ಬೆಂಗಳೂರು:ಲೋಕಸಭಾ ಚುನಾವಣೆ ಮತದಾನ ಪೂರ್ವ ಸಮೀಕ್ಷೆ ಮತ್ತು ಮತದಾನೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ಅಂದಾಜಿಸಿದ್ದವು. ಆದರೆ, ಅವುಗಳ ನಿರೀಕ್ಷೆ ಹುಸಿಯಾಗಿದೆ. ಆದರೆ, ರಾಜಗುರು ದ್ವಾರಕಾನಾಥ್ ಅವರು ನುಡಿದಿದ್ದ ಚುನಾವಣಾ ಭವಿಷ್ಯ ನಿಜವಾಗಿದೆ. ಹೊಸವರ್ಷದ ಹೊಸ್ತಿಲಲ್ಲಿ ಮತ್ತು ಯುಗಾದಿ ಸಂದರ್ಭದಲ್ಲಿ ಅವರು ವಿಜಯವಾಣಿಗೆ ನೀಡಿದ ವರ್ಷ ಭವಿಷ್ಯದಲ್ಲಿ ಈ ಅಂಶ ಉಲ್ಲೇಖಿಸಿದ್ದರು. ಕ್ರೋಧಿ ನಾಮ ಸಂವತ್ಸರ ಹಾಗೂ ಗ್ರಹಗತಿಗಳ ಬದಲಾವಣೆಯಿಂದ ರಾಷ್ಟ್ರದಲ್ಲಿ ಪ್ರಜೆ ಸುಖಪಡಲ್ಲ. ಪ್ರಜೆಗಳಲ್ಲಿ ಗೊಂದಲ ಇರಲಿದೆ. ಇಡೀ ಭಾರತಾದ್ಯಂತ ಸಂಘರ್ಷ, ರಾಜಕೀಯ ಕಲಹಗಳು ಮುಂದುವರಿಯುತ್ತವೆ ಎಂದಿದ್ದರು.
‘ಮುಖ್ಯವಾಗಿ ಕುಜ- ಶನಿ ಸಮಾಗಮದ ಪರಿಣಾಮ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷ ಪುನಃ ಗೆಲ್ಲಲು ಸಾಕಷ್ಟು ಕಷ್ಟಪಡಬೇಕಾಗುತ್ತದೆ. 400 ಸ್ಥಾನ ಗೆಲ್ಲುವುದು ಕನಸಿನ ಮಾತು. 240 ಸ್ಥಾನ ಗೆದ್ದರೂ ಹೆಚ್ಚು. ಮೈತ್ರಿ ಪಕ್ಷಗಳ ಸಹಕಾರದಿಂದಲೇ ಸರ್ಕಾರ ರಚಿಸಬೇಕಾಗುವ ವಾತಾವರಣ ನಿರ್ವಣವಾಗುತ್ತದೆ. ಹಾಗೆಯೇ ಕಳೆದ 10 ವರ್ಷದಲ್ಲಿ ಆಡಳಿತ ನಡೆಸಿದಂತೆ ಮುಂದೆ ಪರಿಸ್ಥಿತಿ ಇರುವುದಿಲ್ಲ. ಆಡಳಿತಾರೂಢ ಪಕ್ಷಕ್ಕೆ ಮಧ್ಯಪ್ರದೇಶ, ರಾಜಸ್ಥಾನ ಗೆದ್ದಂತಲ್ಲ, ಸ್ಪಷ್ಟತೆ ಕಾಣಿಸುತ್ತಿಲ್ಲ. ‘ನೀನೊಂದು ಬಗೆದರೆ ದೈವ ಬಗೆವುದು ಬೇರೊಂದು ಎಂಬಂತಾಗಲಿದೆ’ ಎಂದು ಹೇಳಿದ್ದರು. ಬಿಜೆಪಿಯಲ್ಲಿ ಗುಂಪುಗಾರಿಕೆ ಶುರುವಾಗಲಿದೆ. ನಿತಿನ್ ಗಡ್ಕರಿ ಮಹತ್ವದ ಪಾತ್ರ ವಹಿಸುತ್ತಾರೆ. ಈ ಚುನಾವಣೆ ನಡೆದು ಗೆದ್ದರೂ ನಂತರ ನಡೆಯುವ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಲಿದೆ. ಮಹಾರಾಷ್ಟ್ರದಲ್ಲಿ ಪುನಃ ಬಿಜೆಪಿಗೆ ಹೆಚ್ಚು ಸ್ಥಾನ ಸಿಗಲ್ಲ ಎಂದೂ ಅವರು ವರ್ಷಭವಿಷ್ಯದಲ್ಲಿ ಉಲ್ಲೇಖಿಸಿದ್ದರು.\

ಮೋದಿ ಇನ್ನೆಷ್ಟು ದಿನ?:ನರೇಂದ್ರ ಮೋದಿ ಮುಂದೆ ಪ್ರಧಾನಿ ಆಗುತ್ತಾರೆ. ಆದರೆ, ಅಷ್ಟು ಸುಲಭವಾಗಿ ಮುಂದಿನ ಸರ್ಕಾರ ಮಾಡಲು ಆಗಲ್ಲ, ನಡೆಸುವುದಕ್ಕೂ ಆಗಲ್ಲ. ಹತ್ತು ವರ್ಷ ಕಳೆದವರಿಗೆ ಮುಂದಿನ ಐದು ವರ್ಷ ಕಳೆಯುವುದು ಕಷ್ಟ. ಪ್ರಜೆಗಳಲ್ಲಿ ಕ್ರೋಧ ಉಂಟಾಗುತ್ತದೆ. ಯಾರಿಂದ ಅವಕಾಶ ಪಡೆದುಕೊಂಡಿದ್ದರೋ ಅವರ ವಿರೋಧ ಎದುರಿಸಬೇಕಾಗುತ್ತದೆ. ಯಾರನ್ನು ನಂಬಿದ್ದರೋ ಅವರೇ ಎದುರಾಗುತ್ತಾರೆ. ಮೋದಿ 2026ರವರೆಗೂ ಇರಬಹುದು. ಕುಜ- ಶನಿ ಒಂದು ಮನೆಗೆ ಬಂದ ಕೂಡಲೇ ಬದಲಾವಣೆ ಖಚಿತ ಎಂದು ಭವಿಷ್ಯ ನುಡಿದಿದ್ದರು.
ಡಿಕೆ ಸುರೇಶ್‌ ವಿರುದ್ಧ ಗೆಲುವಿನ ಸೀಕ್ರೆಟ್ ಬಿಚ್ಚಿಟ್ಟ ಡಾ.ಸಿ.ಎನ್‌. ಮಂಜುನಾಥ್‌!

ಸತತ ಮೂರನೇ ಬಾರಿಗೆ ಎನ್​​ಡಿಎ ಸರ್ಕಾರ ರಚಿಸಲಿದೆ: ಗೆಲುವು ಕೊಟ್ಟ ದೇಶವಾಸಿಗಳಿಗೆ ಮೋದಿ ಧನ್ಯವಾದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 9 =
Remember me
