಗಳ ವಿಷಯದಲ್ಲಿ ಜೀವನಾಂಶದ ಮೊತ್ತ ಹೆಚ್ಚಿರುತ್ತದೆ ಎನ್ನಲಾಗುತ್ತದೆ. ಕೆಲವು ಸೆಲೆಬ್ರಿಟಿಗಳು ಭಾರಿ ಮೊತ್ತದ ಜೀವನಾಂಶ ಕೊಟ್ಟಿದ್ದು ಸಹ ಇದೆ. ಇದೇ ಕಾರಣಕ್ಕೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ವಿಚಾರದಲ್ಲಿಯೂ ಜೀವನಾಂಶದ ಬಗ್ಗೆ ಕುತೂಹಲವಿದೆ…
ಇದೊಂದೇ ಕಾರಣಕ್ಕೆ ದಾಂಪತ್ಯ ಜೀವನಕ್ಕೆ ಗುಡ್‌ ಬೈ ಹೇಳಿದ್ರಾ ನಿವೇದಿತಾ ಗೌಡ, ಚಂದನ್‌ ಶೆಟ್ಟಿ?; ಪ್ರಶ್ನೆ ಮಾಡಿದ ಫ್ಯಾನ್ಸ್​

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:five − one =
Remember me
